ಅಫಜಲಪುರ : ನಾಳೆಯಿಂದ ಸತತವಾಗಿ ಮೂರು ದಿನಗಳ ಕಾಲ ಯಲ್ಲಾಲಿಂಗೇಶ್ವರ ಜಾತ್ರೆ ನಡೆಯಲಿದ್ದು, ಜಾತ್ರೆಯ ಮೊದಲ ದಿನ ಶ್ರೀ ಯಲ್ಲಾಲಿಂಗ ಮಹಾರಾಜರ ಭವ್ಯ ಮೆರವಣಿಗೆ, ಅದೇ ದಿನ ರಾತ್ರಿ ಮದ್ದು ಸುಡುವ ಕಾರ್ಯಕ್ರಮ, ದಿ.21 ರಂದು ಸೋಮವಾರ ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರಾಘ ರಾಜೇಂದ್ರ ಮಹಾ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ ಜರುಗಲಿವೆ.
ಅಲ್ಲದೆ ಸಾಯಂಕಾಲ ಯಲ್ಲಾಲಿಂಗ ಮಹಾರಾಜರ ಭವ್ಯ ರಥೋತ್ಸವ, ರಾತ್ರಿ ಸುಂದರ ಸಾಮಾಜಿಕ ನಾಟಕ , ಮರುದಿನ 22 ರಂದು ಸಾಯಂಕಾಲ 4 ಗಂಟೆಗೆ ಜಂಗಿ ಕುಸ್ತಿ ನಡೆಯುವುದು ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ: