ಧರ್ಮ ಜಾತಿಗೆ ಜಾಗವಿಲ್ಲದ ಸಿದ್ದೇಶ್ವರ ಶ್ರೀಗಳ ಜ್ಞಾನಯೋಗಾಶ್ರಮ : ಅದೃಶ್ಯ ಕಾಡಸಿದ್ದೇಶ್ವರ
ಶ್ರೀಗಳು
ಇಂಡಿ: ಧರ್ಮ, ಜಾತಿಗೆ ಜಾಗವಿಲ್ಲದ ಮಾನವಕುಲ – ಕೋಟಿಗೆ ಉದ್ದಾರ ಮಾಡುವ ಏಕೈಕ ಸಿದ್ದೇಶ್ವರ ಮಹಾಸ್ವಾಮಿಗಳ ಆಶ್ರಮ. ನಡೆದಾಡುವ ದೇವರೆಂದೇ ಖ್ಯಾತಿ ಪಡೆದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಪ್ರಕೃತಿಯಲ್ಲಿ, ಚರಾಚರ ವಸ್ತುಗಳಲ್ಲಿ ದೇವರನ್ನು ಕಂಡ
ಶತಮಾನದ ಮಹಾನ್ ಸಂತರಾಗಿದ್ದರು. ಅವರು ಕೃಷಿ,
ಉದ್ಯೋಗ, ಶಿಕ್ಷಣ, ನೀರಾವರಿ ಪರಿಸರದ ಬಗ್ಗೆ ತಮ್ಮ
ಪ್ರವಚನ ಮೂಲಕ ಚಿಂತನೆ ಮಾಡುವ ಮೂಲಕ
ಭಾರತೀಯ ಸಂಸ್ಕøತಿ, ಪರಂಪರೆ ಉಳಿಸಿ ಬೆಳೆಸಿದ ಸಿದ್ಧಾಂತ ಶಿಖಾಮಣಿ ಎಂದು ಕನೇರಿ ಮಠದ ಅದೃಶ್ಯ
ಕಾಡಸಿದ್ದೇಶ್ವರ ಮಹಾಸ್ವಾಮಿಗಳು ನುಡಿದರು.
ಬುಧವಾರ ತಾಲ್ಲೂಕಿನ ಅರ್ಥಗಾ ಗ್ರಾಮದ
ಷಣ್ಣುಖಾರೊಢ ಆಶ್ರಮದಲ್ಲಿ ಆಯೋಜಿಸಿದ್ದ
ಜ್ಞಾನಯೋಗಿ ಶ್ರೀ ಸಿದ್ದೇಶ್ವರರನೊರೆಂಟು ದಿನಗಳ
ಜಪಯಜ್ಞ ಹಾಗೂ ನೊರೆಂಟು ಸಾಧಕ
ಶಿರೋಮಣಿಗಳಿಂದ ನುಡಿನಮನ ಮಹಾ ಮಂಗಲೋತ್ಸವ ದಿವ್ಯಸಾನಿಧ್ಯ ವಹಿಸಿ ಅಶೀರ್ವಚನ
ನೀಡಿದರು.
ವಿಜಯಪುರದ ಜನತೆ ಹೃದಶ್ರೀಮಂತರು ಎನ್ನುವುದಕ್ಕೆ 1972ರಲ್ಲಿ ಭೀಕರ ಬರಗಾಲ ಬಿದ್ದಾಗ ಅಂದಿನ ಪ್ರಧಾನ ಮಂತ್ರಿಗೆ ಬಂಗಾರದಲ್ಲಿ ಕೂಡಿಸಿ ತುಲಾ ಭಾರ ಮಾಡಿದ ಜನತೆ. ಭಕ್ತಿಗೆ ಧಾನ ಧರ್ಮಕ್ಕೆ ಎತ್ತಿದ ಕೈ. ಅದ್ದಕ್ಕಾಗಿಯೇ ಅಪ್ಪಾಜೀಯವರು ಈ ಜಿಲ್ಲೆಯ ರಾಜಕೀಯ ನಾಯಕರುಗಳಿಗೆ ರೈತರ ನಾಡಿಮಿಡಿತ ಅರಿತು ನೀರಾವರಿ
ಬಗ್ಗೆ ಸದಾ ಮಾರ್ಗದರ್ಶನ ನೀಡುತ್ತಿದ್ದರು. ಭಾರತ
ಶೇಕಡಾ 95 ರಷ್ಟು ಕೃಷಿ ಪ್ರಧಾನ ದೇಶ. ಆದ್ದರಿಂದ
ನಮ್ಮ ದೇಶ ಕೃಷಿ ಸನಾತನ ಸಂಸ್ಕೃತಿ, ಆಚಾರ
ವಿಚಾರಗಳು ಮಾಯವಾಗದಂತೆ ಮಠಾಧೀಶರು
ಒಟ್ಟಾಗಿ ಜಾಗೃತಿಯಿಂದ ಕೆಲಸ ಮಾಡಿ ಎಂದು ಕಿವಿಮಾತು ಹೇಳುತ್ತಿದ್ದರು ಎಂದರು.
ಯಾವುದೇ ಧರ್ಮ ಜಾತಿ, ಕುಲ ಗೋತ್ರ ಎಂದಿಗೂ
ಇವರ ಹತ್ತಿರ ಸುಳಿಯಲ್ಲಿಲ್ಲ. ಜಾತಿ ಧರ್ಮಗಳಿಗೆ
ಜಾಗವೇ ಇರಲ್ಲಿಲ್ಲ, ಕಿಸೆ ಇಲ್ಲದೆ ಸರಳ ಬದುಕು
ಸಾಗಿಸುತ್ತಾ ಬಯಲ್ಲಲ್ಲಿ ಬಯಲಾದ ನಿರ್ಮರಹಿತ ಸಂತ.
ಇವರನ್ನು ಸ್ಮರಿಸಬೇಕಾದರೆ ಜಿಲ್ಲೆಯಲ್ಲಿ ರೈತಾಪಿ ವರ್ಗ
ತಮ್ಮ ಬದುವಿನ ಮೇಲೆ ಗಿಡಮರಗಳನ್ನು ಬೆಳೆಸಿ ಪಕ್ಷಿ
ಸಂಕುಲಗಳ ನೀನಾದದಲ್ಲಿ ಅಪ್ಪಾಜೀಯನ್ನು ಕಾಣಿ. ಪ್ರತಿ
ತಾಲ್ಲೂಕಿನಲ್ಲಿ ಪಾರ್ಕ ನಿರ್ಮಿಸಿ, ಗ್ರಾಮಕ್ಕೊಂದು
ಉದ್ಯಾನವನ ನಿರ್ಮಿಸಿ ಎಂದು ಸಲಹೆ ನೀಡಿದರು.
ಬಸವರಾಜಪಾಟೀಲ ಸೇಡಂ ಮಾತನಾಡಿ, ಸಿದ್ದೇಶ್ವರರ – ರಂತಹ ಶ್ರೇಷ್ಠ ದಾರ್ಶನಿಕ, ಅಧುನಿಕ ದೇವರನ್ನೇ ಪಡೆದಿರುವ ನಿಮ್ಮ ಜಿಲ್ಲೆಯ ಜನತೆ ಧನ್ಯರು. ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳ ಕುರಿತು ಕೆ.ಸಿ
ಶಿವಪ್ಪನವರು ರಚಿಸಿರುವ ಸಂತನೆಂದರೆ ಯಾರು
ಗೀತೆಯನ್ನು ಪ್ರತಿ ಮನೆ ಮನೆಗಳಲ್ಲಿ ಕೇಳಿ ನಿಮ್ಮ
ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಿ. ಇಂತಹ
ಮಹಾನ ದಾರ್ಶನಿಕರ ಪ್ರವಚನಗಳು ಸರಕಾರಗಳು
ಪ್ರಚಾರಪಡಿಸಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿದ್ದ ಜ್ಞಾನಯೋಗಾಶ್ರಮದ ಬಸವಲಿಂಗ
ಮಹಾಸ್ವಾಮೀಜಿ, ಈಶಪ್ರಸಾದ ಮಹಾಸ್ವಾಮಿಜೀ,
ಮರುಘೇಂದ್ರ ಮಹಾಸ್ವಾಮಿಗಳು. ಶಾಂತ ಗಂಗಾಧರ
ಜಗದ್ಗುರುಗಳು ಆಶೀರ್ವವಚನ ನೀಡಿದರು.
ಸಿದ್ದೇಶ್ವರರ ನುಡಿಗಳಿಂದ ಪ್ರೇರಿತರಾದ ಲಕ್ಷಾಂತರ
ಭಕ್ತರು ಇಂದು ಶಾಂತಿ, ಸಹನೆ, ಪ್ರೀತಿ, ಕರುಣೆ,
ವಿಶ್ವಾಸದ ಮೂಲಕ ಬದುಕು ಸಾಗಿಸುತ್ತಿದ್ದಾರೆ. ಇಡೀ
ಜಿಲ್ಲೆಯ ರಾಜಕಾರಣಿಗಳು ಅವರಿಂದ ಪ್ರೇರಿತರಾಗಿ ನೀರಾವರಿ ಸೇರಿದಂತೆ ಸಾಕಷ್ಟು ಅಭಿವೃದ್ದಿ ಕೆಲಸಗಳಿಗೆ ಶ್ರೀಗಳ ಸದಾಶಯವೇ ಕಾರಣ. ಸಾವಳಸಂಗ ಗುಡ್ಡ ಅತ್ಯೆಂತ ಎತ್ತರ ಪ್ರದೇಶ. ಈ ಭಾಗದಲ್ಲಿ ನೀರು ಬರುವುದೇ ? ಎಂದು ಪ್ರಶ್ನಿಸುತ್ತಿದ್ದರು. ಶ್ರೀಗಳ ಪಾದಸ್ಪರ್ಶದಿಂದ ಶ್ರೀರೇವಣಸಿದ್ದೇಶ್ವರ ಏತನೀರಾವರಿ ಯೋಜನೆಯಿಂದ ಇಡೀ ರೈತರ ಜಮೀನಿಗಳಿಗೆ ನೀರಾವರಿ ಆಗಲಿದೆ. ಪೂಜ್ಯರಿಗೆ ರೈತರ ಬಗ್ಗೆ ಕಳಕಳಿ ಇತ್ತು. ಈ ಭಾಗದಲ್ಲಿ ನೀರಾವರಿ ಮಾಡಿದರೆ ಕ್ಯಾಲಿಪೋರ್ನಿಯಾ ಆಗುತ್ತದೆ ಎನ್ನುತ್ತಿದ್ದರು.
ಶಾಸಕ ಯಶವಂತರಾಯಗೌಡ ಪಾಟೀಲ.
ಇಂದಿನ ದಿನಮಾನಗಳಲ್ಲಿ ನನ್ನಂತ ಕೆಳ
ಸಮುದಾಯದ ವ್ಯಕ್ತಿಯನ್ನು ಯೋಗಾಶ್ರಮದಲ್ಲಿ
ಕರೆದುಕೊಂಡು ಹೋಗಿ ತಮ್ಮ ಜೊತೆಗೆ ತಾವೆ ಸ್ವತ ಊಟ ಬಡಿಸಿದ ಮಹಾನ್ ಸಂತ ಶ್ರೀ ಸಿದ್ದೇಶ್ವರರು. ಇಂತಹವರು ಸಿಗುವುದು ಅಪರೂಪ. ನನ್ನ ದೃಷ್ಠಿಯಲ್ಲಿ ನಿಜ ದೇವರು ಶ್ರೀಸಿದ್ದೇಶ್ವರ ಮಹಾಸ್ವಾಮಿಗಳು. ಅವರ ಆದರ್ಶಗಳಿಂದ ಸಾಕಷ್ಟು ಜಿಲ್ಲೆಯಲ್ಲಿ ಕೆಲಸ ಮಾಡಿರುವೆ.
ಸಂಸದ ರಮೇಶ ಜಿಗಜಿಣಗಿ ವಿಜಯಪುರ
ಇಂಡಿ: ತಾಲ್ಲೂಕಿನ ಅರ್ಥಗಾ ಗ್ರಾಮದ ಷಣ್ಣುಖಾರೊಢ ಆಶ್ರಮದಲ್ಲಿ ಆಯೋಜಿಸಿದ್ದ ಜ್ಞಾನಯೋಗಿ ಶ್ರೀ ಸಿದ್ದೇಶ್ವರರನೊರೆಂಟು ದಿನಗಳ ಜಪಯಜ್ಞ ಹಾಗೂ ನೊರೆಂಟು ಸಾಧಕ ಶಿರೋಮಣಿಗಳಿಂದ ನುಡಿನಮನ ಮಹಾ ಮಂಗಲೋತ್ಸವ ದಿವ್ಯಸಾನಿಧ್ಯ ವಹಿಸಿ
ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಅಶೀರ್ವಚನ
ನೀಡಿದರು.
ಇಂಡಿ: ತಾಲ್ಲೂಕಿನ ಅರ್ಥಗಾ ಗ್ರಾಮದಲ್ಲಿ ಬುಧವಾರ
ಶ್ರೀಸಿದ್ದೇಶ್ವರ ಮಹಾಸ್ವಾಮಿಗಳ 108 ಜಪಯಜ್ಞ ಹಾಗೂ108 ಸಾಧಕರ ನುಡಿನಮನ ಕಾರ್ಯಕ್ರಮದ
ಮಹಾಮಂಗಲೋತ್ಸವ ಕಾರ್ಯಕ್ರಮದಲ್ಲಿ ಗಣ್ಯರು
ಪುಸ್ತಕ ಬಿಡುಗಡೆ ಮಾಡಿದರು.