ಶ್ರೀ ಶಾಂತೇಶ್ವರರಿಗೆ ವಿಶಿಷ್ಠ ರೀತಿಯ ಅಕ್ಕಿಪೂಜೆ
ಇಂಡಿ: ಶಾಂತಯ್ಯನವರ ಜಾತ್ರೆ ಈ ಭಾಗದಲ್ಲಿ ವಿಶೇಷ. ಛಟ್ಟಿ ಅಮವಾಸ್ಯೆ ನಂತರದ ಚಂಪಾಷಷ್ಠಿ ಆದ ಮೇಲೆ ಬಂದ ಸೋಮವಾರದಿಂದ ಡಿ ೯ ರಿಂದ ಬುಧವಾರದ ವರೆಗೆ ಮೂರು ದಿನ ಜಾತ್ರೆ ವೈಭವದಿಂದ ನಡೆಯುತ್ತದೆ.
ಬಾರಾ ಬಲೂತಿ ಚಾಜದವರಾದ ಪಟ್ಟಣದ ಗೌಡರು, ನಾಡಗೌಡರು, ದೇಶಪಾಂಡೆಯವರು, ಬಗಲಿಯವರು, ದೇವಾಲಯದ ಅರ್ಚಕರು, ಪುರವಂತರು, ಕುಂಬಾರರು, ಅಕ್ಕಸಾಲಿಗರು, ಬಡಿಗರು, ಕುಂಬಾರರು, ಅಗಸರು, ಮೇತ್ರಿಯವರು ಹೀಗೆ ಹನ್ನೆರಡು ಚಾಜದವರು ಕೂಡಿಕೊಂಡು ಅಪಾರ ಭಕ್ತ ಸಮೂಹದೊಂದಿಗೆ ಜಾತ್ರೆ ಮಾಡುತ್ತಾರೆ.
ಅಕ್ಕಿ ಪೂಜೆ— ಚಂಪಾಷಷ್ಟಿಯ ನಂತರ ಬರುವ ಸೋಮವಾರದ ದಿನ ಬೆಳಗಿನ ಆರು ಗಂಟೆಯಿAದ ಶಾಂತೇಶ್ವರ ಲಿಂಗಕ್ಕೆ ಪಂಚಾಮೃತ ಅಭಿಷೇಕ ನಡೆಯುತ್ತದೆ. ಜಾತ್ರೆಯ ಎರಡನೆಯ ದಿನ ಮಂಗಳವಾರ ಬೆಳಗ್ಗೆ ನಸುಕಿನ ನಾಲ್ಕು ಗಂಟೆಯಿAದ ಲಿಂಗಕ್ಕೆ ಅಕ್ಕಿಪೂಜೆ ಮಾಡುತ್ತಾರೆ. ಸುಮಾರು ಮೂರರಿಂದ ನಾಲ್ಕು ಕ್ವಿಂಟಲ್ ಅಕ್ಕಿಯನ್ನು ನೀರಲ್ಲಿ ತೋಯಿಸುತ್ತ ಲಿಂಗದ ಸುತ್ತಲೂ ಪೆರಿಸುತ್ತಾರೆ. ಅಕ್ಕಿ ಬಿಳಬಾರದೆಂದು ದಾರದಿಂದ ಸುತ್ತುತ್ತಾರೆ. ಮಧ್ಯೆ ಬಣ್ಣದ ಬ್ಯಾಂಗಡಿ, ಹೂವು ಜಾಲರಿಗಳಿಂದ ಶೃಂಗರಿಸುತ್ತಾರೆ. ಆ ಸಮಯದಲ್ಲಿ ಗರ್ಭಗುಡಿಯಲ್ಲಿ ಒಳಗೆ ಯಾರೂ ಪ್ರವೇಶಿಸದಂತೆ ಬಾಗಿಲು ಹಾಕಿರುತ್ತಾರೆ. ಊರಗೌಡರು ಬಂದಾಗ ಮಾತ್ರ ಬೆಳಗಿನ ಆರು ಗಂಟೆಗೆಬಾಗಿಲು ತೆರೆದು ಮಹಾಮಂಗಳಾರತಿ ಮಾಡುತ್ತಾರೆ.
ನಂದಿಕೋಲು ಮೆರವಣೆಗೆ—ಮಂಗಳವಾರ ಡಿ ೧೦ ರಂದು ಬೆಳಗ್ಗೆ ಎರಡು ನಂದಿಕೋಲುಗಳನ್ನು ಸಿಂಗರಿಸಿದರು. ಒಂದು ದೊಡ್ಡದು ಶಾಂತಯ್ಯನೆAದು ಇನ್ನೊಂದು ಚಿಕ್ಕದು ಅವರ ತಮ್ಮನೆಂದು ಭಕ್ತರ ನಂಬುಗೆ. ಶಾಂತಯ್ಯನವರದೆAದು ಹೇಳುವ ನಂದಿಕೋಲಿಗೆ ಹೂವಿನಿಂದ ದೊಡ್ಡ ದೊಡ್ಡ ಬಾಸಿಂಗದಿAದ ಅಲಂಕಾರ ಮಾಡಿದ್ದಾರೆ. ತಮ್ಮನದೆಂದು ಹೇಳುವ ನಂದಿಕೋಲಿಗೆ ಬಿಳಿ ಮತ್ತು ಕೆಂಪು ವಸ್ತç ಸುತ್ತಿ ಪಂಚಲೋಹದ ಒಂಬತ್ತು ತೊಡೆ ತೊಡಿಗೆ ಮೇಲೆ ಹೂವಿನ ಅಟ್ಟಾವೀಸ ಹೆಗೆದಿದ್ದಾರೆ.
ಡಿ. ೧೧ ರಂದು ಬುಧವಾರ ನಸುಕಿನ ವೇಳೆ ಕಳ್ಳಿಮಠದಿಂದ ಶಾಂತೇಶ್ವರ ದೇವಸ್ಥಾನದ ವರೆಗೆ ಎರಡೂ ನಂದಿಕೋಲಗಳ ಮೆರವಣೆಗೆ ನಡೆಯುತ್ತದೆ.
ಶ್ರೀ ಶಾಂತೇಶ್ವರರಿಗೆ ಅಕ್ಕಿ ಪೂಜೆ