Voice Of Janata DesK News T20 4th Match
ರಾಯ್‌ಪುರ : ಒಂದು ಪಂದ್ಯ ಬಾಕಿ ಇರುವಾಗಲೇ ಟಿ 20 ಸರಣಿ ಭಾರತ ವಶ ಪಡಿಸಿಕೊಂಡಿದೆ. ಹೌದು
ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತ ತಂಡ ನಾಲ್ಕನೇ ಟಿ20 ಪಂದ್ಯದಲ್ಲಿ 20 ರನ್‌ಗಳ ಗೆಲುವು ದಾಖಲಿಸಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ 5 ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಲ್ಲಿ ವಶ ಪಡಿಸಿಕೊಂಡಿತು. ನಾಯಕನಾಗಿ ಸೂರ್ಯಕುಮಾರ್ ಯಾದವ್‌ಗೆ ಮೊದಲ ಟಿ20 ಸರಣ ಜಯ ಒದಾಗಿದೆ.
ಶುಕ್ರವಾರ ರಾಯ್‌ಪುರದ “ಶಹೀದ್ ವೀರ್ ನಾರಾಯಣ್ ಸ್ಟೇಡಿಯಂ’ನಲ್ಲಿ ಕ್ರಿಕೆಟ್ ರಾಯಭಾರ ನಡೆಸಿದ ಭಾರತ, ಪ್ರವಾಸಿ ಆಸ್ಟ್ರೇಲಿಯ ಎದುರಿನ ಟಿ20 ಸರಣಿಯನ್ನು ವಶಪಡಿಸಿಕೊಂಡು ಸಂಭ್ರಮಿಸಿತು. ಸರಣಿಯ ಈ 4ನೇ ಪಂದ್ಯವನ್ನು 20 ರನ್ನುಗಳಿಂದ ಗೆದ್ದು 3-1 ಮುನ್ನಡೆ ಸಾಧಿಸಿತು.
ಇನ್ನೂ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 9 ವಿಕೆಟಿಗೆ 174 ರನ್ ಬಾರಿಸಿ ಸವಾಲೊಡ್ಡಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 7 ವಿಕೆಟಗೆ 154 ರನ್ ಮಾಡಿ ಶರಣಾಯಿತು. 5ನೇ ಹಾಗೂ ಅಂತಿಮ ಪಂದ್ಯ ರವಿವಾರ ಬೆಂಗಳೂರಿನಲ್ಲಿ ನಡೆಯಲಿದೆ.
ಸ್ಕೋರ್ ವಿವರ
ಭಾರತ: 20 ಓವರ್‌ಗಳಿಗೆ 174-9 (ರಿಂಕು ಸಿಂಗ್ 46, ಯಶಸ್ವಿ ಜೈಸ್ವಾಲ್ 37, ಜಿತೇಶ್ ಶರ್ಮಾ 35, ಋತುರಾಜ್ ಗಾಯಕ್ವಾಡ್ 32; ಬೆನ್ ದ್ವಾರ್ಶುಯಿಸ್ 40ಕ್ಕೆ 3, ಜೇಸನ್ ಬೆಹ್ರನ್‌ಡಾರ್ಫ್ 32ಕ್ಕೆ 2, ತನ್ವೀರ್ ಸಂಘ 30ಕ್ಕೆ 2)
ಆಸ್ಟ್ರೇಲಿಯಾ: 20 ಓವರ್‌ಗಳಿಗೆ 154 (ಮ್ಯಾಥ್ಯೂ ವೇಡ್ 36, ಟ್ರಾವಿಸ್ ಹೆಡ್ 31; ಅಕ್ಷರ್ ಪಟೇಲ್ 13ಕ್ಕೆ 3, ದೀಪಕ್ ಚಹರ್ 44ಕ್ಕೆ 2, ರವಿ ಬಿಷ್ಣೋಯ್ 17 ಕ್ಕೆ 1,