ಸಕ್ಕರೆ ಮಧ್ಯ ಗಾಂಜಾ ಗಮತ್ತು..! ಆರೋಪಿ ಅರೆಸ್ಟ್..!
ವಿಜಯಪುರ :
ಕಬ್ಬಿನ ಮಧ್ಯೆ ಅಕ್ರಮವಾಗಿ ಗಾಂಜಾ ಬೆಳೆದಿರುವ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. 34 ವರ್ಷದ ದೊಂಡಿಬಾ ಜರಕ ಬಂಧಿತ ಆರೋಪಿ. ಇನ್ನೂ ಬಂಧಿತ ಆರೋಪಿಯಿಂದ 4,40,680 ಮೌಲ್ಯದ 76 ಕೆಜಿ 36 ಗ್ರಾಂ ಗಾಂಜಾವನ್ನು ಪೊಲೀಸರು ಜಪ್ತಿಗೈದಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.