ರಾಜ್ಯ ಗೃಹ ಮಂತ್ರಿ ರಾಜೀನಾಮೆಗೆ ಆಗ್ರಹ : ವಿಜಯಲಕ್ಷ್ಮಿ
ಇಂಡಿ: ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ದೌರ್ಜನ್ಯ ಪ್ರಕರಣಗಳು, ಹೆಚ್ಚಾಗುತ್ತಿದ್ದು ಸರಕಾರದ ಗೃಹ
ಮಂತ್ರಿಗಳು ಈ ಕೂಡಲೆ ರಾಜೀನಾಮೆ ನೀಡಬೇಕೆಂದು
ಬಿಜೆಪಿ ಮಹಿಳಾ ಮೋರ್ಚಾ ತಾಲೂಕ ಅಧ್ಯಕ್ಷೆ ವಿಜಯಲಕ್ಷ್ಮಿ ರೂಗಿಮಠ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಇತ್ತೀಚಿಗೆ ಹಾನಗಲ್ ನಲ್ಲಿ ಗ್ಯಾಂಗ್ ರೇಪ್ ನಡೆದಿದೆ,
ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ
ಮೆರವಣಿಗೆ ಮಾಡಿದ ಅಮಾನವೀಯ ಘಟನೆ ಸಹ ನಡೆದಿದೆ. ಈ ಸರ್ಕಾರದಲ್ಲಿ ಕಾಮಾಂಧರು ಹಾಗೂ ದುಷ್ಟರಿಗೆ ಯಾವ ಭಯವೂ ಇಲ್ಲದಂತಾಗಿದೆ. ಇಂತಹ ಘೋರ ಕೃತ್ಯಗಳನ್ನು ತೆಡಯುವಲ್ಲಿ ಸರಕಾರ ಸಂಪೂರ್ಣ
ವಿಫಲವಾಗಿದೆ. ರಾಜ್ಯದ ಗೃಹ ಮಂತ್ರಿಗಳು ತಮ್ಮ
ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಮರ್ಥ
ನಾಯಕನನ್ನು ಗುರುತಿಸಿ ಗೃಹ ಖಾತೆ ನೀಡಬೇಕೆಂದು ರೂಗಿಮಠ ಆಗ್ರಹಿಸಿದ್ದಾರೆ.
ಇಂಡಿ: ವಿಜಯಲಕ್ಷ್ಮಿ ರೂಗಿಮಠ ಭಾವಚಿತ್ರ.