ತಾಲೂಕಿನಲ್ಲಿ 93 ಟ್ಯಾಂಕರಗಳಿಂದ 226 ಟ್ರಿಪ್ ನೀರು – ಎಸಿ ಅಬೀದ್ ಗದ್ಯಾಳ
ಇಂಡಿ : ತಾಲೂಕಿನ 36 ಗ್ರಾಮಗಳ 735 ವಸ್ತಿ ಪ್ರದೇಶಗಳು ಮತ್ತು 34 ತಾಂಡಾಗಳಿಗೆ 93 ಟ್ಯಾಂಕರಗಳ ಮೂಲಕ 226 ಟ್ರೀಪ್ ನೀರನ್ನು ಪೂರೈಸಲಾಗುತ್ತಿದೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ತಹಸೀಲ್ದಾರ
ಕಚೇರಿಯ ಸಭಾಭವನದಲ್ಲಿ ಪಿಡಿಒ, ಗ್ರಾಮ ಆಡಳಿತ
ಅಧಿಕಾರಿ ಮತ್ತು ತಾಲೂಕಾ ಮಟ್ಟದ ಎಲ್ಲ ಇಲಾಖೆಯ
ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳ
ಕುಡಿಯುವ ನೀರಿನ ಕುರಿತು ನಡೆದ ಟಾಸ್ಕ ಫೋರ್ಸ ಸಭೆಯಲ್ಲಿ ಮಾತನಾಡುತ್ತಿದ್ದರು. ಈಗಾಗಲೇ ತಾಲೂಕಿನ ಹರಿಯುವ ಕೃಷ್ಣಾ ಕಾಲುವೆಯಿಂದ ಎಲ್ಲ ಕೆರೆಗಳನ್ನು ಮತ್ತು ಹಳ್ಳಗಳಲ್ಲಿ ನೀರು ತುಂಬಿದ್ದು ಬಹು ಹಳ್ಳಿ ಕುಡಿಯುವ ನೀರಿನ ಯೋಜನೆ ಅಡಿ ಎಲ್ಲ ಗ್ರಾಮಗಳಲ್ಲಿ
ಪೂರೈಸಲಾಗುತ್ತಿದೆ. ಹೀಗಾಗಿ ಮುಂದಿನ ಒಂದು
ತಿಂಗಳು ಕುಡಿಯುವ ನೀರಿನ ತೊಂದರೆಯಾಗುವದಿಲ್ಲ ಎಂದರು. ಅದಲ್ಲದೆ ಇನ್ನು ಅನೇಕ ವಸ್ತಿ ಪ್ರದೇಶಗಳಲ್ಲಿ
ಟ್ಯಾಂಕರ ಮೂಲಕ ನೀರು ಪೂರೈಸಲು ಕೇಳಿಕೊಂಡಿದ್ದು ಸಧ್ಯದಲ್ಲಿಯೇ ಟ್ಯಾಂಕರ ಮೂಲಕ ನೀರು ಪೂರೈಸಲಾಗುವದು ಎಂದರು. ನೀರಿನ ಕುರಿತು ತಾಲೂಕಾ ಮಟ್ಟದ ಅಧಿಕಾರಿಗಳು ವಾಚ್ ವಾರ್ಡ ಸರಿಯಾಗಿ ಕೆಲಸ ಮಾಡಬೇಕು. ಚುನಾವಣೆಯೂ ಬಂದಿದ್ದು ಅದರ ಕುಡಿಯುವ ನೀರಿನ ಕೆಲಸವನ್ನು ಮಾಡುವದು ಅನಿವಾರ್ಯವಾಗಿದೆ ಎಂದರು.
ರೈತರು ನೀರನ್ನು ಕುಡಿಯಲಿಕ್ಕೆ ಮಾತ್ರ ಬಳಸಬೇಕು. ಕೃಷಿಗೆ ಉಪಯೋಗಿಸಬಾರದು ಎಂದು ವಿನಂತಿಸಿದರು.
ವೇದಿಕೆಯ ಮೇಲೆ ತಹಸೀಲ್ದಾರ ಮಂಜುಳಾ ನಾಯಕ, ಇಒ ನೀಲಗಂಗಾ ಉಪಸ್ಥಿತರಿದ್ದರು. ಹೆಸ್ಕಾಂ ಎಇಇ ಎಸ್.ಆರ್.ಮೆಂಡೆಗಾರ, ಜಿ.ಪಂ ನೀರುಸರಬರಾಜು ಎಇಇ ಎಸ್.ಆರ್.ರುದ್ರವಾಡಿ, ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ, ತೋಟಗಾರಿಕೆ ಸಹಾಯಕ ನಿರ್ದೇಶಕ ಎಚ್.ಎಸ್.ಪಾಟೀಲ,
ಬಿ.ಎಚ್.ಕನ್ನೂರ, ಮಹಾಂತೇಶ ಹಂಗರಗಿ, ಬಿ.ಜೆ.ಇಂಡಿ,
ಟ್ಯಾಂಕರ ಟೆಂಡರ್ ಗುತ್ತಿಗೆದಾರ ನೀಲಕಂಠ
ರೂಗಿ, ಪಿಡಿಒ ಗಳಾದ ಸಿ.ಜಿ.ಪಾರೆ, ಬಸವರಾಜ ಬಬಲಾದ, ಜಬ್ಬಾರ ಹಳ್ಳಿ,ಎಚ್.ಎಸ್.ಗುನ್ನಾಪುರ ಮತ್ತಿತರಿದ್ದರು.
ಇಂಡಿ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕುಡಿಯುವ ನೀರಿನ ಕುರಿತು ನಡೆದ ಟಾಸ್ಕ ಫೋರ್ಸ ಸಭೆಯಲ್ಲಿ ಎಸಿ ಅಬೀದ್ ಗದ್ಯಾಳ ಮಾತನಾಡಿದರು.