ಸುಖಾಸುಮ್ಮನೆ ಧರಣಿ..! ಡಿ-9 ರಂದು ಶಾಂತೇಶ್ವರ ಅದ್ದೂರಿ ಜಾತ್ರಾ ಮಹೋತ್ಸವಕ್ಕೆ ಸಿದ್ದತೆ : ಕಾಸುಗೌಡ
ಇಂಡಿ: ನವೆಂಬರ್ ೧೦ ರಂದು ಸಾಯಂಕಾಲ ಶಾಂತೇಶ್ವರ ದೇವಸ್ಥಾನದಲ್ಲಿ ಭಕ್ತರು ಕೇಳಿದ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ನೀಡಲಾಗಿದ್ದು, ಡಿ.೯ ರಿಂದ ೧೧ ರವರೆಗೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ಸಾರ್ವಜನಿಕರು ಅನುಮತಿ ನೀಡಿದ್ದು ಈಗಾಗಲೆ ಜಾತ್ರಾ ತಯಾರಿ ನಡೆದಿದೆ ಎಂದು ದೇವಸ್ಥಾನ ಕಮೀಟಿ ಅಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲೆಕ್ಕಪತ್ರ ನೀಡಿದರೂ ಸಹ ಕೆಲವು ದುರುದ್ದೇಶದಿಂದ ಸುಖಾಸುಮ್ಮನೆ ದೇವಸ್ಥಾನದ ಎದುರು ಧರಣಿ ನಡೆಸುತ್ತಿದ್ದಾರೆ. ನೂರಾರು ಜನರ ಸಮ್ಮುಖದಲ್ಲಿಯೇ ಲೆಕ್ಕಪತ್ರ ನೀಡಲಾಗಿದೆ. ಅಲ್ಲದೆ ದೇವಸ್ಥಾನದ ಸೂಚನಾ ಫಲಕದಲ್ಲಿಯೂ ಲೆಕ್ಕಪತ್ರದ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದರು.
ನವೆಂಬರ್ ೨೬ ರಿಂದ ಡಿ. ೯ರವರೆಗೆ ಧಾನಮ್ಮದೇವಿ ಪುರಾಣ ಕಾರ್ಯಕ್ರಮ ಸಾಯಂಕಾಲ ೭-೦೦ ರಿಂದ ೮-೩೦ ರವರೆಗೆ ಹಮ್ಮಿಕೊಂಡಿದ್ದು, ಡಿ. ೯ ಕ್ಕೆ ಸಾಮೂಹಿಕ ವಿವಾಹ ಧರ್ಮಸಭೆ, ಡಿ. ೧೦ ಮತ್ತು ೧೧ ರಂದು ಜಾತ್ರಾ ಮಹೋತ್ಸವ ನಡೆಯಲಿದೆ. ಈಗಾಗಲೆ ಜಾತ್ರೆಗೆ ಭಕ್ತರಿಂದ ದೇಣಿಗೆ ಸಂಗ್ರಹ ಮಾಡಲಾಗುತ್ತಿದ್ದು ಅದ್ದೂರಿ ಜಾತ್ರೆಗೆ ಸಿಧ್ಧತೆ ನಡೆದಿದೆ ಎಂದು ಕಾಸುಗೌಡ ಬಿರಾದಾರ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀಕಾಂತ ಕೂಡಿಗನೂರ, ದೇವೆಂದ್ರ ಕುಂಬಾರ, ಬಸವರಾಜ ಮಸಳಿ, ವಿಜಯ್ ಉಡಚಣ, ರಾವುತ್ ಲಾಳಸಂಗಿ, ಸತೀಶ ಝಂಪಾ, ಅಶೋಕಗೌಡ ಪಾಟೀಲ ಮತ್ತಿತರರಿದ್ದರು.
ಇಂಡಿ: ಪತ್ರಿಕಾಗೋಷ್ಠಿಯಲ್ಲಿ ಕಾಸುಗೌಡ ಬಿರಾದಾರ ಮಾತನಾಡಿದರು.