ಇಂಡಿ ತಾಲ್ಲೂಕು ಪೋಟೊ ಮತ್ತು ವಿಡಿಯೋ ಗ್ರಾಫಿಕ್ ಸಂಘದ ಆಶ್ರಯದಲ್ಲಿ ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮಿಜಿಗಳ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮದಲ್ಲಿ ಹೇಳಿದರು. ಇಂತಹ ಶರಣರನ್ನು ಕಳೆದುಕೊಂಡ ಮನುಕುಲ ಬಡವಾಗಿದೆ. ಶ್ರೀ ನುಡಿದ ಮಾತುಗಳು ಜನರಿಗೆ ಆಮ್ಲಜಕ ಹಾಗೆ ಕೆಲಸ ಮಾಡುತ್ತಿತ್ತು. ಶ್ರೀಗಳ ಪ್ರವಚನ ಬಡವರಲ್ಲಿ ಶಕ್ತಿ ತುಂಬಿ ಆತ್ಮಸ್ಥೈರ್ಯ ಹೆಚ್ಚುಸುತ್ತಿತ್ತು. ಎಲ್ಲಾ ಭಾಷೆಗಳನ್ನು ಬಲ್ಲ ಸಿದ್ದೇಶ್ವರರು ಸರಳ ಜೀವಿಗಳಾಗಿದ್ದರು. ಶ್ರೀ ಅಗಲಿಕೆ ತುಂಬಾ ನೋವನ್ನುಂಟುಮಾಡಿದೆ ಎಂದರು.
ಇದೇ ಸಂದರ್ಭದಲ್ಲಿ ಸಾಯಿ ಸಮಿತಿಯ ಅಧ್ಯಕ್ಷ ಅಂಬರೀಶ್ ಕೊರಳ್ಳಿ, ಅಧ್ಯಕ್ಷ ಸಿದ್ದು ಕುದರೆ, ಶಿವಾನಂದ ಜೇವೂರ, ಪ್ರವೀಣ ಮಠ, ಪ್ರವೀಣ ಕೊರಳ್ಳಿ, ಇಸಾಕ ಲಾಳಸಂಗಿ, ಅಶೋಕ ಜಾಧವ, ಸಮೀರ ಶೇಖ, ಮಲ್ಲಿಕಾರ್ಜುನ ಮಂದರೂಪ, ಸಂತೋಷ ಇಂಗಳಗಿ, ಭೀಮಾಶಂಕರ ಗೋಳ್ಳಗಿ, ಭೀಮಾಶಂಕರ ಪಾಟೀಲ ಇನ್ನೂ ಅನೇಕರು ಉಪಸ್ಥಿತರಿದ್ದರು.