ಒನಕೆ ಓಬವ್ವ ಹಾಗೂ ಕನಕದಾಸ ಜಯಂತಿ ಸರಳ ಮತ್ತು ಸಾಂಕೇತಿಕ ಆಚರಣೆ : ಧನಪಾಲಶೆಟ್ಟಿ
ಇಂಡಿ : ನವೆಂಬರ್ 11ರಂದು ನಡೆಯುವ ವೀರವನಿತೆ ಒನಕೆ ಓಬವ್ವ ಜಯಂತಿ ಹಾಗೂ ನ- 18 ರಂದು ನಡೆಯುವ ಕನಕದಾಸ ಜಯಂತಿ ಪ್ರತಿ ವರ್ಷದಂತೆ ಈ ವರ್ಷವು ಸರಳ ಮತ್ತು ಸಾಂಕೇತಿಕ ಆಚರಿಸೋಣ ಎಂದು ಗ್ರೇಡ್ 2 ತಹಶಿಲ್ದಾರ ಧನಪಾಲಶೆಟ್ಟಿ ದೇವೂರ ಹೇಳಿದರು.
ಗುರುವಾರ ವೀರವನಿತೆ ಒನಕೆ ಓಬವ್ವ ಹಾಗೂ ಕನಕದಾಸ ಜಯಂತಿ ಅಂಗವಾಗಿ ತಾಲ್ಲೂಕು ಆಡಳಿತ ಸಭಾಭವನದಲ್ಲಿ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
11 ಘಂಟೆಗೆ ನಿಗದಿಯಾಗಿದ್ದ ಪೂರ್ವಭಾವಿಸಭೆ 11:30 ಕ್ಕೆ ಪ್ರಾರಂಭವಾಯಿತು. ಇನ್ನೂ ಸಭೆ ವಿಳಂಭವಾದ ಹಿನ್ನಲೆಯಲ್ಲಿ ಆಗಮಿಸಿದ್ದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಬೇಜಾರಾದರು. ಅದಲ್ಲದೇ ಪುರಸಭೆ ಮುಖ್ಯ ಅಧಿಕಾರಿ ಸೇರಿದಂತೆ ಅನೇಕ ತಾಲ್ಲೂಕು ಮಟ್ಟದ ಅಧಿಕಾರಿಗಳು ಗೈರುಯಾಗಿದ್ದು ಕಂಡಿದ್ದರಿಂದ ಅಧಿಕಾರಿಗಳ ವಿರುದ್ಧ ಗರಂ ಯಾದರು.
ಇನ್ನೂ ನವೆಂಬರ್ 11 ಹಾಗೂ 18 ರಂದು ಬೆಳಿಗ್ಗೆ 10:30 ತಾಲೂಕು ಆಡಳಿತ ಕಛೇರಿ ಸಭಾ ಭವನದಲ್ಲಿ ಒನಕೆ ಓಬವ್ವ ಹಾಗೂ ಕನಕದಾಸರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಪುಷ್ಪಾರ್ಚನೆ ಮಾಡಲಾಗುತ್ತದೆ. ಅದಕ್ಕಿಂತ ಮುಂಚೆ ಶಾಲಾ-ಕಾಲೇಜು, ಅಂಗನವಾಡಿ ಕೇಂದ್ರಗಳಲ್ಲಿ, ಸಂಘ-ಸಂಸ್ಥೆ ಹಾಗೂ ಎಲ್ಲಾ ಸರಕಾರಿ ಕಛೇರಿಗಳಲ್ಲಿ ಬೆಳಿಗ್ಗೆ 9:30 ಘಂಟೆಯೊಳಗಾಗಿ ಪೂಜೆ ಸಲ್ಲಿಸಿ ತಾಲ್ಲೂಕು ಆಡಳಿತ ವತಿಯಿಂತ ಜರುಗುವ ಓನಕ್ಕೆ ಒಬ್ಬವ ಹಾಗೂ ಕನಕದಾಸರ ಜಯಂತಿಯಲ್ಲಿ ಎಲ್ಲಾ ತಾಲೂಕ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿರಲು ಸೂಚಿಸಿದರು. ಇನ್ನೂ ಜಯಂತಿ ಪೂರ್ವಭಾವಿಯಾಗಿ ನಗರದ ಪ್ರಮುಖ ರಸ್ತೆಗಳು ಹಾಗೂ ವೃತಗಳು ಸ್ವಚ್ಚತಾಗೊಳಿಸಿ ಅಲಾಂಕಾರಿತಗೊಳಿಬೇಕು ಎಂದು ತಿಳಿಸಿದರು.
ಒಟ್ಟಾರೆಯಾಗಿ ಸರಕಾರದ ಮಾರ್ಗಸೂಚಿಯಂತೆ ಎಲ್ಲಿಯೂ ಲೋಪವಾದವಾಗದಂತೆ ನೋಡಿಕೊಂಡು ಅರ್ಥಪೂರ್ಣ ಆಚರಣೆ ಮಾಡಬೇಕು ಎಂದು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಶಿರಸ್ತೆದಾರ ಬಿ.ಎ ರಾವೂರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.