ಶ್ರೀ ಜಲದೇಶ್ವರ ಜಾತ್ರಾ ಮಹೋತ್ಸವ..! ಎಂತಹ ಅದ್ದೂರಿ..!
ವಿಜಯಪುರ : ಜಿಲ್ಲೆಯ ಇಂಡಿ ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದ ಒಡೆಯನಾದ ಶ್ರೀ ಜಲದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಆ ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿದೆ.ದಿನಾಂಕ:16-08-2025ಶನಿವಾರ ಬೆಳಿಗ್ಗೆ 6 ಗಂಟೆಗೆ ಶ್ರೀ ಜಲದೇಶ್ವರ ಗದ್ದುಗೆಗೆ ರುದ್ರಾಭಿಷೇಕ ಜರುಗುವುದು,ನಂತರ ಅದೇ ದಿನ ಬೆಳಿಗ್ಗೆ 10 ಗಂಟೆಗೆ ಸರಳ ಸಾಮೂಹಿಕ ವಿವಾಹ ಜರುಗುವುದು, ಸಾಯಂಕಾಲ 6 ಗಂಟೆಗೆ ಏಳೂರ ಪಲ್ಲಕ್ಕಿ ಆಗಮನ, ನಂತರ ಚಿತ್ರ ವಿಚಿತ್ರ ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ, ಮತ್ತೆ ದಿನಾಂಕ 17-08-2025 ರವಿವಾರ ರಂದು ಬೆಳಿಗ್ಗೆ 8ಗಂಟಗೆ ಹನುಮಾನ್ ದೇವಸ್ಥಾನದಿಂದ ಜಲದೇಶ್ವರ ದೇವಸ್ಥಾನದ ವರೆಗೆ ಸುಮಂಗಲಿರಿಯಿಂದ ಆರತಿ ಮತ್ತು ಕುಂಭ ಮೆರವಣಿಗೆ ಜರುಗಲಿದೆ.ನಂತರ ಅದೆ ದಿನ ಹಗಲು ಮತ್ತು ರಾತ್ರಿ ಸುಪ್ರಸಿದ್ಧ ಡೋಳ್ಳಿನ ಪದಗಳು ಜರುಗಲಿದ್ದು, 18-8-2025ಸೋಮವಾರ ರಂದು ಮಾವಿನಹಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿಗಳ ಮೆರವಣಿಗೆ, ಮತ್ತು ಪೂಜಾರಿಗಳಿಂದ ಹೇಳಿಕೆಗಳು ನಡೆಯುವುದು,ನಂತರ ಪಲ್ಲಕ್ಕಿಗಳ ಇದರಬೇಟ್ಟಿ ಜರುಗುವುದು.ಹೀಗೆ ಇದರ ಜೋತೆಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಆದಕಾರಣ ಜಲದೇಶ್ವರನ ಸಮಸ್ತ ಸದ್ಭಕ್ತರು ಹಚ್ಚಿನ ಜನಸಂಖ್ಯೆಯಲ್ಲಿ ಆಗಮಿಸಿ ಆಶೀರ್ವಾದ ಪಡೆದು ಪುನಿತರಾಗಿ ಬೇಕಾಗಿ ವಿನಂತಿಸುತ್ತೇನೆ.