SSLC ಫಲಿತಾಂಶ : ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯರಿಗೆ ಸನ್ಮಾನ
ಇಂಡಿ : 2023-24 ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 559 ಅಂಕ ಪಡೆದಿರುವ ಪ್ರೀತಿ ಸಿದ್ದು ಕೊಲ್ಲೂರು ಹಾಗೂ 591 ಅಂಕ ಪಡೆದಿರುವ ಸಾಕ್ಷಿ ಸೋಮಶೇಖರ್ ಪಟ್ಟಣಶೆಟ್ಟಿ ವಿಧ್ಯಾರ್ಥಿನಿಯರು ಶಾಲೆ ಹಾಗೂ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆಂದು ಎಸ್ ಡಿ ಎಮ್ ಸಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸನ್ಮಾನಿಸಿದ್ದಾರೆ.
ತಾಲ್ಲೂಕಿನ ಹಿರೇಮಸಳಿ ಅನುದಾನಿತ ಶಾಂತೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿನಿಯಾದ ಕುಮಾರಿ ಪ್ರೀತಿ ಸಿದ್ದು ಕಲ್ಲೂರ 559(90%) ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ. ಹಾಗೆಯೇ ಹಿರೇಮಸಳಿ ಗ್ರಾಮದ ಕುಮಾರಿ ಸಾಕ್ಷಿ ಸೋಮಶೇಖರ ಪಟ್ಟಣಶೆಟ್ಟಿ ಇವಳು ಸರಕಾರಿ ಪ್ರೌಢ ಶಾಲೆ ಗೋಳಸಾರ ಶಾಲೆಗೆ 591 ಅಂಕ ಪಡೆದು (ಪ್ರತಿಶತ 94%)ಪಡೆದು ಆ ಶಾಲೆಯ ಕೀರ್ತಿ ಹೆಚ್ಚಿಸಿದಲ್ಲದೆ ಹಿರೇಮಸಳಿ ಗ್ರಾಮ ಹೆಮ್ಮೆಯ ಪಡುವಂತಾಗಿದೆ. ಅದಲ್ಲದೇ ತಂದೆ ತಾಯಿಯ ಕನಸ್ಸು, ಆಸೆಯನ್ನು ಈಡೇರಿಸಿದ್ದಾಳೆ. ಆ ಎರಡೂ ಮಕ್ಕಳ ಮುಂದಿನ ವಿದ್ಯಾರ್ಥಿ ಜೀವನ ಚೆನ್ನಾಗಿರಲಿ ಎಂದು ಸರಕಾರಿ ಎಂ ಪಿ ಎಸ್ ಹಿರೇಮಸಳಿ ಶಾಲೆಯ ಎಸ್‌ಡಿಎಂಸಿಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳು, ಶಾಲೆಯ ಮುಖ್ಯ ಗುರುಗಳು, ಶಿಕ್ಷಕರು ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.