ಭಾರತ ವಿಶ್ವಕ್ಕೆ ಗುರು ಹೇಗೆ ಗೊತ್ತಾ.?
ಜಾಗತಿಕ ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ ಶರಣಾಗಿದ್ದ.! ಜುಕರ್ ಬರ್ಗ ಬಾಗಿದ್ದ .!!
ಸಂಪಾದಕಿಯ : ಭಾರತ ವಿಶ್ವ ಗುರು ಹೇಗೆ ಅಂಥ ಗೊತ್ತಾ..! ಭಾರತ ಸಂಸ್ಕೃತಿ ಸಂಪ್ರದಾಯಗಳ ತವರೂರು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದ ಅದಲ್ಲಿ ಹಲವು ಚಮತ್ಕಾರಗಳು, ಪವಾಡಗಳು ನಿರ್ಮಿಸುವ ನಿಪುಣತೆಯ ರಾಷ್ಟ್ರ. ಹೌದು ಇದೆಲ್ಲಾ ಗೊತ್ತು..! ಹೇಳುವ ಅವಶ್ಯಕತೆ ಇದೆಯಾ..? ಎಂಬ ಪ್ರಶ್ನೆ ಮೂಡುವುದು ಸಹಜ..
ಭಾರತ ವಿಶ್ವ ಗುರು ಎಂಬುದಕ್ಕೆ ಒಂದು ಎರಡು ಉದಾಹರಣೆ ಕೊಡುವ ಪ್ರಯತ್ನ ಮಾಡುವೆ. ವಿಶ್ವದ ಅತ್ಯಂತ ಪ್ರಸಿದ್ಧ ಅ್ಯಪಲ್ ಕಂಪನಿ ಸಂಸ್ಥಾಪಕ ಸ್ಟೀವ್ ಜಾಬ್ಸ್, ಪೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರಬರ್ಗ,ಹಾಲಿವುಡ್ ನಟಿ ಜೂಲಿಯಾ ರಾಬರ್ಟ್ಸ್ ರವರಂತಹ ಹಾಗೂ ಭಾರತದ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಹಾಗೂ ಆತನ ಧರ್ಮ ಪತ್ನಿ ಸಹ ಸಫಲತೆ ಮತ್ತು ವಿಫಲತೆ ಕಂಡಾಗ ಭಾರತದ ಪವಿತ್ರ ಪುಣ್ಯ ಭೂಮಿಯ ಆ ಸ್ಥಳಕ್ಕೆ ಬೇಟಿ ನೀಡಿದ್ದಾರೆ ಅಂತೆ, ಓಹೋ ಈಗ ಸ್ಥಳ,ಅಲ್ಲಿಯ ಪವಾಡ ಹಾಗೂ ಇತರೆ ವಿಷಯ ತಿಳಿದುಕೊಳ್ಳಲು ಕೂತುಹಲವಾಗಿದೆ ಅಲ್ವಾ..! ಹಾಗಾದರೆ ಬನ್ನಿ ಒಮ್ಮೆ ಮೆಲುಕು ಹಾಕಿಕೊಂಡು ಬರೋಣ..!
ಉತ್ತರ ಭಾರತದಾದ್ಯಂತ “ಮಿರಾಕಲ್ ಬಾಬಾ” ಎಂದು ಕರೆಯಲ್ಪಡುವ ಅವರು ಅನೇಕ ಸಿದ್ಧಿಗಳನ್ನು ಕಂಡು ಕೊಂಡರು.
ಸದ್ಗುರುವಿನೊಂದಿಗೆ ನೀವು ಪರಿಪೂರ್ಣವಾಗಿ ಶರಣಾಗತಿಯಾದರೇ ಮಾತ್ರ ನಿಮಗೆ ಪ್ರಕೃತಿಯಿಂದ ಸಹಾಯ-ಸಹಕಾರ ದೊರಕುವದು.!ಬ್ರಹ್ಮಾಂಡದೊಂದಿಗೆ ನೀವು ಸಂವೇದನಾಶೀಲರಾಗಿ ನಿಷ್ಕಲ್ಮಷವಾಗಿರುವ ಮಗುವಿನಂತೆ ನಿಮ್ಮ ಮನಸು ಕೋಮಲವಾಗಿದ್ದರೇ ಇಡೀ ನಿಸರ್ಗವೇ ನಿಮಗೆ ಖಂಡಿತ ಗುರುವಾಗಿ ಭೋದನೆ ಮಾಡುತ್ತದೆ! ಇದರ ಪರಿಣಾಮ ನಿಮ್ಮ ಬದುಕಿನಲ್ಲಿ ಚಮತ್ಕಾರಗಳ ಸಂಗಮದೊಂದಿಗೆ ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ.!ನಿಮ್ಮ ಮಹತ್ವಾಕಾಂಕ್ಷೆಗಳು ಈಡೇರುತ್ತವೆ! ಇಂತಹ ಸಮಸ್ತ ಗುಣಗಳು ಹೊಂದಿದ್ದ ಉತ್ತರ ಪ್ರದೇಶದಲ್ಲಿ ಕಂಬಳಿ ಹೊದ್ದು ಬದುಕು ಸಾಗಿಸಿದ ಸದ್ಗುರು ನೀಮ್ ಕರೋಲಿ ಬಾಬಾರ ಅಪೂರ್ವ ಚಮತ್ಕಾರಗಳ ಬಗ್ಗೆ ತಿಳಿಯೋಣ ಬನ್ನಿ.
ನೀಮ್ ಕರೋಲಿ ಬಾಬಾ ಮತ್ತು ಎಲ್ ಎಸ್ ಡಿ ಮಾತ್ರೆ
ಉತ್ತರಪ್ರದೇಶದಲ್ಲಿ ಜನಿಸಿದ (ಲಕ್ಷ್ಮಣ ದಾಸ) ನೀಮ್ ಕರೋಲಿ ಬಾಬಾ ಒಮ್ಮೆ ರೈಲಿನಲ್ಲಿ ಪ್ರಯಾಣ ಮಾಡುವಾಗ ಅವರ ಹತ್ತಿರ ನಯಾಪೈಸೆ ಸಹ ಇರಲಿಲ್ಲ.ಅಂತಹದರಲ್ಲಿ ಹಣವಿಲ್ಲದ ಕಾರಣ ರೈಲಿನಲ್ಲಿ ಟೆಕೇಟ್ ಪಡೆಯದೇ ಪ್ರಯಾಣ ಬೆಳಸಿದರು. ಫರೂಕಾಬಾದ್ ಬಳಿ ರೈಲ್ವೆ ಅಧಿಕಾರಿ ಕಂಬಳಿ ಹೊದ್ದು ಕುಳಿತ ಬಾಬಾರಿಗೆ ಟಿಕೇಟ್ ಕೇಳುತ್ತಾನೆ.ಆಗ ಬಾಬಾ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.ರೈಲ್ವೆ ನೌಕರ ಯಾವದನ್ನು ಕಿವಿಗೆ ಹಾಕಿಕೊಳ್ಳದೆ ಅವರನ್ನು ರೈಲ್ವೆಯಿಂದ ಹೊರ ನೂಕುತ್ತಾನೆ.ರೈಲಿನಿಂದ ಹೊರಬಿದ್ದ ಬಾಬಾರಿಗೆ ಸಹಜವಾಗಿ ಪೆಟ್ಟಾಗುತ್ತದೆ.ಇತ್ತ ರೈಲು ತನ್ನ ಪ್ರಯಾಣ ಮುಂದುವರೆಸಲು ಸಜ್ಜಾಗುತ್ತದೆ.ಆದರೆ ರೈಲ್ವೆ ಮಾತ್ರ ಯಾವ ಕಾರಣಕ್ಕೂ ಚಲಿಸಲಾಗಲಿಲ್ಲ.ಅದರ ಇಂಜಿನ್ ಇದ್ದಕ್ಕಿದ್ದಂತೆ ಬಂದಾಯಿತು.ಡ್ರೈವರ್ ಗಳು ಎಷ್ಟೇ ಪ್ರಯತ್ನಪಟ್ಟರೂ ರೈಲು ಮಾತ್ರ ಚಾಲನೆಯಾಗದೇ ಕಮಕ್ ಕಿಮಕ್ ಎನ್ನಲಿಲ್ಲ.ಆಗ ಅಲ್ಲಿದ್ದ ಜನರ ಪೈಕಿ ಯಾರೋ ನೀಮ್ ಕರೋಲಿ ಬಾಬಾನ ಕಡೆ ಕೈ ಮಾಡಿ ತೋರಿದರು.ರೈಲು ಸಿಬ್ಬಂದಿ,ಪ್ರಯಾಣಿಕರು ದೌಡಾಯಿಸಿ ಬಾಬಾನಲ್ಲಿ ಹೋಗಿ ವಿನಂತಿಸಿಕೊಂಡರು.ಆಗ ಕರೋಲಿ ಬಾಬಾ ಹೇಳಿದರು.’ಸಾಧುಗಳಿಗೆ ಸಂತರಿಗೆ ಟಿಕೇಟಗಾಗಿ ಎಂದಿಗೂ ಅವಮಾನಿಸಬೇಡಿ ಹೋಗಿ ನಿಮ್ಮ ರೈಲು ಸಂಚಾರ ಆರಂಭವಾಗುತ್ತದೆ’ ಎಂದರು ಅವರು ಅಂದುಕೊಂಡಂತೆ ರೈಲು ತನ್ನ ಹೊಗೆ ಹೊರ ಹಾಕುತ್ತ ಸಿಳ್ಳೆಯೊಂದಿಗೆ ಹೊರಟು ನಿಂತಿತ್ತು.ಇತ್ತ ಅಧಿಕಾರಿಗಳು ಪ್ರಯಾಣಿಕರು ಜೈ ನೀಮ್ ಕರೋಲಿ ಬಾಬಾ.! ಎಂದು ಕೂಗುತ್ತಾ ಬಾಬಾರಿಗೆ ಪ್ರಣಾಮಗಳನ್ನು ಸಲ್ಲಿಸುತ್ತಿದ್ದರು.ಅವರು ರೈಲು ತಡೆಯುವ ಪವಾಡ ಮಾಡಿದ ಸ್ಥಳ ನೀಮ್ ಕರೋಲಿ ರೈಲು ನಿಲ್ದಾಣವೆಂದು ಹೆಸರಾಯಿತು.
ನಿಮ್ಮಲ್ಲಿನ ಧಾರಣ ಶಕ್ತಿ ಸ್ವಚ್ಚ ಮನಸಿನಿಂದ ಕೂಡಿ ಅತ್ಯಂತ ಉನ್ನತ ಮಟ್ಟದಲ್ಲಿ ಪ್ರಬಲವಾಗಿದ್ದರೇ ಇಂತಹ ಚಮತ್ಕಾರಗಳು ಜರಗುತ್ತವೆ!ಅದಕ್ಕೆ ಕೆಲವು ಸಿದ್ಧಿಗಳು ಬೇಕು! ಈ ಸಿದ್ಧಿಗಳಿಗಾಗಿ ಬಾಬಾರವರು ಗುಜರಾತಿನಲ್ಲಿ ಅನೇಕ ವರ್ಷಗಳ ಕಾಲ ಜಪ-ತಪ ಯೋಗ ಶಕ್ತಿಗಳಿಂದ ಸಂಪಾದಿಸಿದ್ದರು.!
ಕರೋಲಿ ಬಾಬಾರವರು ಎಲ್ಲರನ್ನೂ ಪ್ರೀತಿಸಿ ಪರಸ್ಪರ ರಕ್ತ ಸಂಬಂಧಿಗಳಂತೆ ಸ್ನೇಹ ಪೂರ್ಣವಾಗಿ ಬದುಕಲು ಕರೆ ನೀಡುತ್ತಿದ್ದರು.ಒಮ್ಮೆ ಅಮೇರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರೋಪಸರ್ ರೊಬ್ಬರು ಎಲ್ ಎಸ್ ಡಿ ಮಾತ್ರೆ (ಸಿದ್ಧ ಪತ್ರಿಯಂತೆ ಗುಂಗು ಹಿಡಿಸುವ ಲೋಲೊಪ್ತ ಯಲ್ಲಿರಿಸುವ ಮಾದಕತೆಯ ಮಾತ್ರೆ) ಗಳ ಮೇಲೆ ಸಂಶೋಧನೆ ಮಾಡುವ ವ್ಯಕ್ತಿಯಾಗಿದ್ದರು.
ಪ್ರೋಪೆಸರ್ ವರಿಗೆ ಭಾರತಕ್ಕೆ ಬಾಬಾನಲ್ಲಿ ಬರಲು ಅವರಿಗೆ ಯಾರೋ ಚೇತಾವಣೆ ನೀಡಿದರು. ಅಂದುಕೊಂಡಂತೆ ಕರೋಲಿ ಬಾಬಾ ನಲ್ಲಿ ಬಂದ ಅಮೇರಿಕಾದ ಪ್ರೋಪಸರ್ ಗುಂಗು,ಮಂಪರು ಹಿಡಿಸುವ ಎಲ್ ಎಸ್ ಡಿ ಮಾತ್ರೆಯ ಬಗ್ಗೆ ಹೇಳಿ ಹಿಡಿಯಷ್ಟು ಮಾತ್ರೆಗಳನ್ನು ಕರೋಲಿ ಬಾಬಾರವರಿಗೆ ತೋರಿಸಿದರು ಅವುಗಳಲ್ಲಿ ನಾಲ್ಕಾರು ಎಲ್ ಎಸ್ ಡಿ ಮಾತ್ರೆ ತಿಂದರೆ ಸಾವು ಬಂದೆರಗಬಹುದು ಎಂದು ಬಾಬಾರವರಿಗೆ ಎಚ್ಚರಿಸಿ ತಿಳಿ ಹೇಳಿದರು.ಆಗ ಕರೋಲಿ ಬಾಬಾ ಒಂದು ಪೂರ್ತಿ ಮುಷ್ಠಿಯಲ್ಲಿ ಎಲ್ ಎಸ್ ಡಿ ಮಾತ್ರೆ ತೆಗೆದು ಕೊಂಡು ನೋಡು ನೋಡುತ್ತಿದ್ದಂತೆ ಅವುಗಳನ್ನು ನುಂಗಿ ನೀರ್ಕುಡಿದು ಬಿಟ್ಟರು.ಇದನ್ನ ಅವಕ್ಕಾಗಿ ನೋಡಿದ ಅಮೇರಿಕಾ ಪ್ರೋಪೆಸರ್ ಕಕ್ಕಾಬಿಕ್ಕಿಯಾದರು. ಎಲ್ ಎಸ್ ಡಿ ಮಾತ್ರೆಗಳು ಬಾಬಾರ ಪಾಲಿಗೆ ಹುರಿಗಡಲೆಯಾಗಿದ್ದವು. ಎಲ್ ಎಸ್ ಡಿ ಮಾತ್ರೆಗಳನ್ನು ನುಂಗಿದ ಕರೋಲಿ ಬಾಬಾ ನಸುನಗುತ್ತ ರಾಮ, ರಾಮ, ರಾಮ ಎಂದು ನಾಮ ಸ್ಮರಣೆ ಮಾಡುತ್ತ ಮಂತ್ರ ಜಪಿಸತೊಡಗಿದರು.ಅವರಿಗೆ ಏನೇನು ಆಗಲಿಲ್ಲ ಅವರ ಇನ್ನರ್ ಇಂಜನೀಯರಿಂಗ್ ಅಷ್ಟೊಂದು ಚೆನ್ನಾಗಿ ಕೆಲಸ ಮಾಡಿತ್ತು.ಇತ್ತ ಅಮೇರಿಕಾದ ಹಾವರ್ಡ್ ವಿಶ್ವವಿದ್ಯಾಲಯದ ಪ್ರೋಪೆಸರ್ ಹೆಸರು ಬದಲಾಯಿಸಿಕೊಂಡು ಆಶ್ರಮದಲ್ಲಿ ಸನ್ಯಾಸತ್ವ ಸ್ವೀಕರಿಸಿ ರಾಮದಾಸನಾದ.
ಸ್ಟೀವ್ ಜಾಬ್ ಶರಣಾಗತನಾಗಿ ಬಂದ..!
ಮಾರ್ಕ್_ಜುಕರ್ ಬರ್ಗ ಭಾರತಕ್ಕೆ ಬಾಗಿ ಬಂದನು.
1960-70 ಆಸುಪಾಸಿನಲ್ಲಿ ನೀಮ್ ಕರೋಲಿ ಬಾಬಾ ಉತ್ತರ ಭಾರತದಿಂದ ಅಮೇರಿಕದವರೆಗೆ ತಮ್ಮ ಅಸಾಧಾರಣ ಕಾರ್ಯಗಳಿಂದ ಪ್ರಖ್ಯಾತರಾದರು. ಪರಿಣಾಮ ಅಮೇರಿಕಾದಲ್ಲಿ ಇವರ ಆಶ್ರಮ ಪ್ರಾರಂಭವಾಯಿತು.ಹೆಚ್ಚಾಗಿ ಪಾಶ್ಚಿಮಾತ್ಯರು ಇವರನ್ನು ನೋಡಲು ಭಾರತಕ್ಕೆ ಬರತೊಡಗಿದರು. ಇಷ್ಟೆಲ್ಲಾ ವಿಸ್ಮಯದ ಬದುಕು ಬದುಕಿದ ಬಾಬಾ ನೂರಾರು ವಿಸ್ಮಯಗಳನ್ನು ಮಾಡಿ 1973 ರಲ್ಲಿ ನೈನಿತಾಲ್ ನಲ್ಲಿ ದೇಹತ್ಯಾಗ ಮಾಡಿದರು.
ಭಾರತದ ಈ ಸದ್ಗುರುವಿಗೆ ಜಗತ್ತಿನ ಅತ್ಯುನ್ನತವಾದ ಶ್ರೇಷ್ಠ ಮಟ್ಟದ ಆ್ಯಪಲ್ ಕಂಪನಿ ಮಾಲೀಕ ಸ್ಟೀವ್ ಜಾಬ್ ತನ್ನ – ವಹಿವಾಟಿನಲ್ಲಿ ಸಂಕಟ ಬಂದಾಗ ಆತ ಭಾರತದ ನೀಮ್ ಕರೋಲಿ ಬಾಬಾರನ್ನ ಕಾಣಲು ಭಾರತದ ಕಡೆ ಮುಖ ಮಾಡಿ ನೈನಿತಾಲಿಗೆ ಬಂದನು.ಸ್ಟೀವ್ ಜಾಬ್ ಕಂಪನಗಳ -ತರಂಗಗಳ ಮೇಳವಾಗಿದ್ದ ನೀಮ್ ಕರೋಲಿ ಬಾಬಾರ ಆಶ್ರಮ ಮತ್ತು ಅವರ ಸಮಾಧಿಗೆ ಸಂಪೂರ್ಣವಾಗಿ ಶರಣಾಗತರಾಗಿ ಬಾಬಾರವರ ಅನುಗ್ರಹಕ್ಕೆ ಪಾತ್ರರಾಗಿ ಬದುಕಿನಲ್ಲಿ ಯಶಸ್ವಿಯಾದರು.
ಅದಕ್ಕೆ ಹೇಳುವದು ನೀವು ಕಾಯಾ ವಾಚಾ ಮನಸಾ ಪರಿಶುದ್ಧವಾಗಿದ್ದರೆ ಭಗವಂತನಿಂದ ಹೂಮಳೆಯ ಸುರಿಮಳೆಯಾಗುವುದು.! ನಿಮ್ಮ ಸಂಪೂರ್ಣ ಅಹಂಕಾರ ಸತ್ತು ಸಮಾಧಿಯಾದಾಗ ಮಾತ್ರ ನಿಮಗೆ ಸಹಾಯ -ಸಹಕಾರ ದೊರೆಯುವದು.!
ಹೀಗೆ ಕೆಲವು ವರ್ಷಗಳ ನಂತರ ಪೇಸಬುಕ್ ಜನಕ ಮಾರ್ಕ್ ಜುಕರ್ ಬರ್ಗ್ ತಮ್ಮ ಪೇಸಬುಕ್ ಹೊಸ ಪ್ರಯೋಗದ ಕುರಿತು ತುಂಬಾ ಸಂಕಟಕ್ಕೆ ಈಡಾಗಿದ್ದರು. ಇತ್ತ ಅದಾಗಲೇ ಕರೋಲಿ ಬಾಬಾ ಎನ್ನುವ ಮಾಹಾತ್ಮ ಸದ್ಗುರುವಾಗಿ ಸಿದ್ದಿಗಳನ್ನು ಗೆದ್ದುಕೊಂಡು ಸಿದ್ದನಾಗಿ ಸಮಾಧಿಯಾಗಿ ಸೃಷ್ಠಿಸುತ್ತಿದ್ದ ಸುದ್ದಿಗಳನ್ನು ಒಮ್ಮೆ ಸ್ಟೀವ್ ಜಾಬ್ ರ ಬಾಯಿಂದ ಮಾರ್ಕ್ ಜುಕರ್ ಬರ್ಗ್ ಕೇಳಿ ತಿಳಿದುಕೊಂಡರು.ನಂತರ ಮಾರ್ಕ್ ಝಕರ್ ಬರ್ಗ್ ಭಾರತಕ್ಕೆ ಪ್ರಯಾಣ ಬೆಳೆಸಿದರು.ಭಾರತಕ್ಕೆ ಬಂದ ಜುಕರ್ ಬರ್ಗ್ ಭಾರತದ ಪ್ರಧಾನಿಗಳಾದ ನರೇಂದ್ರ ಮೋದಿಯವರಿಗೆ ಸಮಾಲೋಚಿಸಿ ತಮ್ಮ ಮನದ ಇಂಗಿತವನ್ನ ವ್ಯಕ್ತಪಡಿಸಿದರು.ನಂತರ ಮಾರ್ಕ್ ಜುಕರ್ ಬರ್ಗ್ ಕರೋಲಿ ಬಾಬಾರವರ ನೈನಿತಾಲ್ ಆಶ್ರಮಕ್ಕೆ ಬಂದು ಭೇಟಿ ನೀಡಿ ನತಮಸ್ತಕ ನಮನಗಳನ್ನು ಸಲ್ಲಿಸಿದರು. ಬರೀ ಒಂದು ದಿನ ಆಶ್ರಮದ ಭೇಟಿಗೆ ಬಂದವ ಆಶ್ರಮದಲ್ಲಿ ಎರಡು ದಿನ ಆಶ್ರಯ ಪಡೆದನು.
ನಿಮ್ಮಲ್ಲಿ ಸ್ವೀಕೃತಿ ಭಾವವಿದ್ದರೆ ಸದ್ಗುರು ನಿಮಗೆ ಪ್ರಕೃತಿಯ ರೂಪದಲ್ಲಿ ಎರಡು ಕ್ಕೆಯಲ್ಲಿ ಭಾಗ್ಯವನ್ನು ಬಳಿದು ಕೊಡುತ್ತಾನೆ..! ಆದರೆ ನೀವು ಬಾಗಬೇಕು..!ನಿಮ್ಮಲ್ಲಿ ಭಕ್ತಿಯ ಕಣ್ಣೀರು ಧಾರೆ ಹರಿಯಬೇಕು.!ಮನಸು ಮಗುವಿನ ಹಾಗಿರಬೇಕು.! ಗುಲಗುಂಜಿಯಷ್ಟು ಕೂಡಾ ಅಹಂಕಾರವಿರಬಾರದು.!ನಿಮ್ಮ ಆಹಂನ ಕಣ್ಣುಗಳು ನಿಷ್ಕಲ್ಮಷನಾಗಿರುವ ನವಜಾತ ಶಿಶುವಿನ ಕಣ್ಣುಗಳಂತೆ ಸ್ವಚ್ಚವಾಗಿರಬೇಕು.! ಅಮಗಳಲ್ಲಿ ಲವಲೇಷದ ದೋಷವಿರಬಾರದು!
ಅಂದು ನೀಮ್ ಕರೋಲಿ ಬಾಬಾ ಸದ್ಗುರುವಾಗಿ ವಿಶ್ವ ಗುರು ಭಾರತದ ಪ್ರತಿನಿಧಿಯಾಗಿ ಇಡೀ ಮನುಕುಲವನ್ನು ಪ್ರೀತಿಸಿ ಜನರಿಗೆ ಅನೇಕ ರೀತಿಯ ಆಧ್ಯಾತ್ಮಿಕತೆ ಮೂಲಕ ನೆರವಿನ ಮಹಾಪೂರ ಹರಸಿದರು!