ಮಾ 4 ಬಿಜೆಪಿ ಎಸ್ಟಿ ಮೋರ್ಚಾ ಬೃಹತ್ ಸಮಾವೇಶ..
ಇಂಡಿ : ಪ್ರಥಮ ಬಾರಿಗೆ ಬಿಜೆಪಿ ಎಸ್ಟಿ ಮೋರ್ಚಾ ಬೃಹತ್ ಸಮಾವೇಶ ಮಾ-4 ರಂದು ಪಟ್ಟಣದಲ್ಲಿ ಹಮ್ಮಿಕೊಂಡಿದ್ದು, ರಾಜ್ಯ, ಜಿಲ್ಲಾ ಹಾಗೂ ವಿವಿಧ ಮೋರ್ಚಾ ಪದಾಧಿಕಾರಿಗಳು ಮುಖಂಡರು ಆಗಮಿಸಿಲಿದ್ದಾರೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸಲು ಬಿಜೆಪಿ ಮಂಡಳ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಮನವಿ ಮಾಡಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕರೆದ ಸುದ್ದಿ ಗೋಷ್ಠಿ ಯಲ್ಲಿ ಮಾತಾನಾಡಿದ ಅವರು, ಮಾರ್ಚ- 4 ಸಾಯಂಕಾಲ 5 ಘಂಟೆಗೆ ಪಟ್ಟಣದ ಸಿಂದಗಿಯ ರಸ್ತೆಯ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಅವರ ಮನೆಯ ಪಕ್ಕದಲ್ಲಿ ಎಸ್ಟಿ ಮೋರ್ಚಾ ಜಿಲ್ಲಾ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲೆಯ ಎಲ್ಲಾ ಮತಕ್ಷೇತ್ರದಲ್ಲೂ ವಿವಿಧ ಮೋರ್ಚಾ ಗಳಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಒಟ್ಟು 7 ಮೋರ್ಚಾ ಗಳಿದ್ದು ನಾಗಠಾಣ ಮತಕ್ಷೇತ್ರದಲ್ಲಿ ಮಹಿಳಾ ಮೋರ್ಚಾ, ಬಬಲೇಶ್ವರ ಎಸಿ ಮೋರ್ಚಾ, ಬಸವನ ಬಾಗೇವಾಡಿ ಯಲ್ಲಿ ರೈತ ಮೋರ್ಚಾ ಹಮ್ಮಿಕೊಳ್ಳಲಾಗಿದೆ ಎಂದರು. ಇನ್ನೂ ಇಂಡಿಯಲ್ಲಿ ನಡೆಯುವ ಸಮಾವೇಶಕ್ಕೆ ತಳವಾರ ಸಮುದಾಯ ಬಲ ನೀಡಲಿದೆ. ಇತ್ತೀಚೆಗೆ ರಾಜ್ಯ ಸರಕಾರ ತಳವಾರ ಸಮುದಾಯವನ್ನು ಪ.ಪಂ. ಸೇರ್ಪಡೆ ಗೊಳಿಸಿ ಜಾತಿ ಪ್ರಮಾಣ ಪತ್ರ ಕೂಡಾ ವಿತರಣೆಯಾಗುತ್ತಿದೆ. ಹಾಗಾಗಿ ಆ ಸಮುದಾಯ ಜಿಲ್ಲೆಯ ಎಲ್ಲಾ ತಾಲ್ಲೂಕಿನಿಂದಲೂ ಹೆಚ್ಚಿನ ಸಂಖ್ಯೆ ಪಾಲ್ಗೊಳ್ಳುವ ನೀರಿಕ್ಷೆ ಇದೆ ಎಂದರು. ಚುನಾವಣೆ ಹತ್ತೀರ ಬರುತ್ತಿದ್ದತಿಂದ ಪ್ರತಿ ವಾರ್ಡಗೂ ರಾಜ್ಯ ನಾಯಕರು ಬೇಟಿ ನೀಡಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಕೆಲಸ ನಡೆಯಲಿದೆ ಎಂದು ಹೇಳಿದರು.
ಸಂಸದ ರಮೇಶ ಜಿಗಜಿಣಗಿ ಜಿಲ್ಲೆಯೆ ಅಭಿವೃದ್ಧಿಗೆ ಲಕ್ಷ ಲಕ್ಷ ಕೋಟಿ ರೂಪಾಯಿ ಅನುದಾನ ತೆಗೆದುಕೊಂಡು ಬಂದು ಅಭಿವೃದ್ಧಿ ಪಡಿಸಿದ್ದಾರೆ. ಚತುಷ್ಪತ್ ರಸ್ತೆ, ದ್ವೀಪಥ ರಸ್ತೆ, ರೈಲು ಹಳಿ ಡಬ್ಬಲ್ ಲಿಂಗ್,ವಿದ್ಯುತ್ ಚಾಲಿತ್ ರೈಲು ಇನ್ನೂ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಮಾಡಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತಾನಾಡಿದ ಅವರು, ಬಸವನ ಬಾಗೇವಾಡಿ ಮತಕ್ಷೇತ್ರದ ಗೊಳಸಂಗಿ ಗ್ರಾಮದಲ್ಲಿ ರೈತ ಮೋರ್ಚಾ ಸಮಾವೇಶ ಮಾರ್ಚ್ 5 ಸಾಯಂಕಾಲ 4 ಘಂಟೆಗೆ ಹಮ್ಮಿಕೊಳ್ಳಲಾಗಿದೆ. ಬಿ ವೈ ವಿಜಯಂದ್ರ, ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ, ಕೇಂದ್ರ ಹಾಗೂ ರಾಜ್ಯದ ಪ್ರಮುಖರು ಭಾಗವಹಿಸಿಲಿದ್ದಾರೆ.
ಇಂಡಿ ತಾಲ್ಲೂಕಿನಿಂದಲೂ ಅತೀ ಹೆಚ್ಚಿನ ಕಾರ್ಯಕರ್ತರು ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಬಿಜಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ, ಹಾಲು ಪ್ರಕೊಷ್ಟದ ಸಂಚಾಲಕ ಹಣಮಂತರಾಯಗೌಡ ಪಾಟೀಲ, ಬಾಪುರಾಯ ಲೋಣಿ, ರಾಜು ಕಾಡೆ, ರಾಘವೇಂದ್ರ ಕಾಪಸೆ, ರಜನಿಕಾಂತ್ ಕಲ್ಲೂರ, ಎಸ್ಟಿ ಮೋರ್ಚಾ ತಾಲ್ಲೂಕು ಅಧ್ಯಕ್ಷ ರವಿ ನಾಯ್ಕೊಡಿ, ಅದೃಷಪ್ಪ ವಾಲಿ, ರಾಜಶೇಖರ ಯರಗಲ್ ಇತರರು ಉಪಸ್ಥಿತರಿದ್ದರು.