ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಲು ಕ್ರೀಡೆ ಅತಿಮುಖ್ಯ : ಶಾಸಕ ಎಂ ಆರ್ ಮಂಜುನಾಥ್
ವರದಿ: ಚೇತನ್ ಕುಮಾರ್ ಎಲ್,ಚಾಮರಾಜನಗರ
ಹನೂರು :ಕ್ರೀಡೆಯು ನಮ್ಮ ದೇಹದಲ್ಲಿನ ಬೆಳವಣಿಗೆಗೆ ಉತ್ತಮವಾದ ರೀತಿಯಲ್ಲಿ ಪ್ರಯೋಜನಕಾರಿಯಾಗುತ್ತದೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ವು ಯುವಕರು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಸಂತೋಷದ ಬೆಳವಣಿಗೆ ಎಂದು ಶಾಸಕರಾದ ಎಮ್ ಆರ್ ಮಂಜುನಾಥ್ ತಿಳಿಸಿದರು .
ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿ ಯುವಕರ ಬಳಗದಿಂದ ಆಯೋಜಿಸಿದ್ದ ಐಪಿಎಲ್ ಮಾದರಿಯ ಕ್ರೀಡೆಗೆ ಚಾಲನೆ ನೀಡಿ ನಂತರ ಮಾತನಾಡಿ ಅವರು ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಲು ಕ್ರೀಡೆ ಅತಿ ಮುಖ್ಯವಾಗಿದೆ. ಒಬ್ಬ ಮನುಷ್ಯ ಆರೋಗ್ಯವಂತರಾಗಿರಲು ಕ್ರೀಡೆ ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚಿನ್ನವೆಂಕಟ್, ಯಾರಂಬಡಿ ಹುಚ್ಚಯ್ಯ, ಗೋವಿಂದ,ತಂಗವೇಲು,ಸೇವಿ,ಕುಮಾರ್,ರಾಜೇಂದ್ರ,ಜಡೇಸ್ವಾಮಿ,ಕೃಷ್ಣಪ್ಪ, ಮುನಿಯಪ್ಪ,ಮುಖಂಡರುಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.


















