ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಟ್ಟಣದ ಹೊರವಲಯದ ಬಿದರಕುಂದಿ ರಸ್ತೆಯ ಆಕ್ಸಪರ್ಡ್ ಪಾಟೀಲ್ಸ್ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ನೀಡಿದ್ದು ಹೈಸ್ಕೂಲ್ ಗೆ ಟಾಪರ್ ಬಂದ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಟ್ಟಣದ ಹತ್ತಿರ ಬಿದರಕುಂದಿ ರಸ್ತೆಯ ಆಕ್ಸಪರ್ಡ್ ಪಾಟೀಲ್ಸ್ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಟಾಪರ್.
ಮುದ್ದೇಬಿಹಾಳ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮುದ್ದೇಬಿಹಾಳ ಪಟ್ಟಣ ಹೊರವಲಯದ ಬಿದರಕುಂದಿ ರಸ್ತೆಯ ಆಕ್ಸಪರ್ಡ್ ಪಾಟೀಲ್ಸ್ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ನೀಡಿದ್ದು ಹೈಸ್ಕೂಲ್ ಗೆ ಟಾಪರ್ ಬಂದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಸಿಹಿಯನ್ನು ಆಡಳಿತ ಮಂಡಳಿಯ ನಿರ್ದೇಶಕ ದರ್ಶನಗೌಡ ಪಾಟೀಲ್ ಹಾಗೂ ಸಿಬ್ಬಂದಿ ತಿನ್ನಿಸಿದರು.
ಈ ವೇಳೆ ಮಾತನಾಡಿದ ದರ್ಶನಗೌಡ ಪಾಟೀಲ್ ಅವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಮ್ಮ ಮುದ್ದೇಬಿಹಾಳ ಪಟ್ಟಣದ ಶಾಲೆಗೆ ಪಟ್ಟಣದ ಎಲ್ಲಾ ಶಾಲೆಗಳಿಂತ ಹೆಚ್ಚಿನ ಅಂಕವನ್ನು ನಮ್ಮ ಶಾಲೆ ವಿದ್ಯಾರ್ಥಿಗಳು ಪಡೆದಿದ್ದಾರೆ. ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ನಮ್ಮ ಸಂಸ್ಥೆ ಶ್ರಮಿಸುತ್ತಿದ್ದು ಉತ್ತಮ ಭೋದಕ ವೃಂದವನ್ನು ಹೊಂದಿದೆ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 90% ಮಾಡಿದಂತಹ ವಿದ್ಯಾರ್ಥಿಗಳಿಗೆ ಪ್ರಥಮ ಪಿಯು ಪ್ರವೇಶಾತಿಯಲ್ಲಿ ವಿಶೇಷ ರಿಯಾಯಿತಿ ನೀಡುತ್ತಿದ್ದೇವೆ ಇದರ ಸದುಪಯೋಗವನ್ನು ಪಾಲಕರು ವಿದ್ಯಾರ್ಥಿಳು ಪಡೆದುಕೊಳ್ಳಬೇಕೆಂದರು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಟಾಪರ್ ವಿದ್ಯಾರ್ಥಿಗಳು ; ಪ್ರಕೃತಿ ಸಿನ್ನೂರ (೬೨೫ ಕ್ಕೆ ೬೧೪) 98.24% ರಾಜೇಶ್ವರಿ ಬಿರಾದಾರ 97.6% ಸಹನಾ ಸುರಗಿಹಳ್ಳಿ 96.64% ಕೌಶಲ್ಯ ಗೋಗಿ 96%
ಡಿಸ್ಟಿಂಗ್ಶನ್ ಒಟ್ಟು 12 ಪ್ರಥಮ ಶ್ರೇಣಿಯಲ್ಲಿ ಒಟ್ಟು 26 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಆಡಳಿತ ಮಂಡಳಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿಗಳಾದ ಪ್ರಕೃತಿ ಸಿನ್ನೂರ, ರಾಜೇಶ್ವರಿ ಬಿರಾದಾರ ನಮ್ಮ ಶೈಕ್ಷಣಿಕ ಪ್ರಗತಿಗೆ ನಮ್ಮ ಶಾಲೆಯ ಆಡಳಿತ ಮಂಡಳಿ ತುಂಬಾ ಮುತುವರ್ಜಿವಹಿಸಿಕೂಂಡು ಉತ್ತಮ ಶಿಕ್ಷಕರ ಮೂಲಕ ನಮಗೆ ಗುಣಮಟ್ಟದ ಶಿಕ್ಷಣ ನೀಡಿದ್ದಾರೆ ಪರೀಕ್ಷೆ ತಯಾರಿಗೆ ಶಿಕ್ಷಕರು ಉತ್ತಮ ಸಲಹೆಗಳನ್ನು ನೀಡಿದ್ದಾರೆ.
ನಮ್ಮ ಕಾಲೇಜು ವ್ಯಾಸಂಗವನ್ನು ಮುದ್ದೇಬಿಹಾಳ ಆಕ್ಸಪರ್ಡ್ ಪಾಟೀಲ್ಸ್ ಕಾಲೇಜಿನಲ್ಲಿ ಮುಂದುವರೆಸುತ್ತೇವೆ ಎಂದರು
ಪ್ರಕೃತಿ ಸಿನ್ನೂರ ವೈದ್ಯರಾಗುವ ಗುರಿಯನ್ನು ಹೊಂದಿದ್ದಾಗಿ ಹೇಳಿದರೆ ರಾಜೇಶ್ವರಿ ಬಿರಾದಾರ ಕೆಎಎಸ್ ಮಾಡುವುದಾಗಿ ತಿಳಿಸಿದರು.
ಈ ವೇಳೆ ಹೈಸ್ಕೂಲ್ ಮುಖ್ಯೋಪಾಧ್ಯಾಯ ವಿನಯ್ ಪಾಟೀಲ್, ಕಾಲೇಜಿನ ಪ್ರಾಚಾರ್ಯ ಪರಶುರಾಮ ಹೋಗಾರ ಮಾತನಾಡಿ ನಾಗರಬೆಟ್ಟದ ಆಕ್ಸಪರ್ಡ್ ಪಾಟೀಲ್ಸ್ ಸಂಸ್ಥೆಯಂತೆ ಮುದ್ದೇಬಿಹಾಳ ಪಟ್ಟಣದಲ್ಲಿ ಸಹ ಗುಣಮಟ್ಟದ ಶಿಕ್ಷಣವನ್ನು ನೀಡಲು ಉತ್ತಮ ಶಿಕ್ಷಕರ ಬಳಗವನ್ನು ಹೊಂದಿದೆ ಮುದ್ದೇಬಿಹಾಳ ಪಟ್ಟಣದ ಸುತ್ತಮುತ್ತಲಿನ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಂಸ್ಥೆ ಶ್ರಮಿಸುತ್ತಿದ್ದು ಇದರ ಪ್ರಯೋಜನವನ್ನು ಪಾಲಕರು ವಿದ್ಯಾರ್ಥಿಗಳಿಗೆ ನೀಡಬೇಕು ಎಂದರು.
ಹತ್ತನೇ ತರಗತಿಯಲ್ಲಿ ಟಾಪರ್ ಬಂದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಆನಂದ ನಾವಿ, ರಾಜು ದೊಡ್ಡಮನಿ, ಸಂಗಮೇಶ ಹೂಗಾರ, ಅಣ್ಣಪ್ಪ ಜಂಗಾಣಿ, ಪಾರ್ವತಿ ಚಿನಿವಾರ,ಶಾಹೀನಕೌಸರ್ ವಾಲಿಕಾರ, ಸುರೇಶ ಹಾಗೂ ಸಿಬ್ಬಂದಿಗಳು ಸೇರಿದಂತೆ ಉಪಸ್ಥಿತರಿದ್ದರು.