ಸಾಧಕನಿಗೆ ಸನ್ಮಾನನಿಸುವದು ಸೌಭಾಗ್ಯ.!
ಇಂಡಿ : ರಾಷ್ಟ್ರೀಯ ಹಾಕಿ ಕ್ರೀಡಾಪಟು ಧ್ಯಾನಚಂದ ಜನ್ಮ ದಿನಾಚರಣೆಯ ನಿಮಿತ್ಯ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಸರಕಾರಿ ಕೆ ಜಿ ಎಸ್ ಶಾಲೆಯಲ್ಲಿ ಬಹು ವಿಶಿಷ್ಟವಾಗಿ ಆಚರಿಸಲಾಯಿತು.
ಪಟ್ಟಣದ ಗಾಂಧಿ ಚೌಕನಲ್ಲಿರುವ ಪ್ರತಿಷ್ಠಿತ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ 19 ವಯಸ್ಸಿನ ಖೋ ಖೋ ತಂಡಕ್ಕೆ ಆಯ್ಕೆಯಾದ ಭತಗುಣಕಿ ಗ್ರಾಮದ ಸಾಗರ ಗೊಂದಳಿ ಕ್ರೀಡಾಪಟುವನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ಶ್ರೀಧರ ಹಿಪ್ಪರಗಿ ಸಿ ಆರ್ ಸಿ ಮಾತನಾಡಿ ಸಾಗರ ಗೊಂದಳಿ ಅತ್ಯಂತ ಬಡ ಕುಟುಂಬದ ಗುಡಿಸಲು ಪ್ರತಿಭೆ ರಾಷ್ಟ್ರ ಮಟ್ಟದಲ್ಲಿ ಉಜ್ವಲವಾಗಿ ಬೆಳಕಿಗೆ ಬಂದಿದೆ ತಾಲೂಕಿನ ಇಂತಹ ಯುವ ಮಾಂತ್ರಿಕ ಆಟಗಾರನನ್ನು ಸನ್ಮಾನಿಸುವದು ನಮ್ಮ ಬದುಕಿನ ಸೌಭಾಗ್ಯದ ಸಂಗತಿ ಮತ್ತು ಇದೊಂದು ಪುಣ್ಯದ ಕಾರ್ಯ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಇನ್ನೊರ್ವ ಅತಿಥಿ ಬಿ ಆರ್ ಪಿ ಆರ್ ಸಿ ಮೇತ್ರಿಯವರು ಕಮಲ ಕೆಸರಿನಲ್ಲಿ ಹುಟ್ಟಿದರೂ ಕೂಡಾ ಕಮಲ ಕೆಸರಿನಿಂದ ಮೈಕೊಡವಿಕೊಂಡು ಅರಳಿದಂತೆ ತನ್ನಲ್ಲಿರುವ ಬೆಳೆಯುವ ಗುಣವನ್ನು ಮತ್ತು ಛಲವಂತಿಕೆಯನ್ನು ಬೆಳಸಿಕೊಂಡ ರಾಷ್ಟ್ರ ಮಟ್ಟದ ಖೋ ಖೋ ಆಟಗಾರರ ಎಂದು ಗುರುತಿಸಿಕೊಂಡಿರುವದು ಬರದ ನಾಡು ವಿಜಯಪು ಜಿಲ್ಲೆಗೆ ಹಾಗೂ ಇಂಡಿ ತಾಲೂಕಿಗೆ ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಕೆ ಜಿ ಎಸ್ ಶಾಲೆಯ ಮಕ್ಕಳು ಏರೋಬಿಕ್ಸ ಎಕ್ಸರ್ ಸೈಜ್ ಎನ್ನುವ ವಿನೂತನ ನೃತ್ಯ ಮಾಡಿ ನೆರೆದವರ ಹುಬ್ಬೇರುವಂತೆ ಕುಣಿದು ಕುಪ್ಪಳ್ಳಿಸಿದರು ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುತಗಳಾದ ಯು ಎಚ್ ಚವ್ಹಾಣ ಹಾಗೂ ಶಾಲೆ ಸಮಸ್ತ ಗುರುಗಳು ಹಾಗೂ ಗುರುಮಾತೆಯರು ಹಾಜರಿದ್ದರು.