ವಿದ್ಯಾನಿಧಿ ಶಾಲೆಯಲ್ಲಿ ಕ್ರೀಡಾ ದಿನಾಚರಣೆ
ಇಂಡಿ : ತಾಲೂಕಿನ ಲಚ್ಯಾಣ ಗ್ರಾಮದ ಹೊರವಲಯದ ವಿದ್ಯಾನಿಧಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ವಿಶ್ವ ಕ್ರೀಡಾ ದಿನಾಚರಣೆ ಅಂಗವಾಗಿ ವಿವಿಧ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಅಂಬಣ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಕ್ರೀಡೆ ಅತಿ ಮುಖ್ಯ. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಶಾಲೆ ಪ್ರಗತಿಪಥದತ್ತ
ಸಾಗುತ್ತಿರುವುದು ಸಂತಸ ಸಂಗತಿ ಎಂದು
ಅಭಿಪ್ರಾಯ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ ಖೋಖೋ, ಕಬಡ್ಡಿ, ಲಗೋರಿ ಸೇರಿದಂತೆ ವಿವಿಧ ಕ್ರೀಡಾ ಕೂಟಗಳು ಜರುಗಿದವು.
ವಿಶೇಷವಾಗಿ ಮಕ್ಕಳ ಪಾಲಕರಿಗಾಗಿಯೂ ಕ್ರೀಡೆ
ಜರುಗಿದವು. ಬಳಿಕ ವಿಜೇತರಿಗೆ ಬಹುಮಾನ
ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎಂ.ಕೆ. ಬಿರಾದಾರ್ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಚಂದ್ರಕಾಂತ್ ಬಿರಾದಾರ್
ಅಧ್ಯಕ್ಷತೆವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸಿದ್ದನಗೌಡ ಬಿರಾದಾರ್ ಸಂಸ್ಥೆಯ ಕಾರ್ಯದರ್ಶಿ ಮೀನಾಕ್ಷಿ ಬಿರಾದಾರ್, ಶಾಲಾ ಸಿಬ್ಬಂದಿಯಾದ ಶಾಲಾ ಶಿಕ್ಷಕಿ ಪ್ರೀತಿ, ಕಲಾವತಿ, ಚಂದಮ್ಮ, ಸುಷ್ಮಾ ಹಾಗೂ ಮಕ್ಕಳ ಪಾಲಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.