ರಾಯಚೂರು : ಎಸ್.ಟಿ ಮೀಸಲಾತಿ ಹೆಚ್ಚಳ ಕುರಿತು ಎಸ್. ಟಿ ಮೀಸಲು ಕ್ಷೇತ್ರದ ಶಾಸಕರು ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಇಲ್ಲದಿದ್ದರೆ ಎಲ್ಲಾ ಶಾಸಕರ ಮನೆಗಳ ಮುಂದೆ ಧರಣಿಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೈದ್ರಾಬಾದ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್.ರಘುವೀರ ನಾಯಕ ಎಚ್ಚರಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,ಎಸ್.ಟಿ ಮೀಸಲಾತಿ ಹೆಚ್ಚಳಕ್ಕಾಗಿ ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರುಗಳಾದ ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಅನೇಕ ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ .
ಶ್ರೀಗಳ ನೇತೃತ್ವದಲ್ಲಿ ದಾವಣಗೆರೆ ಜಿಲ್ಲೆ ರಾಜನಹಳ್ಳಿಯಿಂದ ರಾಜಧಾನಿ ತನಕ ಬೃಹತ್ ಪಾದಯಾತ್ರೆ ನಡೆಸಲಾಯಿತು . ಆದರೂ ಸರಕಾರ ನಿರ್ಲಕ್ಷ್ಯ ವಹಿಸಿದ್ದರಿಂದ ಫೆ.೧೦ ರಿಂದ ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು ಬೆಂಗಳೂಲರಿನ ಫ್ರೀಡಂ ಪಾರ್ಕನಲ್ಲಿ ಏಕಾಂಗಿಯಾಗಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ ಎಂದರು.
ಕೋವಿಡ್ ನಿಯಮಗಳನ್ನು ಪಾಲಿಸುವುದಕ್ಕಾಗಿ ವಾಲ್ಮೀಕಿ ನಾಯಕ ಸಮುದಾಯದ ಯಾರು ಸಹ ಸತ್ಯಾಗ್ರಹದಲ್ಲಿ ಭಾಗವಹಿಸಬಾರದು ಎಂದು ಗುರುಗಳು ಆದೇಶ ಮಾಡಿರುವದರಿಂದ ಸಮುದಾಯದ ಜನರು ಗುರುಗಳ ಆದೇಶಕ್ಕಾಗಿ ಕಾಯುತ್ತಿದ್ದಾರೆ.ಗುರುಗಳು ಆದೇಶ ನೀಡಿದರೆ ಲಕ್ಷಾಂತರ ಜನ ವಾಲ್ಮೀಕಿ ನಾಯಕ ಸಮುದಾಯದವರು ಬೆಂಗಳೂರಿಗೆ ತೆರಳ ವಿಧಾನಸೌಧ ಮುತ್ತಿಗೆ ಹಾಕುತ್ತೇವೆ ಎಚ್ಚರಿಸಿದರು.
ಎಸ್.ಟಿ , ಮೀಸಲಾತಿ ಹೆಚ್ಚಳ ಕುರಿತು ಕಳೆದ ಅಧಿವೇಶನದ ಸಂದರ್ಭದಲ್ಲಿ ಕೇವಲ ಕಂಪ್ಲಿ ಶಾಸಕ ಗಣೇಶ್,ಬಸನಗೌಡ ದದ್ದಲ್, ರಾಜುಗೌಡ,ರಾಜಾ ವೆಂಕಟಪ್ಪ ನಾಯಕ ಇವರು ಮಾತ್ರ ಸದನದಲ್ಲಿ ಧ್ವನಿ ಎತ್ತಿದಾರೆ ಇನ್ನುಳಿದ ಶಾಸಕರು ಧ್ವನಿ ಎತ್ತದೆ ಇರುವುದು ಸಮುದಾಯದ ಅಸಮಧಾನಕ್ಕೆ ಕಾರಣವಾಗಿದೆ. ಇದೇ ೧೪ ರಂದು ಪ್ರಾರಂಭವಾಗುವ ಅಧಿವೇಶನದಲ್ಲಿ ಎಲ್ಲಾ ಮೀಸಲು ಕ್ಷೇತ್ರದ ಶಾಸಕರು ಎಸ್. ಟಿ ಮೀಸಲಾತಿ ಹೆಚ್ಚಳ ಕುರಿತು ಧ್ವನಿ ಎತ್ತಬೇಕು ಇಲ್ಲವಾದರೆ ಎಲ್ಲಾ ಶಾಸಕರ ಮನೆಗಳ ಮುಂದೆ ಧರಣಿಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ನಾಯಕ,ರಮೇಶ ನಾಯಕ,ರಾಮಕೃಷ್ಣ ನಾಯಕ,ರಂಗಸ್ವಾಮಿ ನಾಯಕ ಇದ್ದರು.