ಎಸೆಸೆಲ್ಸಿ ಪರೀಕ್ಷೆ -2 ಗಣಿತ ವಿಷಯದ ಪರೀಕ್ಷೆಯಲ್ಲಿ 611 ವಿದ್ಯಾರ್ಥಿಗಳ ಗೈರು
ವಿಜಯಪುರ, ಜೂನ್ 18 : Voice of Janata : ಶುಕ್ರವಾರ ನಡೆದ ಎಸ್ಸೆಸ್ಸೆೆಲ್ಸಿ ಪರೀಕ್ಷೆ-2ರ ಗಣಿತ ವಿಷಯದಲ್ಲಿ ಜಿಲ್ಲೆಯ ಒಟ್ಟು 3,588 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 2,977 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 611 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.