ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ಉಪನಯನ
ಇಂಡಿ : ತಾಲೂಕಾ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಇಂಡಿ ವತಿಯಿಂದ ಮೇ ಒಂದು ಮತ್ತು ಎರಡ ರಂದು ಶ್ರೀ ಕಾಳಿಕಾ ದೇವಿ ಜಾತ್ರೆ ಮತ್ತು ಉಪನಯನ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ.
ಮೇ ೧ ರಂದು ಬೆಳಗ್ಗೆ ೫ ಗಂಟೆಗೆ ದೇವಿಗೆ ಮಹಾಭಿಷೇಕ, ಹೋಮಹವನ, ಸಾಯಂಕಾಲ ೪ ರಿಂದ ೬ ಗಂಟೆಯ ವರೆಗೆ ಸುಮಂಗಲೆಯರಿAದ ಉಡಿ ತುಂಬುವ ಕಾರ್ಯಕ್ರಮ,
ಮೇ ೨ ರಂದು ಪ್ರಾಥಕಾಲ ೪ ಗಂಟೆಯಿAದ ದೇವಿಗೆ ಮಹಾಭಿಷೇಕ ಹಾಗೂ ಅಲಂಕಾರ, ಪೂಜೆ, ಬೆಳಗ್ಗೆ ೭ ಗಂಟೆಯಿAದ ೯ ಗಂಟೆಯ ವರೆಗೆ ವಟಗಳಿಗೆ ಅರಿಷಿಣ ಹಚ್ಚುವದು ಹೋಮ ಹವನ ವಟುಗಳಿಗೆ ಅಕ್ಷತಾ ಕಾರ್ಯಕ್ರಮ ನಂತರ ಕಾಶಿಯಾತ್ರೆ ಮಧ್ಯಾನ್ಹ ೧೨ ಗಂಟೆಗೆ ಪುರವಂತರ ಸೇವೆಯೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುವದು.
ಶುಕ್ರವಾರ ಮೇ ೨ ರಂದು ಮಧ್ಯಾಹ್ನ ೧೨ ಗಂಟೆಗೆ ಧರ್ಮಸಭೆ ನಡೆಯುವದು.
ಶ್ರೀ ವಿಶ್ವಕರ್ಮ ಜಗದ್ಗುರು ಮೂರುಘಾವಧೀಶ್ವರ ಸಂಸ್ಥಾನಮಠ ಅಫಜಲಪುರದ ಶ್ರೀ ಮೌನೇಶ್ವರ ಶ್ರೀಗಳು, ಅಡವಿಲಿಂಗ ಶ್ರೀಗಳು, ಬೋರಗಿ ತೆರದಾಳದ ಮಹಾಲಿಂಗೇಶ್ವರ ಶ್ರೀಗಳು,ಬರಡೋಲದ ಪ್ರಣವ ಭಾಸ್ಕರಾನಂದ ಶ್ರೀಗಳು, ಹಿಕ್ಕಣಗುತ್ತಿಯ ಪ್ರಭುಲಿಂಗ ಶ್ರೀಗಳು, ಆಲಮೇಲದ ಮುರಳಿ ಮುತ್ಯಾ ಇಂಡಿಯ ವಿಠ್ಠಲಾಚಾರ್ಯರರು, ಶಾಸಕ ಯಶವಂತಗೌಡ ಪಾಟೀಲ , ಇಂಡಿ ತಾಲೂಕಾ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಅಧ್ಯಕ್ಷ ಭೀಮರಾಯ ಬಡಿಗೇರ ಅನೀಲ ಬಡಿಗೇರ ತಹಸೀಲ್ದಾರರು ಶಿರಹಟ್ಟಿ, ರಾಜ್ಯ ಕೆಪಿಸಿಸಿ ಇತರೆ ಹಿಂದುಳಿದ ವರ್ಗ ಶ್ರೀಮತಿ ಪವಿತ್ರಾ ಪ್ರಭಾಕರ ಆಚಾರ, ರಾಜ್ಯಾಧ್ಯಕ್ಷರು ಮಹಿಳಾ ಘಟಕದ ಶ್ರೀಮತಿ ಲಕ್ಷಿö್ಮÃ ಭಾಸ್ಕರ ಬಡಿಗೇರ ಉಪಸ್ಥಿತರಿರುವರು ಎಂದು ವಟುಗಳ ಹೆಸರು ನೊಂದಣ ಗಾಗಿ ೯೫೩೮೬೪೨೨೦೨, ೯೯೮೦೩೨೩೯೯೪, ೯೫೯೧೬೯೬೬೬೫ ಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಿದ್ದಾರೆ.



















