ಲಿಂಗಸೂಗೂರು: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದೇನೆಂದು ನನ್ನನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎನ್ನುವ ವಿಷಯವನ್ನು ನಾನು ತಿಳಿದುಕೊಂಡಿದ್ದೇನೆ ಎಂದು ಪುರಸಭೆ ಸದಸ್ಯ ಎಸ್.ಆರ್.ರಸೂಲ್ ಹೇಳಿದರು.
ಮುದಗಲ್ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ನಾನು 2020 ನವೆಂಬರ್ ನಲ್ಲಿ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ. ನನಗೂ ಜೆಡಿಎಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲದೇ ಸ್ವತಂತ್ರವಾಗಿದ್ದೇನೆ. 2018 ರಲ್ಲಿ ಶಂಬಣ್ಣ ಪೂಲಭಾವಿ ಎನ್ನುವವರು ಅಧ್ಯಕ್ಷರಿದ್ದರು. ಅವರನ್ನು ಯಾವುದೇ ಕಾರಣವಿಲ್ಲದೆ ಜೆಡಿಎಸ್ ಪಕ್ಷದಿಂದ ವಜಾಗೊಳಿಸಿ ಅವಮಾನ ಮಾಡಿದರು.
ಅಲ್ಲದೆ ಸ್ವಂತ ಹಣದಲ್ಲಿ ಪಕ್ಷ ಸಂಘಟನೆ ಮಾಡಿದ ನಾಗಭೂಷಣ್ ಅವರನ್ನು ಏಕಾಏಕಿ ಪಕ್ಷದಿಂದ ತೆಗೆದು ಲಿಂಗಾಯತ ಸಮಾಜಕ್ಕೆ ಅವಮಾನ ಮಾಡಿದ್ದಾರೆ.
ಜೆಡಿಎಸ್ನ್ ನಿಯೋಜಿತ ಅಭ್ಯರ್ಥಿ ಸಿದ್ದು ಬಂಡಿ ಹಾಗೂ ತಾಲೂಕಾಧ್ಯಕ್ಷ ಬಸವರಾಜ ಮಾಕಾಪೂರ ಅವರಿಗೆ ಬುದ್ಧಿಭ್ರಮಣೆಯಾಗಿದೆ. ಅವರನ್ನು ಹುಚ್ಚಾಸ್ಪತ್ರೆಗೆ ಕಳಿಸಬೇಕೆಂದು ಆಕ್ರೋಶ ಹೊರಹಾಕಿದರು.
ಇನ್ನು ತಾಲೂಕಿನ ಜನತೆ ಎಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಿದ್ದಾರೆೆ. ಯಾರು ಹೇಗಿದ್ದಾರೆಂದು ಜನತೆಗೆ ಗೊತ್ತಿದೆ ಎಂದರು.