ಮಸ್ಕಿ: ಇಂದಿನ ತಂತ್ರಜ್ಞಾನ ಯುಗದಲ್ಲಿ ಕೃಷಿ ಎಂದರೆ ಸಾಕು ಅದು ಬಹುತೇಕರಿಗೆ ಬೇಡವಾದ ವಿಷಯ. ಈ ಮದ್ಯೆ ಸರಕಾರಿ ಪ್ರಾಥಮಿಕ ಶಾಲಾ ವಿಧ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ನೃತ್ಯವನ್ನು ಮಾಡಿ ಕೃಷಿಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಹೌದು ರಾಯಚೂರ ಜಿಲ್ಲೆಯ ಮಸ್ಕಿ ತಾಲೂಕಿನ ಮೆದಿಕಿನಾಳ ತಾಂಡಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕೃಷಿಗೆ ಸಬಂಧಿಸಿದ ವಿವಿಧ ಸನ್ನಿವೇಶಗಳ ನೃತ್ಯವನ್ನು ಮಾಡುವ ಮೂಲಕ ಕೃಷಿಯ ಬಗ್ಗೆ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ.
100ನೇ ದಿನದ ಓದು ಕರ್ನಾಟಕ ಕಾರ್ಯಕ್ರಮದ ಅಂಗವಾಗಿ ಮಸ್ಕಿ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೆದಿಕಿನಾಳ ತಾಂಡಾ ಶಾಲೆಯಲ್ಲಿ ಇಂದು ಮರೆಯಾಗುತ್ತಿರುವ ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸುವ ಸನ್ನಿವೇಶಗಳನ್ನು ಸೃಷ್ಟಿಸಲಾಯಿತು.
ಬೆಣ್ಣೆ ಕಡೆಯುವುದು, ರಾಶಿಮಾಡುವುದು, ಕುರಿ ಸಾಕಾಣಿಕೆ, ಬೀಸೋಕಲ್ಲಿನ ಪದ, ಹೂವಾಡಗಿತ್ತಿ, ಮೋರದಿಂದ ಧನ್ಯ ಸ್ವಚ್ಚಗೊಳಿಸುವುದು, ಕುಟ್ಟುವುದು, ಕಟ್ಟಿಗೆ ಕಡಿವುದು, ದನ ಕರಗಳಿಗೆ ಮೇವು ತರುವುದು, ಗುದ್ದಲಿಯಿಂದ ಭೂಮಿ ಅಗೆಯುವುದು, ಅಡಿಗೆ ಮಾಡುವುದು,ಹಾಲು ಕರೆಯುವ ಸನ್ನಿವೇಶ ಇನ್ನಿತರ ಸನ್ನಿವೇಶ ಸೃಷ್ಟಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರ ನೀಲಪ್ಪ ಮಾತನಾಡಿ “ಅನ್ನತೋ ಪ್ರಾಣ ಅನ್ನತೋ ಪರಾಕ್ರಮ” ಎಂಬ ಮಾತಿದೆ. ಇಂದು ಮರೆಯಾಗುತ್ತಿರುವ ಗ್ರಾಮೀಣ ಸೊಗಡು ಮುಂದಿನ ಪೀಳಿಗೆಗೆ ಪರಿಚಯ ಮಾಡುವುದು ಮುಖ್ಯವಾಗಿದೆ. ಕೃಷಿಯ ಬಗ್ಗೆ ಯಾರೂ ಉದಾಸೀನಾ ಮಾಡಬಾರದು. ಒಕ್ಕಲುತನ ಎನ್ನುವದು ಶ್ರೇಷ್ಠ ಕಾಯಕವಾಗಿದೆ. ವಿದ್ಯೆಯ ಜೊತೆಗೆ ಕೃಷಿಯ ವಿಷಯದ ಬಗ್ಗೆಯೂ ತಿಳಿಯುವ ಅಗತ್ಯವಿದೆ. ಮಕ್ಕಳು ಕೃಷಿಯ ಬಗ್ಗೆ ಡಾನ್ಸ್ ಮಾಡಿರುವದು ಖುಷಿಯ ವಿಷಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಶರಣಗೌಡ ಪಾಟೀಲ್, ಗೀತಾ, ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಎಸ್. ಡಿ. ಎಮ್. ಸಿ ಅಧ್ಯಕ್ಷರು, ಸದಸ್ಯರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.