ವಿಜಯಪುರದಿಂದ ಸಿಂಧಗಿಗೂ ಹಿಜಾಬ್-ಕೇಸರಿ ಶಾಲು ಸಂಘರ್ಷ ವಿಸ್ತರಿಸಿದ್ದು, ಕಾಲೇಜಿಗೆ ವಿದ್ಯಾರ್ಥಿಗಳು ಹಿಜಾಬ್ ವಿರೋಧಿಸಿ ಕೇಸರಿ ಶಾಲು ಧರಿಸಿ ಬಂದಿದ್ದಾರೆ.
ಸಿಂದಗಿಯ ಆರ್.ಡಿ ಪಾಟೀಲ್ ಕಾಲೇಜಿಗೆ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಎಂಟ್ರಿ ಕೊಟ್ಟಿದ್ದಾರೆ. ಹಿಜಾಬ್ ವಿರೋಧಿಸಿ ಕೇಸರಿ ಶಾಲು ಧರಿಸಿದ್ದಾರೆ. ಉಪನ್ಯಾಸಕರು ಕೇಸರಿ ಶಾಲು ಧರಿಸಿ ಬಂದವರಿಗೆ ಕಾಲೇಜು ಗೇಟ್ನ ಒಳಗೆ ಬಿಡುತ್ತಿಲ್ಲ. ಕಾಲೇಜು ಆಡಳಿತ ಮಂಡಳಿಯವರು ವಿದ್ಯಾರ್ಥಿಗಳಿಗೆ ತಿಳಿ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು ಮಾತ್ರ ಉಪನ್ಯಾಸಕರ ಮಾತಿಗೂ ಕ್ಯಾರೇ ಎನ್ನದೇ ಹಿಜಾಬ್ ಧರಿಸಿ ಕ್ಲಾಸಿಗೆ ಬರೋದು ನಿಲ್ಲೋವರೆಗೂ ನಾವು ಹೀಗೇ ಬರುತ್ತೇವೆ ಎಂದು
ಕಾಲೇಜು ಆಡಳಿತ ಮಂಡಳಿ ಮುಂದೆ ಹಠ ಹಿಡಿದಿದ್ದಾರೆ. ಜಿಲ್ಲೆಯ ಇಂಡಿ, ಬಸವನ ಬಾಗೇವಾಡಿ, ನಿಡಗುಂದಿಯಲ್ಲೂ ನಿನ್ನೆ ವಿವಾದ ನಡೆದಿತ್ತು. ಇದೀಗ ಸಿಂದಗಿಯಲ್ಲಿ ಹಿಜಾಬ್ ವರ್ಸಸ್ ಕೇಸರಿ ಸಂಘರ್ಷ ಮುಂದುವರೆದಿದೆ.