ಮುದ್ದೇಬಿಹಾಳ :ತಾಲ್ಲೂಕಿನ ಢವಳಗಿ ಗ್ರಾಮದಲ್ಲಿ ಶ್ರೀ ಮಡಿವಾಳೇಶ್ವರರ ೫೧೮ನೇ ಜಾತ್ರಾ ಮಹೋತ್ಸವವು ಮಾರ್ಚ ೦೮ ರಿಂದ ೧೪ರ ವರೆಗೆ ಅತಿ ವಿಜೃಂಭಣೆಯಿಂದ ಜರುಗುವುದು.
ಮಾರ್ಚ ೮ ರಂದು ಶ್ರೀಮದ್ಧಗಿರಿರಾಜ ಶ್ರೀಶೈಲ ಸೂರ್ಯ ಸಿಂಹಾಸನಾಧಿಶ್ವರ ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಡಾ.ಚನ್ನಸಿದ್ದರಾಮ ಶಿವಾಚಾರ್ಯ ಭಗವತ್ಪಾದರ ಅದ್ದೂರಿ ಜೋಡು ಅಡ್ಡಪಲ್ಲಕ್ಕಿ ಮಹೋತ್ಸವ , ಧರ್ಮಸಭೆ ಮತ್ತು ಸನ್ಮಾನ ಸಮಾರಂಭ ಜರುಗುವುದು. ಮಾರ್ಚ ೦೯ ರವಿವಾರಂದು ಮುಂಜಾನೆ ೮ಗಂಟೆಗೆ ಜಂಗಮ ವಟುಗಳಿಗೆ ಅಯ್ಯಾಚಾರ ಉಪದೇಶ. ಸಾಯಂಕಾಲ ೫ ಗಂಟೆಗೆ ಭವ್ಯ ರಥೋತ್ಸವ ಜರುಗುವುದು. ರಾತ್ರಿ ೧೦ ಗಂಟೆಗೆ ಕಲಾಸಿಂಚನ ಮೆಲೋಡಿಸ್ ಇವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ನಡೆಯುವುದು. ಮಾರ್ಚ೧೦ ಸೋಮವಾರಂದು ದೇಹದಾರ್ಡ್ಯ ಸ್ಪರ್ದೇಗಳಾದ ಭಾರವಾದ ಗುಂಡು, ಚೀಲ, ಸಂಗ್ರಾಣಿ ಕಲ್ಲು ಎತ್ತುವುದು ಮತ್ತು ಸಂಗ್ರಾಣಿ ಕಲ್ಲು ಒತ್ತುಗಲ್ ಮಾಡುವುದು. ಮಾರ್ಚ ೧೧ ಮಂಗಳವಾರಂದು ಮುಂಜಾನೆ ೧೦ ಗಂಟೆಗೆ ರಾಜ್ಯ ಮಟ್ಟದ ತೇರಬಂಡಿ ಸ್ಪರ್ದೇ ಇರುವುದು. ಅಂದೇ ರಾತ್ರಿ ೧೦ ಗಂಟೆಗೆ ಝೇಂಕಾರ ಮೆಲೋಡಿಸ್ ಇವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಇರುವುದು. ಮಾರ್ಚ ೧೨ ಬುಧವಾರ ದಂದು ಮಧ್ಯಾಹ್ನ ೩ ಗಂಟೆಗೆ ಜಾನುವಾರಗಳ ಪ್ರದರ್ಶನ ಜೋಡೆತ್ತುಗಳಿಂದ ಭಾರವಾದ ಕಲ್ಲು ಜಗ್ಗಸುವದು ಸ್ಪರ್ಧೆ ಇರುತ್ತದೆ. ಮಾರ್ಚ೧೩ ರಂದು ಮದ್ಯಾಹ್ನ ೩ ಗಂಟೆಗೆ ಎತ್ತುಗಳಿಂದ ದಿಂಡು ಬಡಿಯುವ ಸ್ಪರ್ದೆ ಇರುವುದು. ಮಾರ್ಚ ೧೪ ಶುಕ್ರವಾರದಂದು ಮದ್ಯಾಹ್ನ ೩ ಗಂಟೆಗೆ ಪುಟ್ಟಿಗಾಡಿ ರೇಸ್ ಇರುವುದು. ಅಂದೇ ಸಾಯಂಕಾಲ ೫ ಗಂಟೆಗೆ ಕಳಶ ಇಳಿಸುವುದು ಹಾಗೂ ಹಂಪಾಕೋಡುವುದು ಎಂದು ಶ್ರೀಮಠದ ಧರ್ಮಾದಿಕಾರಿಯಾದ ಶ್ರೀಘನಮಠೇಶ್ವರ ಸ್ವಾಮೀಜಿ ಗದ್ದುಗೆಮಠ ಅವರು ಪ್ರಕಟಣೆಗೆ ತಿಳಿಸಿದ್ದಾರೆ.