ಬ್ರಹ್ಮಕುಮಾರಿ ವಿವಿಯ ಬಾಬಾರಿಂದ
ಆಧ್ಯಾತ್ಮಿಕ ಕ್ರಾಂತಿ
ಇಂಡಿ : ಬ್ರಹ್ಮ ಬಾಬಾರವರು ಅಗರ್ಭ ಶ್ರೀಮಂತ – ರಾದರೂ ಎಂದಿಗೂ ಶ್ರೀಮಂತಿಕೆ ಕಡೆಗೆ ಒಲವು
ತೋರಲಿಲ್ಲ. ಆಧ್ಯಾತ್ಮಿಕತೆಯ ಮಂತ್ರ ಬೋಧನೆ ಮೂಲಕ ಮನುಕುಲದ ಸಮಗ್ರ ಸುಧಾರಣೆಗೆ ತಮ್ಮನ್ನು
ಅರ್ಪಿಸಿಕೊಂಡರು ಎಂದು ಬ್ರಹ್ಮಕುಮಾರಿ ವಿವಿ ಯ ಬಿ.ಕೆ. ಯಮುನಾ ಅಕ್ಕರವರು ಹೇಳಿದರು. ನಗರದ ಬ್ರಹ್ಮಕುಮಾರಿ ವಿವಿಯಲ್ಲಿ ಸಂಸ್ಥೆಯ ಸಂಸ್ಥಾಪಕ ಪ್ರಜಾಪಿತ ಬ್ರಹ್ಮ ಬಾಬಾರವರ 55 ನೇ ಸ್ಮøತಿ ದಿನಾಚರಣೆ ನಿಮಿತ್ಯ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
380 ಜನರಿಂದ ಕರಾಚಿಯ ಸಿಂಧ ಪ್ರಾಂತದ ಹೈದ್ರಾಬಾದದಲ್ಲಿ ಓಂ ಮಂಡಳಿಯಿಂದ ಆರಂಭವಾದ ಸಂಸ್ಥೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯಯಾಗಿ ಮಾರ್ಪಟ್ಟು ಜಗತ್ತಿನ 145 ರಾಷ್ಟ್ರಗಳಲ್ಲಿ ಸಂಸ್ಥೆಯನ್ನು ತೆರೆದು 50 ಸಾವಿರಕ್ಕೂ ಹೆಚ್ಚು ಮಾತೆಯರು ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭಾರತದಲ್ಲಿ15000 ಕೇಂದ್ರಗಳಿವೆ. ಬಾಬಾ ಅವರು ಆಧ್ಯಾತ್ಮಿಕ ಕ್ರಾಂತಿಗೆ ಒಂದು ಭದ್ರಬುನಾದಿ ಹಾಕಿಕೊಟ್ಟರು. ಇಂದು ಜಗತ್ತಿನಾದ್ಯಂತ ಬಾಬಾ ಅವರ ಸ್ಮøತಿ ದಿನವನ್ನು ವಿಶ್ವಶಾಂತಿಗಾಗಿ ಆಚರಿಸಲಾಗುತ್ತಿದೆ ಎಂದರು.
ಬ್ರಹ್ಮಕುಮಾರಿಯ ಬಿ.ಕೆ ಶ್ರೀದೇವಿ ಅಕ್ಕಾ ಮಾತನಾಡಿ ನಾವು ನೆಮ್ಮದಿಯಿಂದ ಇರಬೇಕಾದರೆ ಆರೋಗ್ಯ ಮುಖ್ಯ. ಯೋಗ, ಧ್ಯಾನದ, ಈಶ್ವರಿ ವಿವಿ ಧಾರ್ಮಿಕ ಮತ್ತು ಸಾಮಾಜಿಕ ಕಾಳಜಿ, ಬಾಬಾರವರ ಆದರ್ಶ ಬಗ್ಗೆ ಈಶ್ವರಿಯ ಪರಿವಾರ ಜಾಗೃತಿ ಮೂಡಿಸುತ್ತಿರುವದು ದೇಶಕ್ಕೆ ಮಾದರಿ ಎಂದರು. ಮುಂಜಾನೆಯಿಂದ ಧ್ಯಾನ, ರಾಜಯೋಗದ ಕುರಿತು ಈಶ್ವರಿಯ ಪರಿವಾರದವರಿಗೆ ತಿಳಿಸಿಕೊಡಲಾಯಿತು. ಬಾಬಾರವರ ಸ್ಮøತಿ ದಿನದ ನಿಮಿತ್ಯ ಜ. 1 ರಿಂದ 18 ರ ವರೆಗೆ 50 ಜನರು ನಿರಂತರ ರಾಜಯೋಗ ಮಾಡಿದರು.
ನಿವೃತ್ತ ಪ್ರಾಚಾರ್ಯ ಐ.ಬಿ.ಸುರಪುರ, ಶಿವಲಿಂಗಪ್ಪ
ಪಟ್ಟದಕಲ್ಲ, ವಿಶ್ವನಾಥ ಜಾಮಗೊಂಡಿ, ಅರವಿಂದ ಕಠಾರೆ, ರಾಜಶ್ರೀ ಕೋಳೆಕರ, ಲಲಿತಾ ಹೂಗಾರ, ಸಾವಿತ್ರಿ ಜಾಮಗೊಂಡಿ ಮಾತನಾಡಿದರು.
ಇದೇ ವೇಳೆ ರಾಜೇಶ್ವರಿ ಕ್ಷತ್ರಿಯವರು ಅಯೋದ್ಯೆಯಿಂದ
ಬಂದ ಮಂತ್ರಾಕ್ಷತೆ ಮತ್ತು ರಾಮ ಮಂದಿರ ಫೋಟೋ ವಿತರಿಸಿದರು.
ಇಂಡಿ ಪಟ್ಟಣದ ಬ್ರಹ್ಮಕುಮಾರಿ ವಿವಿಯಲ್ಲಿ
ಪ್ರಜಾಪಿತ ಬ್ರಹ್ಮ ಬಾಬಾರವರ 55 ನೇ ಸ್ಮøತಿ ದಿನಾಚರಣೆ ನಿಮಿತ್ಯ ನಡೆದ ಕಾರ್ಯಕ್ರಮದಲ್ಲಿ
ಬಿ.ಕೆ.ಯಮುನಾ ಅಕ್ಕ ಮಾತನಾಡಿದರು.