ಇಂಡಿಯಲ್ಲಿ ಉಚಿತ ಹೊಲಿಗೆ ಮತ್ತು ಕೌಶಲ್ಯ ತರಬೇತಿ : ಎಸ್ ಕೆ ಲಿಂಗದಳ್ಳಿ
ಇಂಡಿ : ಭಾರತ ಸರಕಾರದಿಂದ ನಿರುದ್ಯೋಗ ಯುವಕ-ಯುವತಿಯರಿಗೆ ವಿವಿಧ ಕ್ಷೇತ್ರದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಲಾಗುತ್ತಿದ್ದು, ಇಂಡಿ ಹಾಗೂ ವಿಜಯಪುರ ಪಟ್ಟಣದ ಎಸ್.ಕೆ. ಕಂಪ್ಯೂಟರ್ ತರಬೇತಿ ಕೇಂದ್ರ (S K Computer Institute) ದಲ್ಲಿ “ಸಮರ್ಥ”- ಜವಳಿ ವಲಯದ ಕೌಶಲ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಎಲ್ಲಾ ವರ್ಗದ ಯುವಕ ಮತ್ತು ಯುವತಿಯರಿಗೆ ಯಾಂತ್ರಿಕೃತ ಹೊಲಿಗೆ ಯಂತ್ರ ನಿರ್ವಹಣೆ ತರಬೇತಿ ಹಾಗೂ ವ್ಯಕ್ತಿತ್ವ ವಿಕಸನ ಕೌಶಲ್ಯ ತರಬೇತಿಗಳನ್ನು ಪ್ರಾರಂಭಿಸಲಾಗಿದೆ ಎಂದು ಎಸ್ ಕೆ ಲಿಂಗದಳ್ಳಿ ಅವರು ಹೇಳಿದರು.
ಇಂಡಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಎಸ್ ಕೆ ಲಿಂಗದಳ್ಳಿ ಎಸ್ ಕೆ ಕಂಪ್ಯೂಟರ್ ತರಬೇತಿ ಸಂಯುಕ್ತಾಶ್ರಯದಲ್ಲಿ 3 ತಿಂಗಳ ಕಾಲ ಉಚಿತ ಹೊಲಿಗೆ ತರಬೇತಿ ನೀಡಲಾಗುತ್ತದೆ. ಹಾಗೂ ತರಬೇತಿ ಮುಗಿದ ನಂತರ ಭಾರತ ಸರಕಾರದ ವತಿಯಿಂದ ಪ್ರಮಾಣ ಪತ್ರ ನೀಡುವುದರ ಜೊತೆಗೆ ಉದ್ಯೋಗ ಅವಕಾಶಗಳನ್ನು ನೀಡಲಾಗುವುದು. ಆಸಕ್ತ ಯುವಕ-ಯುವತಿಯರು ಕೂಡಲೆ ಹೆಸರು ನೊಂದಾಯಿಸಿ – ಕೊಳ್ಳಬೇಕು ಎಂದು ಹೇಳಿದರು.
ಪ್ರವೇಶ ಪಡೆಯಲು ಅವಶ್ಯಕ ದಾಖಲಾತಿಗಳು
- 18 ರಿಂದ 42 ವರ್ಷದ ಒಳಗಿನವರಿಗೆ ಮಾತ್ರ
- ಆಧಾರ ಕಾರ್ಡ
- 04 ಭಾವಚಿತ್ರಗಳು
- ಕನಿಷ್ಠ 7ನೇ ತರಗತಿ ತೇರ್ಗಡೆ ಹೊಂದಿರಬೇಕು
- 7ನೇ ತರಗತಿ ಅಥವಾ ಎಸ್.ಎಸ್.ಎಲ್.ಸಿ.ಅಂಕಪಟ್ಟಿ
- ಎಸ್.ಸಿ./ಎಸ್.ಟಿ.ಆಗಿದ್ದರೆ ಜಾತಿ ಪ್ರಮಾಣ ಪತ್ರ ಕಡ್ಡಾಯ
ವಿದ್ಯಾರ್ಥಿಗಳಿಗೆ ಸಿಗುವ ಸೌಲಭ್ಯಗಳು
- ಉಚಿತ ಹೋಳಿಗೆ ತರಬೇತಿ
- ಉಚಿತ ಸಮವಸ್ತ್ರ ಹಾಗೂ ಬ್ಯಾಗ್
- ಉಚಿತ ಪಠ್ಯ ಪುಸ್ತಕ ಹಾಗೂ ನೋಟ್ ಬುಕ್
- ಉಚಿತ ಹೋಳಿಗೆ ಸಾಮಗ್ರಿಗಳು
ಭಾರತದ ಸರ್ಕಾರದಿಂದ ಪ್ರಮಾಣ ಪತ್ರ (Certificate) ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಡಿಯಲ್ಲಿ ಅರ್ಜಿ ಸಲ್ಲಿಸಿ ಉಚಿತವಾಗಿ ಹೋಳಿಗೆ ಯಂತ್ರ ಪಡೆಯಬಹುದು ಎಂದು ತಿಳಿಸಿದರು.