ಸಿರಿಗನ್ನಡ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಸ್.ಎಸ್.ತಳವಾರ ಗೆ ಸನ್ಮಾನ…
ಸಿಂದಗಿ : ಶಿಕ್ಷಕರಾದವರು ಜವಾಬ್ದಾರಿ ಅರಿತುಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಈ ದೇಶ ಉದ್ಧಾರವಾಗುತ್ತದೆ. ಆ ದಿಶೆಯಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ ಎಂದು ಶಾಸಕ ರಮೇಶ್ ಬೂಸನೂರ ಹೇಳಿದರು.
ಪಟ್ಟಣದ ಮಂದಾರ ಪ್ರತಿಷ್ಠಾನ ಎಸಿ,ಎಸ್ಟಿ ನೌಕರರ ಅನುದಾನಿತ ಮತ್ತು ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘಗಳ ಒಕ್ಕೂಟ ಸಹಯೋಗ ದಲ್ಲಿ ಶಿಕ್ಷಕರ ದಿನೋತ್ಸವ ಹಾಗೂ ಸಿರಿಗನ್ನಡ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸುಮಾರು ೩೫ ಜನರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಅದರಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಕೊರವಾರ ದಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸಾಯಬಣ್ಣ ಶಿವಪ್ಪ ತಳವಾರ ಇವರು ಕೂಡಾ ಪ್ರಶಸ್ತಿ ಬಾಜನರು.
ಇದಕ್ಕೆ ಶಾಲೆಯ ಮುಖ್ಯ ಗುರುಗಳು ಹಾಗೂ ಶಿಕ್ಷಕರು ಸಿಬ್ಬಂದಿ ವರ್ಗ ಹರ್ಷ ವ್ಯಕ್ತ ಪಡಿಸಿ ಶುಭಾಶಯ ಕೊರಿದ್ದಾರೆ.