ಸಿರಗುಪ್ಪ: ಕಬ್ಬಿಣದ ಜಿಲ್ಲೆ ಎಂದು ಪ್ರಖ್ಯಾತಿ ಪಡೆದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನಲ್ಲಿ ರಾಜಕೀಯ ಹೊಸ ಕ್ರಾಂತಿಗಾಗಿ ಹಾಗೂ ಬದಲಾವಣೆಗಾಗಿ ತಾಲ್ಲೂಕಿನ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಆಮ್ ಆದ್ಮಿ ಪಕ್ಷದ ಸೇರ್ಪಡೆ ಕಾರ್ಯಕ್ರಮ ನಡೆಯಿತು.
ಹಲವಾರು ವರ್ಷಗಳಿಂದ ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಕೊಂಡು ಜನಸೇವೆ ಮಾಡುತ್ತಿರುವ ಟಿ ಧರಪ್ಪ ನಾಯಕ್ ರವರು AAPಯ ರಾಜ್ಯ ಸಹ ಸಂಚಾಲಕರಾದ ವಿಜಯಶರ್ಮಾ ಅವರ ನೇತೃತ್ವದಲ್ಲಿ ನೂರಕ್ಕು ಹೆಚ್ಚು ಕಾರ್ಯಕರ್ತರು ಆಮ್ ಆದ್ಮಿ ಪಾರ್ಟಿ ಸೇರಿದರು.
ಈ ಸಂದರ್ಭದಲ್ಲಿ ರಾಜ್ಯ ಮಟ್ಟ, ಜಿಲ್ಲಾ ಮಟ್ಟ ಹಾಗೂ ತಾಲ್ಲೂಕ ಮಟ್ಟದ ಗಣ್ಯ ವ್ಯಕ್ತಿಗಳು ಪಾಲ್ಗೊಂಡಿದ್ದರು.