ಸರಕಾರಿ ಶಾಲೆಗೆ ಸ್ಮಾರ್ಟ್ ಟಿವಿ ಕೊಡುಗೆ
ಇಂಡಿ: ತಾಲೂಕಿನ ಭುಯ್ಯಾರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಥಣಿ ಪುರಸಭೆಯ ಮಾಜಿ ಅಧ್ಯಕ್ಷ ಶ್ರೀ ದಿಲೀಪ ಯಲ್ಲಪ್ಪ ಲೋಣಾರೆ ಅವರು 43 ಇಂಚಿನ ಸ್ಮಾರ್ಟ್
ಟಿವಿಯನ್ನು ದೇಣಿಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಸಿದಗೊಂಡ ಪೂಜಾರಿ, ಸದಸ್ಯರಾದ ತ್ರಿಮೂರ್ತಿ ಖೇಡಗಿ, ಭಾಗಣ್ಣ ತಳವಾರ,ಶಿವಯೋಗೆಪ್ಪ ಸಾಲೋಟಗಿ, ಮಲ್ಲು ನಾಟಿಕಾರ,ಶಿವಯೋಗೆಪ್ಪ ತಳವಾರ ಹಾಗೂ ಮುಖ್ಯ ಶಿಕ್ಷಕ ಸಿದ್ರಾಮ ರಾಥೋಡ, ಸಹಶಿಕ್ಷಕರಾದ ಬಾಣಪ್ಪ ಪೂಜಾರಿ,ಶಿವಲಿಂಗಪ್ಪ ಕೆ ಎನ್, ಅಜೇಯ ಲೋಣಾರೆ, ರಾಹುಲ ಚವಾಣ, ಜಟ್ಟೆಪ್ಪ ನಾಟಿಕಾರ,ಶರಣಬಸು ತಳವಾರ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.