ವೇಗದ ನಡಿಗೆ ಹೃದಯ ಘಾತ ತಡೆಗಟ್ಟುವುದು..!
ಇಂಡಿ : ನನಗಾಗಿ ದಿನಂಪರ್ತಿ ಒಂದು ಗಂಟೆ ನಡೆ, ನಿನಗಾಗಿ ನಾನಿರುವೆ ಎಂದು ಹೃದಯ ಹೇಳುತ್ತದೆ ಎಂದು ಡಾ. ಪ್ರಶಾಂತ ದೂಮಾಗೊಂಡ ಹೇಳಿದರು.
ಪಟ್ಟಣದ ಶಾಂತೇಶ್ವರ ಪ್ಯಾರಾಮೆಡಿಕಲ್ ಕಾಲೇಜನಲ್ಲಿ ಹಮ್ಮಿಕೊಂಡಿರುವ ವಿಶ್ವ ಹೃದಯ ದಿನಾಚರಣೆಗೆ ಡಾ.ಪ್ರಶಾಂತ ದೂಮಾಗೊಂಡ ಚಾಲನೆ ನೀಡಿದರು. ತದನಂತರ ಮಾತಾನಾಡಿದ ಅವರು, 2022 ರ ವಿಶ್ವ ಆರೋಗ್ಯ ಸಂಸ್ಥೆಯ ಘೋಷಣೆ ಹೃದಯಕೆ ಹೃದಯ ನೀಡಿ ಹೇಳುತ್ತ, ರಕ್ತನಾಳಗಳ ಖಾಯಿಲೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಪ್ರಮುಖ ದ್ಯಯ. ಹೃದಯ ಆಗಾಗ ಪರೀಕ್ಷೆ ಮಾಡಿಸಿಕೊಳ್ಳಿ ದೈಹಿಕ ಚಟುವಟಿಕೆ ಇರಲಿ, ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ ಅತಿಯಾಸೆ ದುರಾಸೆ ಬೇಡ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಮ್. ಪೂಜಾರ್ ಮಾತನಾಡಿ, ಇತ್ತೀಚಿನ ದಿನಮಾನಗಳಲ್ಲಿ ಹೃದಯಘಾತದಿಂದ ಶೇಕಡ 20 ರಷ್ಟು ಜನರು ಮರಣ ಹೊಂದುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಹಿಂದಿನ ಕಾಲದ ಜೀವನ ಪದ್ಧತಿ ಮರುಕಳಿಕೆಯಾದರೆ ಮಾನವ ಜೀವನ ಸುಗಮ. ಮೂಡಲಚುಕ್ಕಿ ಹರಿಯುವುದರ ಒಳಗೆ, ನಸುಕಿನ ಜಾವ 4 ಗಂಟೆಗೆ ಮೂಡಣ ಒಳಗ ಎದ್ದೇನೋ ತಡ ನಮ್ಮಪ್ಪ ಬಸವಣ್ಣನ ಸಗಣಿ ಬಳದೇನು. ಚುಮು ಚುಮು ನಸುಕಿನ ಜಾವದಲ್ಲಿ ಬೆಳ್ಳನ ಎರಡು ಎತ್ತು ಬೆಳ್ಳಿಯ ಬಾರ್ಕೋಲ ಹೊಲಗದ್ದೆಗಳಲ್ಲಿ ದುಡಿಮೆ. ಮಹಿಳೆಯರು ಮನೆಯಲ್ಲಿ ಧಾನ್ಯಗಳು ಬೀಸುವುದು ಕುಟ್ಟುವುದು ರುಬ್ಬುವದು ಅರಿಯುವದು ಮತ್ತು ಸೇದು ಬಾವಿಗಳಿಂದ ನೀರು ಸೇದಿಕೊಂಡು ಕಾಲ ನಡಿಗೆಯಿಂದ ಹೋಗಿ ಕೆರೆ ಹಳ್ಳ ಕೊಳ್ಳ ಗಳಲ್ಲಿ ಬಟ್ಟೆಗಳು ತೊಳೆಯುತ್ತಿದ್ದರು. ದೈಹಿಕ ಶ್ರಮ ಬೆವರು ಸುರಿಸಿ ದುಡಿಯುವಂತ ಜನ ಜೀವನ ಕ್ರಿಯಾಶೀಲತೆ ಶ್ರಮಿಕ ಜೀವಿಗಳಾಗಿ ದುಡಿಯುತ್ತಿದ್ದರು. ಮೊಳಕೆ ಕಾಳುಗಳು ಸೇವನೆ ಸ್ಥಳೀಯವಾಗಿ ಸಿಗುವ ಹಸಿರು ತರಕಾರಿ ಸೊಪ್ಪುಗಳು ತಿನ್ನುವುದು. ಆಯಾ ಋತು ಮಾನಗಳಿಗೆ ಅನುಗುಣವಾಗಿ ಹಣ್ಣುಗಳು ಸೇವನೆ ಮಾಡುವುದರಿಂದ ಅಂತಹವರಿಗೆ ಹಾರ್ಟ್ ಅಟ್ಯಾಕ್, ಕ್ಯಾನ್ಸರ್, ಲಕುವಾ, ಪಾರ್ಶ್ವ ವಾಯು ಖಾಯಿಲೆಳಿಗೆ ತುತ್ತಾಗುತ್ತಿರಲಿಲ್ಲ. ಈಗಿನ ಯುವಕರು ಮೊಬೈಲ್ ದಾಸರಾಗಿದ್ದು, ಧೂಮಪಾನ ಮಾಡುವುದು, ಬೀಡಿ ಸಿಗರೇಟ್ ಗುಟ್ಕಾ ತಂಬಾಕು ಸೇವನೆ, ಜಂಕ್ ಫುಡ್ಡುಗಳು ಕೇಕ್, ಬನ್ನ, ಪಾವ್, ಬಿಸ್ಕೆಟ್, ಪಾಪಡ್, ಪಾನಿಪುರಿ, ವಡಾಪಾವ್ ತಿನ್ನುವುದು ಈಗಿನ ಕಾಲದಲ್ಲಿ ದುಡಿಮೆ ಶ್ರಮ ಇಲ್ಲದ ಐಷಾರಾಮಿ ಜೀವನ ಪದ್ಧತಿ ಹೃದಯ ರೋಗ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹೃದಯ ಕಾಯಿಲೆ ಲಕ್ಷಣಗಳು ಕಂಡು ಬಂದರೆ ಆರೋಗ್ಯ ಇಲಾಖೆ ವತಿಯಿಂದ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಬಿಪಿಎಲ್ ಪಡಿತರದಾರರಿಗೆ 5 ಲಕ್ಷ ರೂಪಾಯಿವರೆಗೂ ಉಚಿತ ಶಸ್ತ್ರ ಚಿಕಿತ್ಸೆ ಮತ್ತು ಎಪಿಎಲ್ ರವರಿಗೆ ಶೇಕಡ 25ರಷ್ಟು ಸೌಲಭ್ಯ ಪಡೆಯಿರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು ಡಾ.ಸಾಗರ ಕಂಬಾರ, ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿ ಎಸ್. ಹೆಚ.ಅತನೂರ್ ಉಪನ್ಯಾಸಕ ಹೂಗಾರ್ , ಪಾಟೀಲ್, ರೂಗಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.