ಅಫಜಲಪುರ: ದೇಶದಲ್ಲಿ ಸಾಮಾಜಿಕ ಅಸಮಾನತೆ ತಾಂಡವವಾಡುತ್ತಿದ್ದಾಗ ಅನೇಕ ದಾರ್ಶನಿಕರು ಜನ್ಮವೆತ್ತಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದ್ದಾರೆ. ಆದರೆ ಅಂಬೇಡ್ಕರ್ ಅದಕ್ಕೆ ಕಾನೂನು ರೂಪ ಕೊಟ್ಟು ಜನರ ಧ್ವನಿಯಾಗುವ ಕೆಲಸ ಮಾಡಿದ್ದಾರೆ ಎಂದು ಶಾಸಕ ಎಂ.ವೈ ಪಾಟೀಲ್ ಹೇಳಿದರು.
ಅವರು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ತಾಲೂಕು ಆಡಳಿತ ಆಯೋಜಿಸಿದ ಡಾ.ಬಿ.ಆರ್. ಅಂಬೇಡ್ಕರ ಅವರ ೧೩೧ ನೇ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮಹಾ ಪುರುಷರ ಜಯಂತಿಗಳು ಒಂದು ಜಾತಿಗೆ ಸೀಮಿತವಾಗಬಾರದು. ಎಲ್ಲರೂ ಕೂಡಿಕೊಂಡು ಮಹಾಪುರುಷರ ಜಯಂತಿಗಳನ್ನು ಆಚರಿಸುವ ಮೂಲಕ ನಾವೆಲ್ಲರೂ ಒಂದೇ ಎನ್ನುವ ಸಂದೇಶ ಸಾರುವ ಕೆಲಸ ಆಗಬೇಕು ಎಂದು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ರಮೇಶ ಲಂಡನಕರ್ ಮಾತನಾಡುತ್ತಾ ಅಂಬೇಡ್ಕರ್ ಅವರನ್ನು ಕೇವಲ ಜಯಂತಿಯ ದಿನ ನೆನಪು ಮಾಡಿಕೊಳ್ಳಬಾರದು. ನಮ್ಮ ನಿತ್ಯದ ಜೀವನದಲ್ಲಿ ಅಂಬೇಡ್ಕರ್ ಹಾಸು ಹೊಕ್ಕಾಗಬೇಕು. ಅವರಿಂದಾಗಿಯೇ ನಾವಿಂದು ನೆಮ್ಮದಿಯ ಬದುಕು ನಡೆಸಲು ಸಾಧ್ಯವಾಗಿದೆ. ಹೀಗಾಗಿ ಎಲ್ಲರೂ ಅಂಬೇಡ್ಕರ್ ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ತಹಸಿಲ್ದಾರ ಸಂಜೀವಕುಮಾರ ದಾಸರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬಾಲಕ ಶ್ರೀನಿವಾಸ ರೆಡ್ಡಿ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ ಅವರ ಕುರಿತಾಗಿ ಮಾತನಾಡಿದರು. ನಂತರ ಹತ್ತನೇ ತರಗತಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ತಾಲೂಕಾಡಳಿತ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ರೇಣುಕಾ ರಾಜಶೇಖರ ಪಾಟೀಲ ಹಾಗೂ ತಾ.ಪಂ ಇಒ ರಮೇಶ ಸುಲ್ಪಿ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಸಮಾಜ ಕಲ್ಯಾಣ ಅಧಿಕಾರಿ ಚೇತನ ಗುರಿಕಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್.ದೇಶಮುಖ, ಸಿಪಿಐ ಜಗದೇವಪ್ಪ ಪಾಳಾ, ಪಿಎಸ್‌ಐ ವಿಶ್ವನಾಥ ಮುದರಡ್ಡಿ, ಡಾ.ರತ್ನಾಕರ ತೋರಣ, ಪಪ್ಪು ಪಟೇಲ್, ಜೆ.ಎಂ.ಕೊರಬು, ಮತೀನ್ ಪಟೇಲ್, ಸಿದ್ದಾರ್ಥ ಬಸರಿಗಿಡ, ಶ್ರೀಕಾಂತ ಚಿಂಚೋಳಿ, ದಯಾನಂದ ದೊಡ್ಮನಿ, ನಾಗೇಶ ಕೊಳ್ಳಿ, ರಾಜಕುಮಾರ ಬಡದಾಳ, ಭಗವಂತ ವಗ್ಗೆ, ವಿಜಯಕುಮಾರ ಕೆಂಗಲ್ ರೇವೂರ, ಜಮೀಲ್ ಗೌಂಡಿ, ಮಾಜೀದ್ ಪಟೇಲ್, ಭಾಗಣ್ಣ ಘತ್ತರಗಿ, ಸುಧಾಕರ ನಾಯಕ, ಕರಬಸಮ್ಮ, ಸರಕಾರಿ ನೌಕರ ಸಂಘದ ತಾಲೂಕಾಧ್ಯಕ್ಷ ರಾಜಕುಮಾರ ಗುಣಾರಿ ಕಸಾಪ ಅದ್ಯಕ್ಷ ಪ್ರಭು ಫುಲಾರಿ ಮುಖಂಡರಾದ ರಾಜೇಂದ್ರಕುಮಾರ ಪಾಟೀಲ ರೇವೂರ, ಶಿವಕುಮಾರ ನಾಟೀಕಾರ, ನಾಗಪ್ಪ ಆರೇಕರ್, ರಮೇಶ ಸುಲೇಕರ್, ರಾಜು ಆರೇಕರ್, ದೇವಿಂದ್ರ ಕಲಬಂಡೆ, ಗೌತಮ ಸಕ್ಕರಗಿ, ರವಿ ಗೌರ, ಮಹಾಂತೇಶ ಬಳೂಂಡಗಿ, ಶ್ರೀಮಂತ ಬಿರಾದಾರ, ಪುರಸಭೆ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಮುಖಂಡರಿದ್ದರು. ದಲಿತ ಹೋರಾಟಗಾರ ಮಹಾಂತೇಶ ಬಡದಾಳ ಕಾರ್ಯಕ್ರಮ ನಿರೂಪಿಸಿದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.