ಹಿರೇಮಸಳಿ ಶರಣ ಬಸವೇಶ್ವರ ದೇವಾಲಯದಲ್ಲಿ ಸಿದ್ದೇಶ್ವರ ಶ್ರೀಗಳಿಗೆ ನುಡಿ ನಮನ ಕಾರ್ಯಕ್ರಮ ನೆರವೇರಿತು
ಇಂಡಿ : ನಡೆದಾಡುವ ದೇವರು, ಶತಮಾನದ ಸಂತ, ಸರಳತೆಯ ಸಾಕಾರ ಮೂರ್ತಿ ಎಂದೇ ಖ್ಯಾತರಾಗಿದ್ದ ಶ್ರೀ ಸಿದ್ದೇಶ್ವರ ಸ್ವಾಮಿಗಳ ನುಡಿನಮನ ಕಾರ್ಯಕ್ರಮ ತಾಲ್ಲೂಕಿನ ಹಿರೇಮಸಳಿ ಗ್ರಾಮದ ಶರಣ ಬಸವೇಶ್ವರ ದೇವಾಲಯದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಐ ಎಸ್ ಮಾಶ್ಯಾಳ ಮಾತನಾಡಿ, ಇಂಥ ಪುಣ್ಯವಂತರು ನಮ್ಮ ಜಿಲ್ಲೆಯಲ್ಲಿ ನಾವು ಕಂಡಿದ್ದು ಪುಣ್ಯವಂತರು. ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು
ಇನ್ನೂ ಉಪನ್ಯಾಸಕ ಶಿವಾನಂದ್ ವಾಲಿಕರ್ ಮಾತನಾಡಿದ ಅವರು, ಸಿದ್ದೇಶ್ವರ ಶ್ರೀಗಳು, ನಮ್ಮೂರಿಗೆ ಪಾದರ್ಪಣೆ ಮಾಡಿದ್ದು ನಾವೇ ಭಾಗ್ಯವಂತರು ,ಪುಣ್ಯವಂತರು ಎಂದರು. ಅದಲ್ಲದೇ ಅವರ ಆದರ್ಶ ಗುಣಗಳು ಮಕ್ಕಳಿಗೆ ಕಲಿಸಿ ನಾಡಿನ ಸಂಸ್ಕೃತಿಯಲ್ಲಿ ಆದರ್ಶ ದಲ್ಲಿ ಬಹುಮುಖ್ಯ ವಾದ ಪಾಲು ನಮ್ಮದಾಗಬೇಕಾಗಿದೆ ಎಂದರು. ಇತ್ತೀಚೆಗೆ ಪಿಎಚ್ ಡಿ ಪಡೆದ ಗ್ರಾಮದ ಯುವಕ ಇತ್ತೀಚಿಗೆ ಹನುಮಂತ್ ರಾಯ ಹೊನ್ನಳ್ಳಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಾಶಿರಾಯಗೌಡ ಪಾಟೀಲ್, ಅದೃಷ್ಠಪ ವಾಲಿ, ಹನುಮಂತರಾಯ ಮೇತ್ರಿ, ಅರವಿಂದ್ ಯಳಸಂಗಿ, ಬೊಜು ಚಂದ್ ಕೋಟೆ, ರವಿ ರಾಯಜಗಿ
ಶರಣು ಹತ್ತಿ, ಗುರುರಾಜ್ ಲೋಣಿ, ಅಶೋಕ್ ಮರಡಿ,
ಶಿವಾನಂದ ಕ್ಷತ್ರಿ, ಪ್ರಾರ್ಥನಾ ಕೋಚಿಂಗ್ ಕ್ಲಾಸಿನ ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು.