ಡಿ-10 ರಂದು ಸುವರ್ಣ ಸೌಧ ಮುತ್ತಿಗೆ, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕರೆ : ಯುವ ಮುಖಂಡ ಈರಣ್ಣ
ಇಂಡಿ : ಡಿಸೆಂಬರ್ 10 ರಂದು ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ನಡೆಸುತ್ತಿರುವ ಮುತ್ತಿಗೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಮಾಜದ ವಕೀಲ ಬಾಂಧವರು ಹಾಗೂ ಪಂಚಮಸಾಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸುವರ್ಣ ಸೌಧ ಮುತ್ತಿಗೆ ಯಶಸ್ವಿಗೊಳಿಸುವಂತೆ, ವಿಜಯಪುರ ಪಂಚ ಸೇನಾ ಜಿಲ್ಲಾ ಘಟಕ ಉಪಾಧ್ಯಕ್ಷ ಹಾಗೂ ಪಂಚಮಸಾಲಿ ಯುವ ಮುಖಂಡ ಈರಣ್ಣ ಡಂಗಿ ಮನವಿ ಮಾಡಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ ಸಮಾಜದಲ್ಲಿ ಸಾಕಷ್ಟು ಬಡವರಿದ್ದಾರೆ, ಅಂತಹ ಬಡವರಿಗೆ ನಿಜವಾಗಲೂ ಅನ್ಯಾಯವಾಗುತ್ತಿದೆ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿಗಳು ಪಂಚಮಸಾಲಿ ಜನಾಂಗದ ಬಡ ಮಕ್ಕಳ ಏಳಿಗೆಗಾಗಿ ಸುಮಾರು ನಾಲ್ಕು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ ಈ ಹೋರಾಟದಲ್ಲಿ ಭಾಗವಹಿಸುವುದು ನಮ್ಮೆಲ್ಲರ ಆದ್ಯ ಜವಾಬ್ದಾರಿಯಾಗಿದೆ.
ಅಂದು ನಡೆಯುವ ವಿಧಾನಸೌಧ ಮುತ್ತಿಗೆಯಲ್ಲಿ ಲಕ್ಷಾಂತರ ಜನ ಭಾಗಿಯಾಗಿ ಸಮಾಜದ ಬಡ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ನಾವೆಲ್ಲರೂ ಶ್ರಮಿಸೋಣ ಎಂದು ಮನವಿ ಮಾಡಿದರು.
ಈಗಾಗಲೇ ಇಂಡಿ ತಾಲೂಕಿನಿಂದ ಬಹುತೇಕ ಹಳ್ಳಿಗಳಲ್ಲಿ ಸಮಾಜ ಬಾಂಧವರು ತಮ್ಮ ಸ್ವಂತ ಖರ್ಚಿನಿಂದ ವಾಹನಗಳನ್ನು ಮಾಡಿಕೊಂಡು ಬೆಳಗಾವಿಗೆ ಹೋಗಲು ಮುಂದಾಗಿದ್ದಾರೆ ಜಿಲ್ಲೆಯ ಎಲ್ಲಾ ತಾಲೂಕುಗಳ ಜನ ಸುವರ್ಣ ಸೋದರ ಮತ್ತಿಗೆ ಹಾಕಿ ಸಮಾಜದ ಬೆಂಬಲಕ್ಕೆ ನಿಲ್ಲೋಣ ಎಂದರು