ಇಂಡಿ : ಕಲ್ಲು ಬಂಡೆಗಳನ್ನು ಮೂರ್ತಿಗಳನ್ನಾಗಿ ಮಾಡಿದ್ದಾರೆ. ಆ ಮೂರ್ತಿಗಳು ಸಮಾಜದಲ್ಲಿ ಪೂಜೆ ಸಲ್ಲಿಸುವಂತಹ ಮೂರ್ತಿಗಳಾಬೇಕು ಎಂದು ಪಟ್ಟಣದ ಸಿದ್ದಾರೂಡ ಮಠದ ಡಾ. ಸ್ವರಾಪನಂದ ಮಹಾಸ್ವಾಮಿಜಿ ಯವರು ಹೇಳಿದರು.
ಪಟ್ಟಣದ ಎಸ್ ಎಸ್ ಪ್ಯಾರಾಮೆಡಿಕಲ್ ಕಾಲೇಜಿನ ಆಶ್ರಯದಲ್ಲಿ ತೃತೀಯ ವರ್ಷದ ಡಿಎಚ್ಐ ಮತ್ತು ಡಿಎಮ್ ಎಲ್ ಟಿ ವಿಧ್ಯಾರ್ಥಿಗಳ ಬಿಳ್ಕೊಡುವ ಸಮಾರಂಭದ ವೇದಿಕೆಯಲ್ಲಿ ಸಾನಿಧ್ಯ ವಹಸಿ ಮಾತನಾಡಿದರು. ಬಿಳ್ಕೊಡುವ ಪದ್ದತಿ ನಿನ್ನೆ ಮೊನ್ನೆದಲ್ಲಾ ,ಇದು ಗುರುಕುಲ ಪಾರಂಪರಿಕಯಿಂದ ನಡೆದು ಬಂದಿದೆ ಎಂದರು. ಮೂರು ವರ್ಷಗಳ ಕಾಲ ಕಲಿತ್ತಿದ್ದು ಇನ್ನೂ ನಿಮ್ಮ ಜೀವನದಲ್ಲಿ ನಿಜವಾದ ಪರೀಕ್ಷೆ ಯಾಗಿ ನಿಲ್ಲುತ್ತೆ. ಅದನ್ನು ಸಮಾಜದಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿ ಎಸ್.ಬಿ. ಮಾಲಿ ಪಾಟೀಲ & ಪತ್ರಕರ್ತ ಶಂಕರ ಜಮಾದಾರ ಮಾತನಾಡಿದ ಅವರು, ಇಂದು ಬೀಳ್ಕೊಡುಗೆ ಸಮಾರಂಭದಲ್ಲಿ ಅಗಲುವ ವಿದ್ಯಾರ್ಥಿ ಅಂತರಾಳದಲ್ಲಿ ಹುದುಗಿದ್ದ ಸಿಹಿ-ಕಹಿ ನೆನಪುಗಳ ಬುತ್ತಿ ಒಂದೊಂದಾಗಿ ಬಿಚ್ಚ ತೊಡಗಿದ್ದು ಕಾಣುತ್ತೇವೆ ಎಂದರು. ಪೆಸ್ ಇಜ್ ಇಂಡ್ಯಾಕ್ಸ ಆಫ್ ಮೈಂಡ ಎನ್ನುವ ಹಾಗೇ ನಿಮ್ಮ ಮುಖದಲ್ಲಿ ನಿಮ್ಮ ಮಾತಲ್ಲಿ ಅಳು, ನೋವು, ನಲಿವು, ತೃಪ್ತಿ ಎಲ್ಲವೂ ಕಾಣುತ್ತೆ. ಉನ್ನತ ಶಿಕ್ಷಣ ಪಡೆಯುವ ಆನಂದ. ಜತೆಗಿದ್ದವರನ್ನು ಕಳಕೊಳ್ಳುವ ನೋವು. ಕಾಲೇಜಿನ ಸುಂದರ ರಸನಿಮಿಷಗಳನ್ನು ಅನು ಭವಿಸಿದ ತೃಪ್ತಿ ಅವಕಾಶಗಳನ್ನು ಸದುಪಯೋಗಪಡಿಸಲಾಗದ ಅಸಂತೃಪ್ತಿ ಇದು ನಿಮ್ಮಲ್ಲಿ ಕಾಣುತ್ತೆ ಎಂದರು.
ಯಾವತ್ತು ಭಯಪಡಬೇಡಿ ಆ ಭಯ ನಿಮಗೆ ಸೋಲು ತಂದು ಕೊಡುತ್ತದೆ. ಭಯ, ಆತಂಕ, ಮುಜರಗ ಮೆಟ್ಟಿನಿಲ್ಲಿ, ಸಿಕ್ಕ ವೇದಿಕೆ, ಅವಕಾಶ ಸರಿಯಾಗಿ ಉಪಯೋಗಿಸಿಕೊಳ್ಳಿ ಸಮಾಜದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ ನಿಮ್ಮನ್ನ ದೇವರೆಂದು ಎಂದು ಸಮಾಜ ಕಾಣುತ್ತೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್.ಬಿ.ಕೆಂಬೋಗಿ ಮಾತಾನಾಡಿ, ನೀವು ದುಃಖ ಪಡುವ ಅವಶ್ಯಕತೆ ಇಲ್ಲ. ನಿಮ್ಮ ಉನ್ನತ ಶಿಕ್ಷಣಕ್ಕೆ, ವೃತ್ತಿ ಪರ ಸುಂದರ ಜೀವನಕ್ಕೆ ಕಾಲಿಡುತ್ತಿದ್ದಿರಿ ಎಂದು ಸಂತೋಷಪಡಿ ಎಂದು ಹೇಳಿದರು. ನಿಮ್ಮ ಶ್ರಮ, ಪ್ರಯತ್ನ ವಿದ್ದರೆ ಖಡಾಖಂಡಿತವಾಗಿಯೂ ಗೆಲ್ಲುತ್ತಿರಿ. ಒಂದು ವೇಳೆ ಇನ್ನೊಬ್ಬರ ಮೇಲೆ ಆಧಾರವಾಗಿ ನಿಂತರೆ ನಿಮ್ಮ ಭವಿಷ್ಯಕ್ಕೆ ಕಠಿಣವಾದ ಸವಾಲುಗಳು ಕಾಣಿಸುತ್ತವೆ. ಯಾವಾಗೊ ಒಂದು ಬಾರಿ ಕಲ್ಲು ಹೊಡೆದು ನನಗೆ ಯಶಸ್ವಿ ಸಿಗಲಿಲ್ಲ ವೆಂದು ಬೇಜಾರು, ಜಿಗುಪ್ಸೆ ಗೊಂಡರೆ ನಿಮ್ಮ ಜೀವನ ವೈಫಲ್ಯ ವಾಗುತ್ತೆ. ತಾವು ಸತತ ಪ್ರಯತ್ನ ಮಾಡಿದ್ರೆ ಎಲ್ಲದರಲ್ಲೂ ಯಶಸ್ವಿ ಕಾಣುತ್ತಿರೆಂದು ಹೇಳಿ, ಶುಭವಾಗಲೆಂದು ಹಾರಿಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರು ಡಾ. ಸಾಗರ ಕಂಬಾರ, ಉಪನ್ಯಾಸಕ ಮಹಾಂತೇಶ ಪಾಟೀಲ, ಮುಕ್ತಮ ಮುಲ್ಲಾ, ಗಣಪತಿ ಹೂಗಾರ, ಶ್ರೀಶೈಲ ಹೂಗಾರ, ಸೌಮ್ಯ ರೂಗಿ, ಬಲರಾಮ ಬಂಡಿವಡ್ಡರ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.