ತಾಳಿಕೋಟಿ : ಟ್ರ್ಯಾಕ್ಟರ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿರುವ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ದೇವರ ಹುಲಗಬಾಳ ಹಾಗೂ ಗುಡ್ನಾಳ ರಸ್ತೆಯಲ್ಲಿ ನಡೆದಿದೆ.
ಮುದ್ದೇಬಿಹಾಳದ ಹಣಮಂತ ಭಜಂತ್ರಿ, ಗುಂಡಪ್ಪ ತಿಪ್ಪಣ್ಣ ಬಜಂತ್ರಿ ಗಾಯಗೊಂಡ ಬೈಕ್ ಸವಾರರು. ಗಾಯಾಳುಗಳನ್ನು ಆಂಬ್ಯೂಲೆನ್ಸ್ ಮೂಲಕ ಮುದ್ದೇಬಿಹಾಳದ ತಾಲೂಕು ಆಸ್ಪತ್ರೆಗೆ ಕಳುಹಿಸಲಾಗಿದೆ. ಅಪಘಾತಕ್ಕೆ ಎರಡು ವಾಹನಗಳ ಅತೀ ವೇಗವೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.