ಮುಖ್ಯಮಂತ್ರಿ ಸಿದ್ದಾರಾಮಯ್ಯಗಾಗಿ ವಿಶೇಷ ಪೂಜೆ
ಧೂಳಖೇಡ: ಸಮಸ್ತ ಶೋಷಿತ ಸಮುದಾಯದ ಧೀಮಂತ ನಾಯಕ, ರಾಜ್ಯಕ್ಕೆ ಗ್ಯಾರಂಟಿಗಳನ್ನು ನೀಡಿದ ಸರದಾರ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಐದು ವರ್ಷಗಳ ಕಾಲ ಯಶಸ್ವಿಯಾಗಿ ಅಧಿಕಾರ ಮುಂದುವರೆಸಲಿ ಎಂದು ಅಖಿಲ ಕರ್ನಾಟಕ ಸಿದ್ದರಾಮಯ್ಯ ಅಭಿಮಾನಿ ಬ್ರಿಗೇಡ್ ವಿಜಯಪುರ ಸಮಿತಿ ವತಿಯಿಂದ ಧೂಳಖೇಡ ಗ್ರಾಮದ ಶ್ರೀ ಶಂಕರಲಿAಗ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಅಖಿಲ ಕರ್ನಾಟಕ ಸಿದ್ದರಾಮಯ್ಯ ಅಭಿಮಾನಿ ಬ್ರಿಗೇಡ್ ವಿಜಯಪುರ ಜಿಲ್ಲಾಧ್ಯಕ್ಷ ದಯಾನಂದ ಕೋಳಿ ಶ್ರೀ ಶಂಕರಲಿAಗ ದೇವರಿಗೆ ವಿಶೇಷ ಪೂಜೆ ನೇರವೇರಿಸಿ ಮಾತನಾಡಿದ ಅವರು, ರಾಜ್ಯದ ಸಮಸ್ತ ಶೋಷಿತ ವರ್ಗಗಳ ನಾಯಕರಾಗಿ ಎಲ್ಲರ ಉನ್ನತಿಗೆ ಶ್ರಮಿಸುವ ಕಳಂಕ ರಹಿತ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯನವರು ಮುಂದಿನ ಅಧಿಕಾರವಧಿ ಮುಂದುವರಸಲಿ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಹಿಡಿದು ಯಾರೇ ಪಕ್ಷದ ನಾಯಕರು ಷಡ್ಯಂತ್ರ ಮಾಡಿದರೂ ಕೂಡ ರಾಜ್ಯದ ಜನ ಒಪ್ಪುವುದಿಲ್ಲ. 2023 ರಲ್ಲಿ ರಾಜ್ಯದ ಜನ ಸಿದ್ದರಾಮಯ್ಯನವರಿಗೆ ಅಧಿಕಾರ ನೀಡಿದ್ದಾರೆ, ಅದಕ್ಕಾಗಿ ಮುಂದಿನ 2028 ರ ಚುನಾವಣೆಯನ್ನು ಸಿದ್ದರಾಮಯ್ಯನವರ ನೈತೃತ್ವದಲ್ಲಿ ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿಲಿ ಮುಂದಿನ ದಿನಗಳಲ್ಲಿ ಡಿ ಕೆ ಶಿವಕುಮಾರ ಅವರು ರಾಜ್ಯದ ಮುಖ್ಯಮಂತ್ರಿಯಾಗಲಿ. ಹಿಂದುಳಿದ ನಾಯಕರ ಬೆಂಬಲವಿದೆ ಎಂದು ಹೇಳಿದರು.
ವಿಜಯಪುರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶಗೌಡ ಪಾಟೀಲ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಗಲೇ ಅರ್ಧ ಅಧಿಕಾರಾವಧಿ ಪೂರ್ಣಕೊಂಡಿದೆ, ಮುಂದಿನ ಅಧಿಕಾರಾವಧಿ ಅವರೇ ಮುಂದುವರೆಸಲಿ ಎಂದು ರಾಜ್ಯದ ಜನರ ಇಚ್ಚೆಯಿಂದೆ ಅದಕ್ಕಾಗಿ ನಾವು ಇಂದು ಧೂಳಖೇಡ ಗ್ರಾಮದ ಶ್ರೀ ಶಂಕರಲಿAಗ ದೇವರಿಗೆ ವಿಷೇಶ ಪುಜೆ ಸಲ್ಲಿಸಿದ್ದೇವೆ ಎಂದು ಹೇಳಿದರು.
ಈ ವೇಳೆ ಗ್ರಾಪಂ ಅಧ್ಯಕ್ಷ ದಿಲೀಪ ಶಿವಶರಣ, ಸಿದ್ದರಾಮ ಮೈದರಗಿ ಕಲ್ಲಪ್ಪ ಗುಮತೆ, ರಾಘವೇಂದ್ರ ಭಿಸೆ, ಲಕ್ಷಿö್ಮÃಕಾಂತ ಏಳಗಿ, ಬಂದೆನವಾಜ ಮುಲ್ಲಾ. ನಾಗೇಂದ್ರ ಸವಳಸಂಗ ಸೇರಿದಂತೆ ಮತ್ತಿತರರು ಇದ್ದರು.



















