ಅಫಜಲಪುರ: ತಾಲೂಕಿನ ಸುಕ್ಷೇತ್ರ ಕುಬೇರ ಕರಜಗಿಯ ಶ್ರೀ ಯಲ್ಲಾಲಿಂಗೇಶ್ವರ ಜಾತ್ರಾ ಮಹೋತ್ಸವ ಇದೆ ಶುಕ್ರವಾರ ಮಾರ್ಚ್ 10 ರಂದು ಸಾಯಂಕಾಲ 6:00ಗೆ ಶ್ರೀ ಯಲ್ಲಾಲಿಂಗೇಶ್ವರರ ಭವ್ಯ ಮೆರವಣಿಗೆ ಶ್ರೀ ಡಾ: ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯುವುದು. ರಾತ್ರಿ 10:00 ಗಂಟೆಗೆ ಮದ್ದು ಪಟಾಕಿ ಸುಡಲಾಗುವುದು. ಮಾಚ್೯ 11 ಶನಿವಾರ ಬೆಳಗ್ಗೆ 6 ಗಂಟೆಗೆ ಶ್ರೀಯಲ್ಲಾಲಿಂಗೇಶ್ವರ ಹಾಗೂ ಶ್ರೀ ಸಿದ್ದರಾಮ ಶಿವಯೋಗಿಗಳ ಕತೃು೯ ಗದ್ದುಗೆ ಮಹಾ ರುದ್ರಾಭಿಷೇಕ ಮಧ್ಯಾಹ್ನ 12:38 ನಿಮಿಷಕ್ಕೆ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಗ್ರಾಮಸ್ಥರ ಸದಿಚ್ಛೆಯಂತೆ ಸರ್ವಧರ್ಮ ಸಾಮೂಹಿಕ ವಿವಾಹ ನಡೆಯುವುದು ಈ ಸಾಮೂಹಿಕ ವಿವಾಹದಲ್ಲಿ 45 ನವ ಜೋಡಿಗಳು ಹಸೆಮಣೆ ಎರಲಿದ್ದಾರೆ. ವಧು ವರರಿಗೆ ರಾಜಕುಮಾರ್ ಜಿಡ್ಡಗಿ ರವರಿಂದ ಮಾಂಗಲ್ಯ ಮತ್ತು ಕಾಲುಂಗುರ ಸೇವೆ, ಶಿವಕುಮಾರ್ ಬಿರಾದಾರ್ ರವರಿಂದ ಬಟ್ಟೆ ಆಯೇರಿ ಸೇವೆ, ಶಿವಲಿಂಗಯ್ಯ ಹಿರೇಮಠ್ ರವರಿಂದ ಭಾಸಿಂಗ ಹಾಗೂ ಹೂವಿನ ಹಾರದ ಸೇವೆ ಈ ಜಾತ್ರೆಯಲ್ಲಿ ಅನ್ನದಾಸೋಹ ನಿತಿನ್ ವ್ಹಿ ಗುತ್ತೇದಾರ್ ರವರಿಂದ ಅನ್ನದಾಸೋಹ ಸೇವೆ ಇರುತ್ತದೆ ಸಾಯಂಕಾಲ 6:00ಗೆ ಶ್ರೀ ಯಲ್ಲಾಲಿಂಗೇಶ್ವರ ಭವ್ಯ ರಥೋತ್ಸವ ಜರಗುವುದು ಅದೇ ದಿನ ರಾತ್ರಿ 10:00ಗೆ ಸಾಮಾಜಿಕ ನಾಟಕ ಸಾಕು ತಂಗಿಯ ಸಂಕಟ ಅಥಾ೯ತ ಸಹೋದರರ ಪರದಾಟ ಸುಂದರ ಸಾಮಾಜಿಕ ನಾಟಕ ಇರುತ್ತದೆ ರವಿವಾರ ಮಾಚ್೯ 12ರಂದು ಬೆಳಗ್ಗೆ ಡೊಳ್ಳಿನ ಪದಗಳು ಮದ್ಯಾನ 3:00ಗೆ ಪೈಲವಾನರಿಂದ ಜಂಗಿ ಕುಸ್ತಿಗಳು ನಡೆಯುವುದು ರಾತ್ರಿ 10:00ಗೆ ಪಾರಿಜಾತ ನಾಟಕ ವಿರುತ್ತದೆ ಎಂದು ಶ್ರೀಮಠದ ಕಮಿಟಿಯವರು ತಿಳಿಸಿರುತ್ತಾರೆ..