ರಾಯಚೂರು – ೨೦೨೧-೨೦೨೨ನೇ ಸಾಲಿನ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ನಡೆಯುವ ಸ್ಟೂಡೆಂಟ್ ಪೊಲೀಸ್ ಕೆಡೆಟ್ (ಎಸ್‌ಪಿಸಿ) ಕಾರ್ಯಕ್ರಮದ ಮುಕ್ತಾಯ ಸಮಾರಂಭ ಸರ್ಕಾರಿ ಪ್ರೌಢ ಶಾಲೆ ಪೊಲೀಸ್ ಕಾಲೊನಿಯಲ್ಲಿ ನಡೆಯಿತು.
ಈ ಕಾರ್ಯಕ್ರಮಕ್ಕೆ ಜಿಲ್ಲಾ ಶಸಸ್ತ್ರ ಪಡೆಯ ಆರ್‌ಎಸ್‌ಐಗಳಾದ ಶಶಿಧರ್ ಇವರು ವಿದ್ಯಾರ್ಥಿಗಳಿಗೆ ಎಸ್‌ಪಿಸಿ ಬಗ್ಗೆ ಮಾಹಿತಿ ನೀಡಿದರು ಹಾಗೂ ಎಸ್‌ಪಿಸಿ ಯು ವಿದ್ಯಾರ್ಥಿಗಳು ಶಿಸ್ತು, ಪ್ರಾಮಾಣಿಕತೆ, ಧೈರ್ಯವನ್ನು ನೀಡುತ್ತದೆ ಎಂದು ಹೇಳಿದರು. ಇನ್ನೋರ್ವ ಅತಿಥಿಯಾಗಿ ಹುಸೇನಪ್ಪ ಪಿಎಸ್‌ಐ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳಾದ ಕೃಷ್ಣಪ್ಪ. ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಭಾಗವಹಿಸಿದ್ದರು. ಕೋಮಲ ಶಿಕ್ಷಕರು ನಿರೂಪಿಸಿದರು. ಉಷಾ ಬಾಯಿ ಶಿಕ್ಷಕರು ಸ್ವಾಗತಿಸಿದರು. ಇಂದಿರಾ ಶಿಕ್ಷಕರು ವಂದನಾರ್ಪಣೆ ಮಾಡಿದರು.