ಇಂಡಿ : ವಿಷಮುಕ್ತ ಆಹಾರಕ್ಕಾಗಿ ನಿಂಬೆ ನಾಡಿನ ಇಂಡಿ ಪಟ್ಟಣದಲ್ಲಿ ಸಿರಿಧಾನ್ಯ ಕಾರ್ಯಕ್ರಮ ಏ -28 ರಂದು ಮಧ್ಯಾಹ್ನ 3 ಘಂಟೆಗೆ ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ರೈತ ಮೂರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.
ಪಟ್ಟಣದ ಶಾಂತೇಶ್ವರ ಮಂಗಲಕಾರ್ಯಾಲಯದಲ್ಲಿ ಭಾನುವಾರ ಕರೆದ ಸುದ್ದಗೊಷ್ಠಿ ಯಲ್ಲಿ ಮಾತಾನಾಡಿದ ಅವರು, ಸಾವಯವ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರಧಾನಿ ಮೋದಿ ಜಿ ಅವರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮಕ್ಕೆ ಕರೆ ನೀಡಿದ್ದಾರೆ. ಅದರಂತೆ ಗುಮ್ಮಟ ನಗರಿ ಜಿಲ್ಲೆಯ ಇಂಡಿ ಪಟ್ಟಣ ಧನಶೆಟ್ಟಿ ಕಾರ್ಯಾಲಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ರೈತ ಮೂರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಆಗಮಿಸಿ ಸರಕಾರ ರೂಪಿಸಿರುವ ರೈತ ಯೋಜನೆಗಳನ್ನು ಗಮನಕ್ಕೆ ತರುವುದು ಮತ್ತು ಮಂಡಿಸುವ ಕಾರ್ಯ ಮಾಡುತ್ತಾರೆ. ಅದರಂತೆ
ಜಿಲ್ಲೆಯ ಸಂಸದ ರಮೇಶ ಜಿಗಜಿಣಗಿ, ಪಕ್ಷದ ಜಿಲ್ಲಾಧ್ಯಕ್ಷ, ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರು, ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಿದರು. ಕಾರ್ಯಕರ್ತರು, ಅಭಿಮಾನಿಗಳು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಿರಿಧ್ಯಾನ್ಯ ಕಾರ್ಯಕ್ರಮಕ್ಕೆ ಮೆರುಗು ತರಬೇಕು ಎಂದರು.
ಈ ಸಂದರ್ಭದಲ್ಲಿ ರವಿಕಾಂತ್ ಬಗಲಿ, ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಶೀಲವಂತ ಉಮರಾಣಿ, ಹಣಮಂತ್ರಾಯಗೌಡ ಪಾಟೀಲ್, ಸಿದ್ದಲಿಂಗ ಹಂಜಗಿ, ಯಲ್ಲಪ್ಪ ಹದರಿ, ಸೋಮು ನಿಂಬರಗಿಮಠ, ರಾಜು ಕಾಡೆ, ರಜನಿಕಾಂತ್ ಕಲ್ಲೂರ, ರವಿ ನಾಯ್ಕೊಡಿ, ಆರ್ ಡಿ ಪಾಟೀಲ್, ಎಸ್ ಎಸ್ ರೂಗಿಮಠ, ದತ್ತಾ ಬಂಡೆನವರ, ಮಹೇಶ ಕುಂಬಾರ, ವಿನೋದ ಚಾಂದಕೋಟಿ, ಭೀಮಾಶಂಕರ ಆಳೂರ, ಸುನಂದಾ ಗಿರಣಿವಡ್ಡರ್ ಉಪಸ್ಥಿತರು.