ಅಫಜಲಪುರ: ತಾಲೂಕಿನ ಶೇಷಗಿರಿ ಗ್ರಾಮದಲ್ಲಿ ಮೇ 30 ಹಾಗೂ 31 ರಂದು ಶ್ರೀ ಗುರು ಗಂಗಲಿಂಗ ಮಹಾರಾಯರ ಹಾಗೂ ಚಂಪಾದೇವಿ ಜಾತ್ರಾ ಮಹೋತ್ಸವ ಜರುಗಲಿದೆ. 30 ರಂದು ಸೋಮವಾರ ರಾತ್ರಿ 9 ಗಂಟೆಗೆ ಪಲ್ಲಕ್ಕಿಗಳು ಭೀಮಾ ನದಿಗೆ ಹೋಗಿ ಗಂಗಿಸ್ನಾನ ಮಾಡಿಕೊಂಡು ಹೂವು ಮುಡಿಸುವುದು, ಶ್ರೀ ಆಕಾಶರಾಯ ಹಾಗೂ ಶ್ರೀ ಗುರು ಗಂಗಲಿಂಗ ಮಹಾರಾಯರ ಪಲ್ಲಕ್ಕಿಗಳ ಮೆರವಣಿಗೆ, ನವಿಲು ಕುಣಿತ, ಕುದುರೆ ಕುಣಿತ, ವಿವಿಧ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗುವುದು. ನಂತರ ರಂಗು ರಂಗಿನ ಮದ್ದು ಸುಡುವ ಕಾರ್ಯಕ್ರಮ, ರಾತ್ರಿ 10 ಗಂಟೆಯಿಂದ ಬೆಳಗಿನ ಜಾವದವರೆಗೆ ಶ್ರೀ ಆಕಾಶರಾಯ, ಮತ್ತು ಗಂಗಲಿಂಗ ಮಹಾರಾಯ ಡೊಳ್ಳಿನ ಸಂಘದವರಿಂದ, ಸುಪ್ರಸಿದ್ಧ ಡೊಳ್ಳಿನ ಪದಗಳು, ಹರದೇಶಿ ನಾಗೇಶಿ ಗೀ ಗೀ ಪದಗಳು ಜರುಗುವವು. 31 ರಂದು ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಶ್ರೀ ಗಂಗಲಿಂಗ ಮಹಾರಾಯರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಹರದೇಶಿ-ನಾಗೇಶಿ, ಗೀ ಗೀ ಪದಗಳು ಜರುಗುವವು. ನಂತರ ಸುಪ್ರಸಿದ್ಧ ಪೈಲ್ವಾನರಿಂದ ಜಂಗೀ ಕುಸ್ತಿಗಳು, ಜರುಗುವವು. ನಂತರ ಪ್ರಸಾದ ವಿತರಣೆ ನಡೆಯುವುದು. ಜಾತ್ರೆಯ ಅಂಗವಾಗಿ 29 ರಂದು ಹಾಗೂ 31 ರಂದು ಸೇಡಿನ ಕ್ರಾಂತಿ ಎಂಬ ನಾಟಕ ಜರುಗುವುದು. ಜಾತ್ರೆಗೆ ಬರುವ ಭಕ್ತಾದಿಗಳಿಗೆ ಅಫಜಲ್ಪುರ ಹಾಗೂ ಇಂಡಿಯಿಂದ ಬಸ್ಸಿನ ಸೌಲಭ್ಯ ಇರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಗೆ ಆಗಮಿಸಬೇಕು ಎಂದು ಶ್ರೀ ಗಂಗಲಿಂಗ ಮಹಾರಾಯ ಹಾಗೂ ಚಂಪಾದೇವಿ ಟ್ರಸ್ಟ್ ಕಮೀಟಿಯವರು ತಿಳಿಸಿದ್ದಾರೆ.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.