T20 ICC World CUP : 2024 ವಿಶ್ವಕಪ್ ಲಾಂಛನ ಅನಾವರಣ
Voice OF Janata DesK Sports News ದುಬೈ: ಮುಂದಿನ ವರ್ಷ 2024 ಜೂನ್‌ನಲ್ಲಿ ಶುರುವಾಗಲಿರುವ ಟಿ20 ವಿಶ್ವಕಪ್‌ಗಾಗಿ ಐಸಿಸಿ ಹೊಸ ಲೋಗೊವನ್ನು ಅನಾವರಣಗೊಳಿಸಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯವಹಿಸಲಿರುವ ಪುರುಷರ ಹಾಗೂ ಟಿ20 ವಿಶ್ವಕಪ್ ಬಾಂಗ್ಲಾದೇಶದಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್‌ಗೆ ಒಂದೇ ವಿನ್ಯಾಸದ ಲಾಂಛನ ಬಳಸಿರುವುದು ವಿಶೇಷವಾಗಿದೆ.
ನವೀಕೃತ ಲಾಂಛನದಲ್ಲಿ ಬ್ಯಾಟ್, ಬಾಲ್ ಮತ್ತು ಎರ್ನಜಿಯನ್ನು ಸಂಕೇತಿಸುವ ಚಿಹ್ನೆಗಳನ್ನು ಬಳಸಲಾಗಿದ್ದು, ಈ ಮೂಲಕ ಉತ್ಸಾಹಭರಿತ ಟಿ20 ವಿಶ್ವಕಪ್ ಅನ್ನು ಪ್ರತಿಬಿಂಬಿಸಲಾಗಿದೆ. ಈ ಲೋಗೊ ವಿನ್ಯಾಸದ ಅನವಾರಣದ ವಿಡಿಯೋವನ್ನು ಐಸಿಸಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಕ್ರಿಕೆಟ್ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಜೂನ್ 4, 2024 ರಿಂದ ಜೂನ್ 30 ರವರೆಗೆ ಟಿ20 ವಿಶ್ವಕಪ್ ಜರುಗಲಿದೆ. 20 ತಂಡಗಳು ಕಣಕ್ಕಿಳಿಯಲಿರುವ ಈ ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳನ್ನಾಡಲಾಗುತ್ತದೆ.
ಈ ಬಾರಿ 20 ತಂಡಗಳಿರುವ ಕಾರಣ 4 ಗುಂಪುಗಳನ್ನಾಗಿ ಮಾಡಲಾಗುತ್ತದೆ. ಇಲ್ಲಿಒಂದು ಗುಂಪಿನಲ್ಲಿ 5 ತಂಡಗಳಿರಲಿವೆ. ಪ್ರತಿ ಗ್ರೂಪ್ನಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ಎಂಟು ತಂಡಗಳು ಸೂಪರ್-8 ಪಂದ್ಯಗಳನ್ನಾಡಲಿದೆ. ಇನ್ನು ಸೂಪರ್- 8 ರಲ್ಲಿ ಕಣಕ್ಕಿಳಿಯುವ 8 ತಂಡಗಳಲ್ಲಿ
MEN’S T20 WORLD CUP
ICC T20 WORLD CUP 2024
USA CRICKET
ಅಗ್ರ-ನಾಲ್ಕರರಲ್ಲಿ ಕಾಣಿಸಿಕೊಳ್ಳುವ ಟೀಮ್ಗಳು ಸೆಮಿಫೈನ ಪ್ರವೇಶಿಸುತ್ತದೆ. ಇದಾದ ಬಳಿಕ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿದೆ.
2022 ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಪಾಕಿಸ್ತಾನ್ ತಂಡಕ್ಕೆ ಸೋಲುಣಿಸಿ ಇಂಗ್ಲೆಂಡ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ವಿಶೇಷ ಎಂದರೆ ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದೀಗ 9ನೇ ಆವೃತ್ತಿಯಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆಯಾ ಕಾದು ನೋಡಬೇಕಿದೆ.