ಸಿಧ್ಧಗಂಗಾ ಮಠ ರಾಜ್ಯದಲ್ಲಿಯೇ ಲಕ್ಷಾಂತರ ಮಕ್ಕಳಿಗೆ ಉಚಿತ ವಿದ್ಯಾದಾನ ಕೊಟ್ಟಿದೆ : ಅಭೀನವ ಮುರಘೆಂದ್ರ
ಇಂಡಿ: ತಾಲೂಕಿನ ಮಸಳಿ ಬಿ.ಕೆ ಗ್ರಾಮದ ಬಸವೇಶ್ವರ
ವೃತ್ತದಲ್ಲಿ ಡಾ. ಶಿವಕುಮಾರ ಮಹಾಶಿವಯೋಗಿಗಳ
5 ನೇ ವಷದ ಪುಣ್ಯಸ್ಮರಣೆ ಕಾರ್ಯಕ್ರಮ ಆಚರಿಸಲಾಯಿತು.
ಕಾರ್ಯಕ್ರಮದ ಪಾವನ ಸಾನಿಧ್ಯವಹಿಸಿದ್ದ ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘೆಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ಸಿಧ್ಧಗಂಗಾ ಮಠ ರಾಜ್ಯದಲ್ಲಿಯೇ ಲಕ್ಷಾಂತರ ಮಕ್ಕಳಿಗೆ ಉಚಿತ ವಿದ್ಯಾದಾನ, ಅನ್ನದಾನ ಮಾಡಿದ ಮಠವಾಗಿದೆ. ಆ ಮಠದಲ್ಲಿ ಕೇವಲ ಶಿಕ್ಷಣ ಮಾತ್ರ ಸಿಗಲ್ಲ, ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು, ಸಮಾಜದಲ್ಲಿ ಬದುಕುವ ಬಗೆ, ಸಂಸ್ಕಾರ ಇವೆಲ್ಲವನ್ನೂ ನೀಡಲಾಗುತ್ತದೆ. ಗೀಗಾಗಿ
ಅಲ್ಲಿ ಕಲಿತ ಮಕ್ಕಳು ಸಂಸ್ಕಾರವಂತರಾಗಿ ಬಾಳಿ
ಬದುಕುತ್ತಾರೆ. ಅಂತಹ ಮಠದ ಲಿಂಗೈಕ್ಯ ಶ್ರೀಗಳ ಪುಣ್ಯಸ್ಮರಣೆ ಆಚರಿಸುತ್ತಿರುವುದು ನಿಮ್ಮ ಸೌಭಾಗ್ಯವೇ ಸರಿ ಎಂದರು. ಸಿದ್ದಗಂಗಾ ಮಠದಲ್ಲಿ ಕಲಿತ ವಿದ್ಯಾರ್ಥಿ
ಹಣಮಂತ್ರಾಯ ಹೊನ್ನಳ್ಳಿ ಅವರಿಗೆ ಶ್ರೀಗಳು ಸತ್ಕರಿಸಿದರು.
ಈ ಸಂದರ್ಭದಲ್ಲಿ ಮಲ್ಲನಗೌಡ ಪಾಟೀಲ, ಸಂಜು ಸೋಲಾಪೂರ, ಶಿವಾನಂದ ಕ್ಷತ್ರಿ, ಶಂಜು ರಜಪೂರ, ಚಂದು ಅಗಸರ, ಬೋಜೆಪ್ಪ ಚಾಂದಕವಠೆ, ಭೀಮಾಶಂಕರ ಮೇತ್ರಿ ಗುರುರಾಜಗೌಡ ಲೋಣಿ, ಅದೃಷ್ಯಪ್ಪ ವಾಲಿ, ರವಿ/ರಾಯಜಿ, ಬಸವರಾಜ ಪಟ್ಟಣಶೆಟ್ಟಿ, ಸಿದ್ದು ಸೋಲಾಪೂರ, ಮತ್ತಿತರರಿದ್ದರು.
ಇಂಡಿ: ತಾಲೂಕಿನ ಮಸಳಿ ಬಿ.ಕೆ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಡಾ. ಶಿವಕುಮಾರ ಮಹಾಶಿವಯೋಗಿಗಳ 5 ನೇ ವಷದ ಪುಣ್ಯಸ್ಮರಣೆ ಕಾರ್ಯಕ್ರಮ ಆಚರಿಸಲಾಯಿತು.