ಸಿಂದಗಿ ಮತಕ್ಷೇತ್ರವನ್ನು ತೀರುಗಿ ನೋಡುವ ಹಾಗೆ ಮಾಡುವೆ : ಶಾಸಕ ಮನಗೂಳಿ
ಇಂಡಿ : ಸಿಂದಗಿ ಮತಕ್ಷೇತ್ರದ ಅಭಿವೃದ್ದಿ ದೃಷ್ಠಿಕೋನದಿಂದ ಕೇಲಸಗಳನ್ನು ಮಾಡುತ್ತಾ ಬಂದಿದ್ದೆನೆ. ಅದರಂತೆ ಈ ಭಾರಿ ರಸ್ತೆಗಳ ಸುಧಾರಣೆಗೆ ಹೆಚ್ಚನ ಒತ್ತು ನೀಡಲಾಗಿದೆ ಕೇವಲ ಅಧಿಕಾರಕ್ಕೆ ಬಂದು ೨೦ತಿಂಗಳಲ್ಲಿ ಸಿಂದಗಿ ಮತಕ್ಷೇತ್ರ ತೀರುಗಿ ನೋಡುವ ಹಾಗೆ ಕೇಲಸ ಮಾಡುತ್ತಿದ್ದೆನೆ ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಹೇಳಿದರು.
ಸೋಮವಾರ ಗ್ರಾಮದ ಗಂಗನಳ್ಳಿ ಡಾಂಬರ ರಸ್ತೆಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು ದೇವರ ಹಿಪ್ಪರಗಿ ಮುಖ್ಯರಸ್ತೆಯಿಂದ ಅವರಾದಿ ಅವರ ಮನೆಯ ರಸ್ತೆ ೨೦ಲಕ್ಷ, ರಾಣ ಚನ್ನಮ್ಮ ಕಾಲೂನಿಯಲ್ಲಿ ೫೦ಲಕ್ಷ ಸಿಸಿ ರಸ್ತೆ ನಿರ್ಮಿಸಲಾಗಿದೆ. ಗವಿಸಿದ್ದೇಶ್ವರ ದೇವಾಲಯಕ್ಕೆ ೧೦ಲಕ್ಷ, ಜೋತಿಬಾಪುಲೆ ಸಮುದಾಯ ಭವನಕ್ಕೆ ೧೦ಲಕ್ಷ, ಹಣಮಂತ ದೇವರ ದೇವಾಲಯಕ್ಕೆ ೧೫ಲಕ್ಷ, ಬಸವೇಶ್ವರ ಶಿಕ್ಷಣ ಸಂಸ್ಥೆಗೆ ೫ಲಕ್ಷ, ಮಲ್ಲಿಕಾರ್ಜುನ ದೇವಸ್ಥಾನಕ್ಕೆ ೧೦ಲಕ್ಷ, ವಿಶ್ವಕರ್ಮ ಸಮಾಜದ ಚಿತ್ತಾಗಾರಕ್ಕೆ ೫ಲಕ್ಷ ರೂಗಳನ್ನು ನೀಡಲಾಗಿದೆ ಗ್ರಾಮದ ಬಹುದಿನಗಳ ಬೇಡಿಕೆಯಾದ ಮಹಿಳಾ ವಸತಿ ನೀಲಯವು ೫ಕೋಟಿ ರೂಗಳಲ್ಲಿ ಸುಂದರ ಕಟ್ಟqವÀನ್ನು ನಿರ್ಮಿಸಲಾಗುವದು. ಮತ್ತು ಬಸ್ ನಿಲ್ದಾಣದ ಭೂಮಿ ಪೂಜೆ ಶೀಘ್ರದಲ್ಲಿ ನೇರವೇರಿಸಲಾಗುವದು. ಇಷ್ಟು ಅನುದಾನವನ್ನು ನಮ್ಮ ಸರಕಾರದಲ್ಲಿ ಸಿಗುತ್ತಿದೆ ಆದರೂ ವಿರೋದಿಗಳು ಸರಕಾರದಲ್ಲಿ ಹಣ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಸಿದ್ದರಾಮಯ್ಯನವರು ಆರ್ಥಿಕ ತಜ್ಞರಾಗಿದ್ದಾರೆ. ಹಣ ಹೇಗೆ ಕುಡಿಸಬೇಕು ಬಡವರಿಗಾಗಿ ಹೇಗೆ ಖರ್ಚು ಮಾಡಬೇಕು ಎನ್ನುವದನ್ನು ಅರಿತ್ತಿದ್ದಾರೆ ಎಂದರು.
ಮಲಕಪ್ಪ ಹೂರ್ತಿ ಮಾತನಾಡಿ ಕ್ಷೇತ್ರದಲ್ಲಿ ಬಡವರ ದೀನದಲಿತರ ಪರವಾಗಿ ಚಿಂತನೆ ಮತ್ತು ದೂರದೃಷ್ಠಿಯುಳ್ಳ ವ್ಯಕ್ತಿ ಯಾರಾದರೂ ಇದ್ದರೆ ಅದು ಸಿಂದಗಿ ಶಾಸಕ ಅಶೋಕ ಮನಗೂಳಿ ಮಾತ್ರ ಬಡವರ ಕಷ್ಟಗಳ ಹತ್ತಿರದಿಂದ ಕಂಡಿರುವ ಅವರಿಂದ ಕ್ಷೇತ್ರÀ ಸಮೃದ್ಧವಾಗಿಲಿದೆ. ಈ ಭಾಗದ ಅನೇಕ ಗ್ರಾಮಗಳ ಸಮಸೆಗಳ ಅರಿವು ಅವರಿಗೆ ಇದೆ. ಈ ಭಾಗದ ನೀರಾವರಿ ಕ್ಷೇತ್ರಕ್ಕೆ ಆದ್ಯತೆ ನೀಡಿರುವುದರಿಂದಲೇ ಇಂದು ಈ ಭಾಗ ಸಂಪೂಣ ಹಸಿರು ಆಗಿದೆ. ಇದರಿಂದ ಬಹು ಸಂಖ್ಯಾತ ರೈತರಿಗೆ ಅನುಕೂಲವಾಗಿದೆ.ಎಲ್ಲಾ ಸಮುದಾಯದ ಪ್ರೀತಿಗೆ ಪಾತ್ರರಾಗಿ ಕ್ಷೇತ್ರದಲ್ಲಿ ಪ್ರಾಮಾಣ ಕವಾಗಿ ಅಭಿವೃದ್ಧಿ ಕೆಲಸ ಮಾಡಿಲಿದಾರೆ ಎಂದರು.
ಕಾAಗ್ರೇಸ್ ಮುಖಂಡರಾದ ರವಿಕುಮಾರ ಚವ್ಹಾಣ, ಅಪ್ಪಣ್ಣ ಕಲ್ಲೂರ, ರಾಚಪ್ಪ ಗಳೇದ, ಗ್ರಾಪಂ ಅಧ್ಯಕ್ಷರಾದ ಆಸ್ಮಾ ರಜಾಕಸಾಬ ಚಿಕ್ಕಗಸಿ, ಸಿದ್ದಗೊಂಡ ಹಿರೇಕುರಬರ, ರಾಮಚಂದ್ರ ದೊಡಮನಿ, ಪರಸು ಬೀಸನಾಳ, ಸಿದ್ದು ಹತ್ತಳಿ, ಶ್ರೀಧರ ಅವಟಿ, ಗಂಗಾರಾಮ ಹಜೇರಿ, ರವಿ ನಡಗಡ್ಡಿ, ಮಡೆಪ್ಪ ಕೂಗನೂರ, ಸಿದ್ದು ಬೂದಿಹಾಳ, ಚಂದ್ರಾಮ ಮೂಲಿಮನಿ, ಮಾದೇವ ಮೂಲಿಮನಿ, ಮಹ್ಮದ ಧಡೆದ, ಬಸವರಾಜ ಅವಟಿ, ರಾಯಗೋಂಡ ನಾಟೀಕಾರ, ಮಹ್ಮದ ವಾಲಿಕಾರ, ಕಾಂತನಗೌಡ ಪಾಟೀಲ, ಮಲ್ಲನಗೌಡ ಬಿರಾದಾರ, ಶಾಂತಪ್ಪ ಹಂಚನಾಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.