ರಾಣಿ ಚನ್ನಮ್ಮ ಶೌರ್ಯದ ಪ್ರತೀಕ: ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ
ವಿಜಯಪುರ, ಅಕ್ಟೋಬರ್ 23 : ವೀರ ರಾಣಿ ಕಿತ್ತೂರು ಚೆನ್ನಮ್ಮ ಇತಿಹಾಸದ ಪುಟಗಳಲ್ಲಿ ಶೌರ್ಯದ ಪ್ರತೀಕವಾಗಿ ಗುರುತಿಸಲ್ಪಟ್ಟ ವೀರ ಮಹಿಳಾ ಹೋರಾಟಗಾರ್ತಿ. ಬ್ರಿಟೀಷರ ವಿರುದ್ಧ ಸಮರಸಾರಿ ಇಡೀ ದೇಶವೇ ಸ್ವಾತಂತ್ರ ಸಂಗ್ರಾಮಕ್ಕೆ ದುಮ್ಮಿಕ್ಕುವಂತೆ ಪ್ರೇರಣೆ ನೀಡಿದ ರಾಣಿ ಚೆನ್ನಮ್ಮಳ ಇತಿಹಾಸ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ನಡೆದ ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆಯ ವಿರುದ್ಧ ಹೋರಾಟ ಮಾಡಿ, ಸಹಾಯಕ ಸೈನ್ಯ ಪದ್ಧತಿಯನ್ನು ತಿರಸ್ಕರಿಸಿದ ಚೆನ್ನಮ್ಮಳ ದೈರ್ಯ, ಸಾಹಸಗಾಥೆಗಳನ್ನು ಇಂದಿನ ಹೆಣ್ಣುಮಕ್ಕಳು ಅರಿಯಬೇಕು. ಇತಿಹಾಸ ಅರಿತವರು ಇತಿಹಾಸ ನಿರ್ಮಿಸುತ್ತಾರೆ ಎಂಬಂತೆ ಇಂದಿನ ಪೀಳಿಗೆಗೆ ಚೆನ್ನಮ್ಮಳ ಇತಿಹಾಸದ ಪರಿಚಯ ಮಾಡಿಸುವುದು ಅತ್ಯವಶ್ಯಕವಾಗಿದೆ. ಚೆನ್ನಮ್ಮ ಒಳ್ಳೆಯ ಆಡಳಿತದ ಜೊತೆಗೆ, ಸಂಸ್ಥಾನದ ಅಭಿವೃದ್ಧಿ ಜೊತೆಗೆ ಜನರ ಕಷ್ಟಕಾರ್ಪಣ್ಯಗಳನ್ನು ದೂರಮಾಡಲು ಶ್ರಮಿಸಿದರು. ಅನೇಕ ಜನಪದ ಲಾವಣಿಗಳಲ್ಲಿ ಕಿತ್ತೂರ ರಾಣಿ ಚೆನ್ನಮ್ಮಳ ಸಾಹಸಗಾಥೆ, ಜೀವನ ಚರಿತ್ರೆ ಇಂದಿಗೂ ಜನಮಾನಸದಲ್ಲಿ ನೆಲೆನಿಂತಿವೆ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಮಾತನಾಡಿ, ಬಾಲ್ಯದಲ್ಲಿಯೇ ಬಿಲ್ಲುಬಾಣ, ಕುದುರೆ ಸವಾರಿ, ಕತ್ತಿವರಸೆಯಂತಹ ಯುದ್ಧಕಲೆ ಕಲಿತ ಚೆನ್ನಮ್ಮ ತಾಯ್ನಾಡಿನ ರಕ್ಷಣೆಗೆ ಬ್ರಿಟಿಷರು ನೀಡಿದ ಸಂಕಷ್ಟದ ಸರಮಾಲೆಗಳನ್ನು ದಿಟ್ಟತನದಿಂದ ಎದುರಿಸಿ ಹೋರಾಟ ಮಾಡಿದ ಧೀರ ಮಹಿಳೆ. ದೇಶ ರಕ್ಷಣೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟು ಹಗಲಿರುಳು ದುಡಿದ ಮಹನೀಯರ ಸ್ಮರಣೆ ಹಾಗೂ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ಅವರು ಹೇಳಿದರು.
ಅಂಜುಮನ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಉಜ್ವಲ ಸರನಾಡಗೌಡ ಉಪನ್ಯಾಸ ನೀಡಿ, ಇಂದು ಜಯಂತಿ ಜೊತೆಗೆ ಬ್ರೀಟಿಷರ ವಿರುದ್ಧ ನಡೆದ ಯುದ್ಧದ 200ನೇ ವಿಜಯೋತ್ಸವ ಆಚರಿಸಲಾಗುತ್ತಿದೆ.
ಪರಕೀಯರ ದಾಸ್ಯದ ವಿರುದ್ಧ ನಡೆದ ಹೋರಾಟ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ದಾಖಲಾಗಿದೆ. ಕಿತ್ತೂರ ರಾಣಿ ಚೆನ್ನಮ್ಮಳು ಬೆಳಗಾವಿಯ ಕಾಕತಿಯಲ್ಲಿ ಅಕ್ಟೋಬರ್ 23 1778ರಲ್ಲಿ ಜನಿಸಿದರು. ತಂದೆ ಧೂಳಪ್ಪಗೌಡರಿಂದ ಯುದ್ಧಕಲೆಯಗಳನ್ನು ಕಲಿತುಕೊಂಡಿದ್ದರು. ದೇಸಾಯಿ ಮನೆತದ ಮಲ್ಲಸರ್ಜರ ಜೊತೆಗೆ ಅವರ ವಿವಾಹ ನಡೆಯಿತು. ಪತಿ, ಮಗನ ಸಾವಿನ ನಂತರ ದತ್ತುಕ ಪುತ್ರನಿಗೆ ಅಧಿಕಾರದ ಹೊಣೆ ನೀಡಲಾಯಿತು. ಈ ವೇಳೆ ಬ್ರಿಟಿಷರು ದತ್ತು ಪುತ್ರನಿಗೆ ಹಕ್ಕಿಲ್ಲ ಎಂಬ ಕಾಯ್ದೆ ತಂದಿದ್ದರು. ಅದರ ವಿರುದ್ಧ ಸೆಣಸಾಡಿದರು. ಸ್ವಜನದ್ರೋಹಿಗಳು ಹೋರಾಟದ ವೇಳೆ ತುಪಾಕಿಗಳಿಗೆ ಸಗಣಿ, ಮಣ್ಣು ಬೆರೆಸಿದ್ದರಿಂದ ಮದ್ದುಗುಂಡುಗಳು ಸಿಡಿಯದೇ ಹೋರಾಟದಲ್ಲಿ ಸೋಲಬೇಕಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಮುಖಂಡ ಬಿ.ಎಂ. ಪಾಟೀಲ ಉಪಸ್ಥಿತರಿದ್ದರು. ಶ್ರೀಮತಿ ಅಶ್ವಿನಿ ಹಿರೇಮಠ ತಂಡದಿAದ ಸುಗಮ ಸಂಗೀತ ನಡೆಯಿತು. ಎಚ್.ಎ. ಮಮದಾಪೂರ ನಿರೂಪಣೆ ಮಾಡಿದರು.
ಮೆರವಣಿಗೆ
ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಚಾಲನೆ ನೀಡಿದರು.
ವಿವಿಧ ವಾಧ್ಯಮೇಳ ಕಲಾತಂಡಗಳ ಜೊತೆಗೆ ಮೆರವಣಿಗೆ ನಗರದ ಲಾಲ್ ಬಹದ್ದೂರು ಶಾಸ್ತಿç ಮಾರುಕಟ್ಟೆ ರಸ್ತೆಯ ಮಾರ್ಗವಾಗಿ, ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್. ಅಂಬೇಡ್ಕರ ವೃತ್ತ, ಕನಕದಾಸ ವೃತ್ತದ ಮೂಲಕ ರಂಗಮಂದಿರ ತಲುಪಿತು.
ಈ ಸಂದರ್ಭ ವಿವಿಧ ಸಮಾಜದ ಮುಖಂಡರುಗಳಾದ ಗೀತಾಂಜಲಿ ಪಾಟೀಲ, ಡಾ.ಸುರೇಶ ಬಿರಾದಾರ, ಡಾ. ಮಿನಾಕ್ಷಿ ಪಾಟೀಲ, ವಿದ್ಯಾವತಿ ತುಂಗಳ, ವಿದ್ಯಾವತಿ ಅಂಕಲಗಿ, ಈರಣ್ಣ ಹಿಪ್ಪರಗಿ, ಎಸ್.ಐ. ಬಿರಾದಾರ, ಆರ್.ಡಿ. ಸಾರವಾಡ, ಎಸ್.ವಿ. ಪಾಟೀಲ, ಆರ್.ಡಿ. ದೇಸಾಯಿ, ಎಮ್.ಎಸ್. ಹಾಲಹಳ್ಳಿ, ಗುರುಶಾಂತ ನಿಡೋಳ್ಳಿ, ನಿಂಗಪ್ಪ ಸಂಗಾಪೂರ, ಮಹಾದೇವಿ, ಲಲಿತಾ ಬಿರಾದಾರ, ಶೋಭಾ ಬಿರಾದಾರ, ಗಂಗೂ ಬಿರಾದಾರ, ಜ್ಯೋತಿ ಪಾಗದ, ಬಸಮ್ಮ ಗುಜರಿ, ಎಂ.ಎA.ಪಾಟೀಲ, ಸೋಮನಗೌಡ ಕಲ್ಲೂರ, ಬೀಮರಾಯ ಜಿಗಜಿಣಗೆ, ದೇವೆಂದ್ರ ಮೆರೆಕಾರ ಉಪಸ್ಥಿತರಿದ್ದರು.