ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಪಲ್ಲಕ್ಕಿ ಉತ್ಸವ
ಇಂಡಿ : ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಪಲ್ಲಕ್ಕಿ ಉತ್ಸವದೊಂದಿಗೆ ಅದ್ದೂರಿಯಾಗಿ ಜರುಗಿತು.
ತಾಲ್ಲೂಕಿನ ಹಿರೇರೂಗಿ ಗ್ರಾಮದಲ್ಲಿ ಶ್ರೀ ಗುರು ರೇವಣಸಿದ್ದೇಶ್ವರ ಪಲ್ಲಕ್ಕಿ, ತೆನ್ನಳ್ಳಿ ಜನವರಿಸಿದ್ಧ ಪಲ್ಲಕ್ಕಿ, ಬನ್ನಟ್ಟಿ ಲಕ್ಷ್ಮಿ ಲಾಯಮ್ಮ ಪಲ್ಲಕ್ಕಿ, ತಡವಲಗಾ ಮಡ್ಡಿಸಿದ್ದ ಪಲ್ಲಕ್ಕಿ, ಬೋಳೆಗಾಂವ ಶಾವರಸಿದ್ದ ಪಲ್ಲಕ್ಕಿ ಹಾಗೂ ಜಟ್ಟಿಂಗೇಶ್ವರ ಪಲ್ಲಕ್ಕಿ ಆಗಮಿಸಿದ್ದು, ಪಲ್ಲಕ್ಕಿ ಉತ್ಸವ ಜರುಗಿತು. ತದನಂತರ ರೇವಣಸಿದ್ಧೇಶ್ವರ ಗುಡಿಯಲ್ಲಿ ಹೂವಿನ ಅಲಂಕಾರದೊಂದಿಗೆ ದೇವಸ್ಥಾನ ಗರ್ಭ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸಲಾಯಿತು.
ತದನಂತರಹಾಡಕಿ ಶ್ರೀ ಗುರು ರೇವಣ ಸಿದ್ದೇಶ್ವರ ಗಾಯನ ಸಂಘ ಹನುಮಂತ ಗಿಣ್ಣಿ ಸಂಗಡಿಗರು ಹಾಗೂ ಜಟ್ಟಿಂಗೇಶ್ವರ ಗಾಯನ ಸಂಘ ಜಟ್ಟಪ್ಪ ಮಿರಗಿ ಸಂಗಡಿಗರು,ಸಂಗೊಳ್ಳಿ ರಾಯಣ್ಣನ ಗಾಯನ ಸಂಘ ಎಲ್ಲಪ್ಪ ಕೇಸುಗೂಳ ಸಂಗಡಿಗರು,ತೆನ್ನಳ್ಳಿ ಜನವರಿಸಿದ್ಧ ಡೊಳ್ಳಿನ ಗಾಯನ ಸಂಘ. ಸೇರಿದಂತೆ ಅನೇಕರು ತಮ್ಮ ಗಾಯನ ಮೂಲಕ ಜಾತ್ರೆಯಲ್ಲಿ ಪರಂಪರೆಯ ಜಾತ್ರೆ ಮಾಡಿದರು.
ಈ ಸಂದರ್ಭದಲ್ಲಿ ಜಾತ್ರೆಯ ಉಸ್ತುವಾರಿ ಪೀರಪ್ಪ ಜೋತಗೊಂಡ, ಸೈದಪ್ಪ ಜೊತಗೊಂಡ, ಜಟ್ಟೆಪ್ಪ ಜೊತಗೊಂಡ, ಬನ್ನಪ್ಪ ಜೋತಗೊಂಡ,ನಿಂಗಪ್ಪ ಜೋತಗೊಂಡ , ರೇವಣಸಿದ್ದ ಜೋತಗೊಂಡ,ಹಣಮಂತ ಜೋತಗೊಂಡ ವಹಿಸಿಕೊಂಡಿದ್ದರು.