ವಸತಿ ನಿಲಯ ವಿದ್ಯಾರ್ಥಿನಿಯರಿಂದ ರಾಸ್ತಾರೋಕೊ..!
ಎಬಿವಿಪಿ ವಿಧ್ಯಾರ್ಥಿಗಳಿಂದ ರಸ್ತೆ ರುಖೋ..! ಕಾರಣ ಗೊತ್ತಾ..?
ಇಂಡಿ : ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಮೆಟ್ರಿಕ್ ನಂತರದ ಹಿಂದುಳಿದ ವರ್ಗದ ವಸತಿನಿಲಯದ ಬಾಲಕಿಯರು ವಸತಿ ನಿಲಯ ಎದುರಿಗೆ ವಿಜಯಪುರ ರಸ್ತೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿ ಘಟಕದ ನೇತೃತ್ವದ ಅಡಿ ರಾಸ್ತಾರೋಕೊ ಮಾಡಿದರು.
ವಸತಿ ನಿಲಯದಲ್ಲಿ ಕಳೆದ ಎಂಟು ದಿನಗಳಿಂದ ನೀರು ಬಂದಿಲ್ಲ. ವಸತಿ ನಿಲಯದಲ್ಲಿ ಸ್ವಚ್ಛತೆ ಎಂಬುದು ಇಲ್ಲ. ಅಡುಗೆ ಮನೆಯಲ್ಲಿಯೇ ಊಟ ಮಾಡಿ ಉಳಿದಿದ್ದು ಅಲ್ಲಿಯೇ ಒಗೆಯುತ್ತಾರೆ. ತಾಟುಗಳಲ್ಲಿ ಉಳಿದಿದ್ದು ಅಲ್ಲಯೇ ಹಾಕಿ ತೊಳೆಯುತ್ತಾರೆ. ಹೀಗಾಗಿ ಅಡುಗೆ ಮನೆ ಹೊಲಸು ನಾರುತ್ತಿರುತ್ತದೆ. ಅಹಾರ ದಾನ್ಯಗಳು ಮತ್ತು ತರಕಾರಿ ಸಾಮಗ್ರಿಗಳು ಕಳಪೆ ಮಟ್ಟದಿಂದ ಕೂಡಿರುತ್ತವೆ. ಕೆಲವೊಂದು ಅಹಾರ ಧ್ಯಾನ್ಯಗಳಲ್ಲಿ ನುಸಿ ಮತ್ತು ಕಿಡೆಗಳಿದ್ದರೂ ಹಾಗೇ ಸ್ವಚ್ಛ ಮಾಡದೆ ಅಡುಗೆ ಮಾಡುತ್ತಾರೆ. ಸ್ನಾಹ ಗೃಹಗಳು ಸ್ವಚ್ಛತೆಯಿಂದ ಕೂಡಿಲ್ಲ. ಸ್ವಚ್ಛ ಮಾಡಲು ವಸತಿ ನಿಲಯದ ಅಧಿಕಾರಿಗಳಿಗೆ ತಿಳಿಸಿದರೆ ನಿವೇ ಸ್ವಚ್ಛ ಮಾಡಿಕೊಳ್ಳಿ ಎಂದು ಉತ್ತರಿಸುತ್ತಾರೆ ಎಂದರು.
ವಸತಿ ನಿಲಯದ ಮೇಲ್ವಿಚಾರಕರು ಸರಿಯಾಗಿ ಬರುವದಿಲ್ಲ. ಎಲ್ಲವೂ ಕೆಲಸ ಮಾಡುವವರದೇ ಕಾರುಬಾರು. ವಸತಿ ನಿಯಲಕ್ಕೆ ಯಾರು ಬರುತ್ತಾರೆ ಹೋಗುತ್ತಾರೆ ಎಂಬುದಕ್ಕೆ ಏನೂ ವ್ಯವಸ್ಥ ಇಲ್ಲ ಎಂದು ಆರೋಪಿಸಿದರು.
ರಾಸ್ತಾ ರೋಕೊದಿಂದ ವಿಜಯಪುರಕ್ಕೆ ಹೋಗುವವರಿಗೆ ತೊಂದರೆ ಉಂಟಾಯಿತು. ಪೋಲಿಸ ವಿಭಾಗದವರು ಬಂದು ವಾಹನಗಳಿಗೆ ಅರ್ಧ ದಾರಿ ಅನುಕೂಲ ಮಾಡಿಕೊಟ್ಟರು.
ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ ಮಂಜುಳಾ ನಾಯಕ, ಉಪ ತಹಸೀಲ್ದಾರ ಧನಪಾಲಶೆಟ್ಟಿ,ಸುರೇಶ ಮ್ಯಾಕೇರಿ ಆಗಮಿಸಿ ವಸತಿ ನಿಲಯಕ್ಕೆ ಭೇಟಿ ನೀಡಿದರು.
ವಸತಿ ನಿಲಯ ಮೇಲ್ವಿಚಾರಕರು ರಜೆಯ ಮೇಲಿರುವದಾಗಿ ತಿಳಿಸಿದರು. ಬಿಸಿಎಂ ಅಧಿಕಾರಿ ಮಠಪತಿ ಇವರಿಗೆ ಫೋನು ಮೂಲಕ ಸಂಪರ್ಕಿಸಿದಾಗ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇರುವದರಿಂದ ಎರಡು ದಿನದಲ್ಲಿ ಎಲ್ಲವೂ ಸರಿಪಡಿಸುವದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಅಂಬಿಕಾ ಸಂಗೋಗಿ, ಭಾಗ್ಯಶ್ರೀ ಡೊಳ್ಳಿ, ಲಕ್ಷ್ಮೀ ಮಾನೆ, ದಾನಮ್ಮ ಉಕ್ಕಲಿ, ಪ್ರಿಯಾಂಕಾ ನರಳೆ,ಪೂಜಾ ಕಳಸದ, ಜಾನು ನಾಯ್ಕೋಡಿ ಮತ್ತಿತರಿದ್ದರು.