ಗ್ರಾಮೀಣ ಭಾಗದ ಮಕ್ಕಳಲ್ಲಿನ ಪ್ರತಿಭೆ ಅನಾವರಣವಾಗಬೇಕು:
ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣಕ್ಕೆ ಆಧ್ಯತೆ ನೀಡಲಿ:
ಅಫಜಲಪುರ: ವರ್ಷವೀಡಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮೀಪಿಸುತ್ತಿದೆ. ಪರೀಕ್ಷೆ ಎಂದರೆ ಭಯ, ಆತಂಕಕ್ಕೊಳಗಾಗುತ್ತಾರೆ. ವಿದ್ಯಾರ್ಥಿಗಳಾದವರು ಪರೀಕ್ಷೆ ಎಂಬುವುದು ಉತ್ಸವದಂತೆ ಖಷಿಯಲ್ಲಿರಬೇಕು. ಆಗ ಮಾತ್ರ ಪರೀಕ್ಷೆಗಳು ಯಶಸ್ವಿಯಾಗಿ ಎದುರಿಸಲು ಸಾಧ್ಯ ಎಂದು ಜ್ಞಾನ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಡಿ.ಪಾಟೀಲ ಹೇಳಿದರು.
ತಾಲೂಕಿನ ಮಲ್ಲಾಬಾದ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಹತ್ತನೆ ತರಗತಿ ಹಾಗೂ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು ದಶಕಗಳ ಹಿಂದೆ ಗ್ರಾಮೀಣ ಭಾಗದ ಮಕ್ಕಳು ಕಾಲೇಜು ಶಿಕ್ಷಣ ಪಡೆಯಲು ದೂರದ ಪಟ್ಟಣ, ನಗರದತ್ತ ಹೋಗಬೇಕಿತ್ತು. ಹೀಗಾಗಿ ದೂರದ ಊರಿಗೆ ಹೋಗಿ ಬರಲು ನಾನಾ ಸಮಸ್ಯೆಗಳ ಕಾರಣಕ್ಕೆ ಸಾಕಷ್ಟು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕೆ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಹಳ್ಳಿಯೂರಲ್ಲಿ ಶಿಕ್ಷಣ ತೆರೆಯಲಾಗಿದೆ. ತಮ್ಮೇಲ್ಲರ ಸಹಕಾರದಿಂದ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಂತಾಗಿದೆ ಎಂದು ಹೇಳಿದರು.
ಮಾತೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಬಸವರಾಜ ಪಾಟೀಲ, ಅಶೋಕ ಜಗದಿ, ಅಬ್ಬಾಸಲಿ ನದಾಫ್ ಮಾತನಾಡಿ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಾಲೇಜು ಶೀಕ್ಷಣ ಕಲಿಯುವುದು ದೊಡ್ಡ ಸಾಹಸ ಮಾಡಿದಂತಾಗಿತ್ತು. ಅಪರೂಪಕ್ಕೊಬ್ಬರು ಉನ್ನತ ಶಿಕ್ಷಣ ಪಡೆಯುತ್ತಿದ್ದರು. ಇಂದು ಗ್ರಾಮೀಣ ಭಾಗದಲ್ಲಿ ಸಾಕಷ್ಟು ಕಾಲೇಜುಗಳು ತೆರೆದಿರುವುದರಿಂದ ಸಾಕಷ್ಟು ಜನರು ಉನ್ನತ ಶೀಕ್ಷಣ ಪಡಯಲು ಸಹಕಾರಿಯಾಗಿದೆ. ಪರೀಕ್ಷೆ ಸಮೀಪ ಬರುತ್ತಿದಂತೆ ಗಂಭೀರವಾಗಿ ಓದಲು ಮುಂದಾಗಬಾರದು. ಪರೀಕ್ಷೆಯ ತಯ್ಯಾರಿ ಹಾಗೂ ಸಿದ್ದತೆಯೂ ತುಂಬಾ ಶಿಸ್ತಿನಿಂದ ಕೂಡಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಸಂಗಣ್ಣ ಸೂರಗೊಂಡ, ವಿಠ್ಠಲ ಪೂಜಾರಿ, ಶಿವಪ್ಪ ದೊಡ್ಡಿ, ಸಂಜೀವ ಬಗಲಿ, ಪ್ರಾಚಾರ್ಯ ಡಾ.ಸಂಗಣ್ಣ ಸಿಂಗೆ, ನಿಂಗಣ್ಣ ಪೂಜಾರಿ, ಯಲ್ಲಾಲಿಂಗ ಪೂಜಾರಿ, ಸಿಬ್ಬಂದಿಗಳಾದ ಯಲ್ಲಾಲಿಂಗ ಮೈಲಾರಿ, ನಬಿಲಾಲ ದೇವರಮನಿ, ಸಿದ್ದರಾಮ ಪಾಟೀಲ, ಚಂದ್ರಕಾಂತ ಸುತಗುಡಿ, ಶಾಹಿನ್ ದೇವರಮನಿ, ಗುರು ಮಗಿ, ಲಕ್ಷ್ಮಣ ಪೂಜಾರಿ, ಮಲ್ಲಯ್ಯ ಮಠ, ಮಾಳಪ್ಪ ಪುಜಾರಿ, ಸುಮಂತ್ ಸೇರಿದಂತೆ ಅನೇಕರು ಇದ್ದರು.
ವಿದ್ಯಾರ್ಥಿನಿ ಶೃತಿ ಪೂಜಾರಿ ಸ್ವಾಗತಿಸಿದರು. ಸೌಭಾಗ್ಯ ಕುಸಗಲ್, ಅಂಜುಮ್ ಮಾಲಿಪಟೇಲ್ ನಿರೂಪಿಸಿದರು. ಪೃಥ್ವೀರಾಜ್ ವಂದಿಸಿದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ: