ಲಿಂಗಸೂಗೂರು: ಸಿಡಿಲು ಬಡಿದು ವ್ಯಕ್ತಿಯೋರ್ವ ಹಾಗೂ ಕುರಿ, ಮೇಕೆ ಅಸುನೀಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಬನ್ನಿಗೋಳ ಗ್ರಾಮದಲ್ಲಿ ನಡೆದಿದೆ. ಸಿಡಿಲು ಬಡಿದು ರಾಮಣ್ಣ ಪೂಜಾರಿ (28) ಸಾವನ್ನಪ್ಪಿದ್ದಾನೆ. ಅಲ್ಲದೇ, ಜಮೀನನಲ್ಲಿ ಕುರಿ ಮೇಯಿಸುವ ವೇಳೆಯಲ್ಲಿ ಸಿಡಿಲು ಬಡಿದು ರಾಮಣ್ಣನ ಜೊತೆಗೆ ಒಂದು ಕುರಿ, ಒಂದು ಮೇಕೆ ಕೂಡಾ ಅಸುನೀಗಿವೆ. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.