ವಿಜಯಪುರ : ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳ ವಿಚಾರವಾಗಿ ಶಾಸಕ ಯತ್ನಾಳ್ ಸ್ವ ಪಕ್ಷೀಯರ ವಿರುದ್ಧವೇ ಅಸಮಾಧಾನ ಹೊರ ಹಾಕಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯಕ್ಕೆ ಸ್ಟ್ರಾಂಗ್ ಗೃಹ ಸಚಿವರು ಬೇಕಾಗಿದ್ದಾರೆ.
ಆರಗ ಜ್ಞಾನೇಂದ್ರರಿಗೆ ತಾವೊಬ್ಬ ಗೃಹ ಸಚಿವ ಎಂಬುದು ಇನ್ನೂ ಅರಿವಿಗೆ ಬಂದಂತೆ ಕಾಣುತ್ತಿಲ್ಲ. ಬೆಳಗ್ಗೆಯೊಂದು ಸಂಜೆಗೆ ಇನ್ನೊಂದು ಹೇಳಿಕೆ ನೀಡ್ತಾರೆ ಎಂದು ಹೇಳಿದರು. ಅಲ್ಲದೇ ಡಿಜೆ ಹಳ್ಳಿ ಗಲಾಟೆ ಪ್ರಕರಣದಲ್ಲಿ ಶಾಸಕ ಜಮೀರ್ ಅಹಮದ್ ಬಂಧನವಾಗಬೇಕಿತ್ತು. ಆದರೆ ಒಳಗೊಳಗೆ ಹೊಂದಾಣಿಕೆ ಮಾಡಿಕೊಂಡರು. ಇವರ ಹೊಂದಾಣಿಕೆಯಿಂದ ಮುಗ್ಧ ಹಿಂದೂಗಳು ಸಾಯ್ತಿದ್ದಾರೆ ಎಂದು ಹೇಳಿದ್ರು. ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.